ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತವೆ. ಕೆಲವೊಂದು ತಮಾಷೆಯಾಗಿದ್ದರೆ, ಇನ್ನು ಕೆಲವು ನಮ್ಮನ್ನು ಹುಬ್ಬೇರಿಸುವಂತೆ ಮಾಡುತ್ತವೆ. ಇದೀಗ ಅಂತಹದ್ದೇ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹಲ್ ಚಲ್ ಎಬ್ಬಿಸಿದ್ದು, ಪೊಲೀಸರ ವರ್ತನೆಯ (Viral Video) ಬಗ್ಗೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೌದು, ರಾಜಸ್ಥಾನದ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಎನ್ನಲಾದ ಪ್ರಿಯಾಂಕಾ ಶೇಖಾವತ್ ಅವರು ನಡು ಹೆದ್ದಾರಿಯಲ್ಲೇ ಗುಂಪೊಂದರ ಜೊತೆ ಭರ್ಜರಿ ಸ್ಟೆಪ್ಸ್ ಹಾಕುವ ಮೂಲಕ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Viral Video – ಅಷ್ಟಕ್ಕೂ ಆಗಿದ್ದೇನು?
ವೈರಲ್ ಆಗಿರುವ ವಿಡಿಯೋದಲ್ಲಿ ಕಂಡುಬರುವಂತೆ, ಜನನಿಬಿಡ ಹೆದ್ದಾರಿಯ ಪಕ್ಕದಲ್ಲಿ ಮಿನಿ ಬಸ್ ಒಂದನ್ನು ನಿಲ್ಲಿಸಲಾಗಿದೆ. ದೊಡ್ಡ ಸ್ಪೀಕರ್‌ನಲ್ಲಿ ಬಾಲಿವುಡ್ ಹಾಡುಗಳನ್ನು ಹಾಕಿಕೊಂಡು, ರಸ್ತೆಯ ಮೇಲೆಯೇ ಜನರ ಗುಂಪೊಂದು ಕುಣಿದು ಕುಪ್ಪಳಿಸುತ್ತಿದೆ. ಈ ಗುಂಪಿನಲ್ಲಿ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಪ್ರಿಯಾಂಕಾ ಶೇಖಾವತ್ ಕೂಡ ಇದ್ದಾರೆ ಎನ್ನಲಾಗಿದೆ. ಅವರು ಕೇವಲ ಡ್ಯಾನ್ಸ್ ಮಾಡುವುದಲ್ಲದೆ, ಇತರರನ್ನು ಹುರಿದುಂಬಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವಾಹನ ಸಂಚಾರಕ್ಕೆ ಅಡ್ಡಿಯಾಗುವಂತೆ ಹೀಗೆ ನಡು ರಸ್ತೆಯಲ್ಲಿ ಕುಣಿಯುವುದು ಎಷ್ಟು ಸರಿ ಎಂಬುದು ಈಗ ಎದ್ದಿರುವ ಪ್ರಶ್ನೆ.
Viral Video – ನೆಟ್ಟಿಗರು ಫುಲ್ ಗರಂ!
ನಿಯಮ ಪಾಲಿಸಬೇಕಾದವರೇ ನಿಯಮ ಮುರಿದರೆ ಹೇಗೆ? ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. “ನೀವು ರಾಜಸ್ಥಾನ ಪೊಲೀಸರಾಗಿದ್ದರೆ, ಎಲ್ಲಿ ಬೇಕಾದರೂ ವಾಹನ ನಿಲ್ಲಿಸಿ ಡ್ಯಾನ್ಸ್ ಮಾಡಬಹುದು, ನಿಮ್ಮ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ. ಇದನ್ನೇ ಕಾನ್‌ಸ್ಟೆಬಲ್ ಪ್ರಿಯಾಂಕಾ ಶೇಖಾವತ್ ಮಾಡುತ್ತಿದ್ದಾರೆ” ಎಂದು ಬಳಕೆದಾರರೊಬ್ಬರು ವ್ಯಂಗ್ಯವಾಗಿ ಕಮೆಂಟ್ ಮಾಡಿದ್ದಾರೆ.
ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಬೇಕಾದ ಪೊಲೀಸರು, ಹೀಗೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದು ತಪ್ಪು ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಿ ಡ್ಯಾನ್ಸ್ (Viral Video) ಮಾಡುವುದು ಕೇವಲ ನಿಯಮ ಉಲ್ಲಂಘನೆ ಮಾತ್ರವಲ್ಲ, ಪ್ರಾಣಾಪಾಯಕ್ಕೂ ಕಾರಣವಾಗಬಹುದು ಎಂದು ಜನ ಎಚ್ಚರಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಅಧಿಕಾರಿಗಳು ಏನಂತಾರೆ?
ಸದ್ಯಕ್ಕೆ ಈ ವಿಡಿಯೋದಲ್ಲಿರುವುದು (Viral Video) ನಿಜವಾಗಿಯೂ ಪೊಲೀಸ್ ಕಾನ್‌ಸ್ಟೆಬಲ್ ಪ್ರಿಯಾಂಕಾ ಶೇಖಾವತ್ ಅವರೇನಾ? ಮತ್ತು ಈ ಘಟನೆ ನಡೆದಿದ್ದು ಎಲ್ಲಿ? ಎಂಬುದರ ಬಗ್ಗೆ ರಾಜಸ್ಥಾನ ಪೊಲೀಸ್ ಇಲಾಖೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೂ, ಕರ್ತವ್ಯದಲ್ಲಿ ಇಲ್ಲದಿದ್ದರೂ (Off-duty) ಪೊಲೀಸರು ಶಿಸ್ತು ಮತ್ತು ನಿಯಮಗಳನ್ನು ಪಾಲಿಸಬೇಕಲ್ಲವೇ ಎಂಬ ಚರ್ಚೆ ಜೋರಾಗಿದೆ. Read this also : ಬೆಂಕಿಯ ಜ್ವಾಲೆಯ ನಡುವೆಯೂ ಪ್ರಾಣದ ಹಂಗು ತೊರೆದು ನಾಯಿಗಳನ್ನು ರಕ್ಷಿಸಿದ ಮಹಿಳೆ! ರೋಚಕ ವಿಡಿಯೋ ವೈರಲ್..!
ಒಟ್ಟಿನಲ್ಲಿ, ಕಾನೂನು ರಕ್ಷಕರೆ ಕಾನೂನು ಭಕ್ಷಕರಾದರೆ ಹೇಗೆ ಎಂಬ ಪ್ರಶ್ನೆಗೆ ಈ ವಿಡಿಯೋ ಕಾರಣವಾಗಿದೆ. ಇದರ ಬಗ್ಗೆ ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

