ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೀಕೆಂಡ್ ಪಾರ್ಟಿಯೊಂದು ದುರಂತದಲ್ಲಿ ಅಂತ್ಯಗೊಂಡಿದೆ. ಪೊಲೀಸರು ದಾಳಿ ಮಾಡಿದಾಕ್ಷಣ ಭಯಗೊಂಡು ಯುವತಿಯೊಬ್ಬರು ಹೋಟೆಲ್‌ನ ಬಾಲ್ಕನಿಯಿಂದ ಕೆಳಗೆ ಜಿಗಿದು ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ಬ್ರೂಕ್ ಫೀಲ್ಡ್‌ನಲ್ಲಿ ನಡೆದಿದೆ. ಆದರೆ, ಈ ಪ್ರಕರಣದಲ್ಲಿ ಪೊಲೀಸರ ವರ್ತನೆಯ ಬಗ್ಗೆ ಈಗ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

Bengaluru – ಘಟನೆ ನಡೆದಿದ್ದು ಎಲ್ಲಿ? ಏನಾಗಿತ್ತು?
ಕಳೆದ ಶನಿವಾರ ತಡರಾತ್ರಿ ಬ್ರೂಕ್‌ಫೀಲ್ಡ್‌ನ ‘ಸೀ ಎಸ್ಟಾ ಲಾಡ್ಜ್’ (Siesta Lodge) ನಲ್ಲಿ ಈ ಘಟನೆ ಸಂಭವಿಸಿದೆ. ಸುಮಾರು 8 ಜನ ಸ್ನೇಹಿತರ ಗುಂಪು ಹೋಟೆಲ್‌ನಲ್ಲಿ ಪಾರ್ಟಿ ಮಾಡುತ್ತಿದ್ದರು. ಪಾರ್ಟಿಯ ಶಬ್ದ ಜೋರಾಗಿದ್ದರಿಂದ ಸ್ಥಳೀಯರು 112 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದರು. ದೂರು ಸ್ವೀಕರಿಸಿದ ಹೆಚ್‌ಎಎಲ್ (HAL) ಠಾಣೆಯ ಹೊಯ್ಸಳ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ.
ಪೊಲೀಸರ ವಿರುದ್ಧ ಹಣದ ಬೇಡಿಕೆ ಆರೋಪ?
ಇಲ್ಲಿಯೇ ಕಥೆಗೆ ಬಿಗ್ ಟ್ವಿಸ್ಟ್ ಸಿಕ್ಕಿರೋದು. ಸ್ಥಳಕ್ಕೆ ಬಂದ ಪೊಲೀಸರು ನಿಯಮ ಉಲ್ಲಂಘನೆ ಬಗ್ಗೆ ಎಚ್ಚರಿಸುವ ಬದಲು, ಪಾರ್ಟಿ ಮಾಡುತ್ತಿದ್ದ ಯುವಕರ ಬಳಿ ಹಣಕ್ಕೆ (ಲಂಚ) ಬೇಡಿಕೆ ಇಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪೊಲೀಸರ ಈ ನಡೆಯಿಂದ ಪಾರ್ಟಿಯಲ್ಲಿದ್ದವರು ತೀವ್ರ ಆತಂಕಕ್ಕೊಳಗಾಗಿದ್ದಾರೆ (Bengaluru) ಎನ್ನಲಾಗಿದೆ.
ಬಾಲ್ಕನಿಯಿಂದ ಜಿಗಿದ ಯುವತಿ – ವೈಷ್ಣವಿ ಸ್ಥಿತಿ ಗಂಭೀರ
ಪೊಲೀಸರ ಕಿರುಕುಳಕ್ಕೆ ಹೆದರಿದ ವೈಷ್ಣವಿ ಎಂಬ ಯುವತಿ, ಹೋಟೆಲ್‌ನ ಮೊದಲ ಮಹಡಿಯ ಬಾಲ್ಕನಿಯಿಂದ ಪೈಪ್ ಮೂಲಕ ಕೆಳಗೆ ಇಳಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ಅವರಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. Read this also : ವಾಹ್.. ಎಂಥಾ ಗಟ್ಟಿ ಗುಂಡಿಗೆ ಈಕೆಯದ್ದು! ಒಂದೇ ಸಲ 3 ಹಾವುಗಳನ್ನ ಹಿಡಿದು ಎಲ್ಲರ ಹುಬ್ಬೇರಿಸಿದ ‘ಲೇಡಿ ಸ್ನೇಕ್ ಕ್ಯಾಚರ್’; ವೈರಲ್ ವಿಡಿಯೋ ಇಲ್ಲಿದೆ.
ಹೋಟೆಲ್ ಮಾಲೀಕರ ಮೇಲೆ ಎಫ್‌ಐಆರ್: ಪೊಲೀಸರ ‘ತಂತ್ರ’ವೇನು?
ಈ ಘಟನೆ ಪೊಲೀಸ್ ಇಲಾಖೆಗೆ ಮುಜುಗರ ತಂದಿದೆ. ಆದರೆ, ಹೆಚ್‌ಎಎಲ್ ಪೊಲೀಸರು ತಮ್ಮ ಮೇಲಿನ ಆರೋಪಗಳನ್ನು ಮುಚ್ಚಿಹಾಕಲು ಬೇರೆಯದ್ದೇ ಕ್ರಮ ಕೈಗೊಂಡಿದ್ದಾರೆ ಎಂಬ ಮಾತುಗಳು (Bengaluru) ಕೇಳಿಬರುತ್ತಿವೆ.

- ಗಾಯಾಳು ಯುವತಿಯ ತಂದೆ ಆಂತೋನಿ ಅವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ.
- ಆದರೆ, ಎಫ್‌ಐಆರ್‌ನಲ್ಲಿ ಪೊಲೀಸರ ಕಿರುಕುಳದ ಬಗ್ಗೆ ಪ್ರಸ್ತಾಪಿಸುವ ಬದಲು, ‘ಹೋಟೆಲ್ ಮಾಲೀಕರು ಬಾಲ್ಕನಿಯಲ್ಲಿ ಸರಿಯಾದ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ’ ಎಂದು ನಿರ್ಲಕ್ಷ್ಯದ ಆರೋಪ ಹೊರಿಸಲಾಗಿದೆ.
ಸಾರ್ವಜನಿಕರ ಪ್ರಶ್ನೆಗಳೇನು?
ಯುವತಿ ಹಾರಿರುವುದೇ (Bengaluru) ಪೊಲೀಸರ ಭಯಕ್ಕೆ ಎನ್ನಲಾಗಿರುವಾಗ, ತನಿಖೆಯನ್ನು ಆ ನಿಟ್ಟಿನಲ್ಲಿ ನಡೆಸುವ ಬದಲು ಹೋಟೆಲ್ ಮಾಲೀಕರ ಮೇಲೆ ಕೇಸ್ ಹಾಕಿರುವುದು ಎಷ್ಟು ಸರಿ? ಎಂಬ ಅನುಮಾನವನ್ನು ಸ್ಥಳೀಯರು ಹಾಗೂ ಹೋಟೆಲ್ ಸಿಬ್ಬಂದಿ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.
