ವಿದೇಶ ಪ್ರವಾಸ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಹೊಸ ಜಾಗ, ಹೊಸ ಅನುಭವ ಅಂದ್ರೆ ಎಲ್ಲರಿಗೂ ಖುಷಿನೇ. ಆದರೆ, ಒಮ್ಮೊಮ್ಮೆ ಪ್ರವಾಸದ ವೇಳೆ ಎದುರಾಗುವ ಕೆಲವು ಘಟನೆಗಳು ಎಂಥವರನ್ನೂ ಬೆಚ್ಚಿಬೀಳಿಸುತ್ತವೆ. ಪ್ರಸಿದ್ಧ ಭಾರತೀಯ ಟ್ರಾವೆಲ್ ವ್ಲಾಗರ್ (Travel Vlogger) ‘ಪ್ಯಾಸೆಂಜರ್ ಪರಮ್‌ವೀರ್’ (Passenger Paramvir) ಅವರಿಗೂ ಇಟಲಿಯಲ್ಲಿ ಇಂತದ್ದೇ ಕಹಿ ಅನುಭವವಾಗಿದೆ. ಲಿಫ್ಟ್ ಕೇಳಿದ ಇವರಿಗೆ ಕಾರು (Italy) ಚಾಲಕನಿಂದ ಲೈಂಗಿಕ ಕಿರುಕುಳ (Sexual Harassment) ಎದುರಾಗಿದ್ದು, ಈ ಬಗ್ಗೆ ಅವರು ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ.

ಏನಿದು ಘಟನೆ? (Italy)
ಪರಮ್‌ವೀರ್ ಸಿಂಗ್ ಬೆನಿವಾಲ್ (Paramvir Singh Beniwal) ಅವರು ಯೂಟ್ಯೂಬ್‌ನಲ್ಲಿ ಬರೋಬ್ಬರಿ 2.56 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ. ತಮ್ಮ ವಿಭಿನ್ನ ಪ್ರವಾಸದ ವಿಡಿಯೋಗಳಿಂದಲೇ ಅವರು ಫೇಮಸ್. ಇತ್ತೀಚೆಗೆ ಅವರು ಇಟಲಿಯಲ್ಲಿ ಪ್ರವಾಸ ಮಾಡುತ್ತಿದ್ದರು. ಅಲ್ಲಿನ ‘ಟ್ರೆಂಟೊ’ (Trento) ಎಂಬ ಊರಿಗೆ ಹೋಗಲು ರಸ್ತೆಯಲ್ಲಿ ಬೋರ್ಡ್ ಹಿಡಿದು ಲಿಫ್ಟ್ (Hitchhiking) ಕೇಳುತ್ತಿದ್ದರು. ಒಬ್ಬ ಸ್ಥಳೀಯ ಚಾಲಕ ಕಾರು ನಿಲ್ಲಿಸಿ ಲಿಫ್ಟ್ ಕೊಟ್ಟಿದ್ದಾನೆ. ಕಾರು ಹತ್ತಿದ ಬಳಿಕ ನಡೆದದ್ದು ಮಾತ್ರ ಅಘಾತಕಾರಿ ಸಂಗತಿ.
ಲೈಂಗಿಕ ಬಯಕೆ ತೀರಿಸುವಂತೆ ಬೇಡಿಕೆ!
ತಮಗಾದ ಈ ಕೆಟ್ಟ ಅನುಭವದ ಬಗ್ಗೆ ಪರಮ್‌ವೀರ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. “ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಇಂತಹ ಭಯಾನಕ ಘಟನೆ ನಡೆದಿದೆ” ಎಂದು ಅವರು ಹೇಳಿಕೊಂಡಿದ್ದಾರೆ. ಅವರ ಪ್ರಕಾರ, ಕಾರು ಚಾಲಕ ಪರಮ್‌ವೀರ್ ಅವರನ್ನು ಡ್ರಾಪ್ ಮಾಡಲು ಪ್ರತಿಯಾಗಿ ಲೈಂಗಿಕ ಬಯಕೆ ತೀರಿಸುವಂತೆ (Sexual favour) ಬೇಡಿಕೆ ಇಟ್ಟಿದ್ದಾನಂತೆ!
ಚಾಲಕನ (Italy) ವರ್ತನೆಯಿಂದ ಶಾಕ್ ಆದ ಪರಮ್‌ವೀರ್, ತಕ್ಷಣವೇ ಆತನ ಬೇಡಿಕೆಯನ್ನು ತಿರಸ್ಕರಿಸಿ, ತಮ್ಮ ಸುರಕ್ಷತೆಯನ್ನು ನೋಡಿಕೊಂಡು ಕಾರಿನಿಂದ ಇಳಿದು ಅಲ್ಲಿಂದ ಸೇಫ್ ಆಗಿ ಹೊರಬಂದಿದ್ದಾರೆ. ಎಐ (AI) ತಂತ್ರಜ್ಞಾನ ಬಳಸಿ ಆ ಘಟನೆಯನ್ನು ಮರುಸೃಷ್ಟಿಸಿ ಅವರು ಪ್ರೇಕ್ಷಕರಿಗೆ ವಿವರಿಸಿದ್ದಾರೆ. Read this also : ರೈಲ್ವೆ ಸ್ಟೇಷನ್ ನಲ್ಲಿ ಮಲಗಿದ್ದ ಅಮಾಯಕನಿಗೆ ಚಪ್ಪಲಿಯಿಂದ ಹೊಡೆದ ಮಂಗಳಮುಖಿಯರು? ಮುಂಬೈನಲ್ಲಿ ನಡೆದ ಘಟನೆ..!
ನೆಟ್ಟಿಗರ ಆಕ್ರೋಶ ಮತ್ತು ಬೆಂಬಲ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮೆಂಟ್ ಬಾಕ್ಸ್‌ನಲ್ಲಿ ಪರಮ್ ವೀರ್ (Italy) ಅವರಿಗೆ ಬೆಂಬಲದ ಮಹಾಪೂರವೇ ಹರಿದುಬಂದಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
- ಆಕ್ರೋಶ: “ಲೈಂಗಿಕ ಕಿರುಕುಳ ಎಂಬುದು ತಮಾಷೆಯ ವಿಷಯವಲ್ಲ. ನಿಮಗೆ ಆದ ಆಘಾತಕಾರಿ ಅನುಭವ ಕೇಳಿ ಬೇಸರವಾಯಿತು” ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.

- ಡಬಲ್ ಸ್ಟ್ಯಾಂಡರ್ಡ್ಸ್: ಇನ್ನು ಕೆಲವರು ಕಟುವಾಗಿ ಪ್ರತಿಕ್ರಿಯಿಸಿದ್ದು, “ಇದೇ ಘಟನೆ ಭಾರತದಲ್ಲಿ ಯಾವುದಾದರೂ ವಿದೇಶಿಗರಿಗೆ ಆಗಿದ್ದರೆ ಇಡೀ ಪ್ರಪಂಚವೇ ಭಾರತವನ್ನು ಟೀಕಿಸುತ್ತಿತ್ತು. ಆದರೆ ಈಗ ವಿದೇಶದಲ್ಲಿ ಭಾರತೀಯನಿಗೆ ಹೀಗಾದಾಗ ಕೆಲವರು ಜೋಕ್ ಮಾಡುತ್ತಿದ್ದಾರಲ್ಲ, ನಾಚಿಕೆಯಾಗಬೇಕು” ಎಂದು ಸಮಾಜದ ಇಬ್ಬಗೆಯ ನೀತಿಯನ್ನು ಪ್ರಶ್ನಿಸಿದ್ದಾರೆ.
- ಮಹಿಳೆಯರ ಕಷ್ಟ: “ಪ್ರತಿದಿನ ಮಹಿಳೆಯರು ಇಂತಹ ಎಷ್ಟು ಕಿರುಕುಳಗಳನ್ನು ಎದುರಿಸುತ್ತಾರೆ ಎಂಬುದು ಊಹಿಸಲು ಅಸಾಧ್ಯ” ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ, ಸುಂದರ ಪ್ರವಾಸದ ನಿರೀಕ್ಷೆಯಲ್ಲಿದ್ದ ಭಾರತೀಯ ಯೂಟ್ಯೂಬರ್‌ಗೆ ಇಟಲಿಯಲ್ಲಿ (Italy) ಆದ ಈ ಅವಮಾನಕರ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.
