ಖಾಕಿ ಬಟ್ಟೆ ಅಂದ್ರೆ ಜನರಿಗೆ ಒಂದು ಗೌರವ, ಇನ್ನೊಂದು ಕಡೆ ಭಯ. ರಕ್ಷಣೆ ಮಾಡಬೇಕಾದವರೇ ರಕ್ಷಣೆ ಹೆಸರಲ್ಲಿ ಲವ್ ಗೇಮ್ ಆಡಿದ್ರೆ ಹೇಗಿರುತ್ತೆ? ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡ್ ಆಗ್ತಿರೋದು ಛತ್ತೀಸ್‌ಗಢದ ಲೇಡಿ ಪೊಲೀಸ್ ಆಫೀಸರ್ ಕಲ್ಪನಾ ವರ್ಮಾ (DSP Kalpana Verma) ಅವರ ಸ್ಟೋರಿ. ಉದ್ಯಮಿಯೊಬ್ಬರನ್ನ ಪ್ರೀತಿ ಬಲೆಯಲ್ಲಿ ಬೀಳಿಸಿ ಕೋಟಿ ಕೋಟಿ ಪೀಕಿದ್ದಾರೆ ಅನ್ನೋ ಗಂಭೀರ ಆರೋಪ ಇವರ ಮೇಲಿದೆ. ಏನಿದು ಕೇಸ್? ಲೀಕ್ ಆದ ಚಾಟ್ ಕಥೆಯೇನು? ಇಲ್ಲಿದೆ ರೋಚಕ ಮಾಹಿತಿ.

DSP Kalpana Verma – ಲವ್ ಟ್ರ್ಯಾಪ್ ಬಲೆಯಲ್ಲಿ ಬಿದ್ದ ಉದ್ಯಮಿ!
ರಾಯ್‌ಪುರದ ಫೇಮಸ್ ಬಿಸಿನೆಸ್‌ಮ್ಯಾನ್ ದೀಪಕ್ ಟಂಡನ್ ಅನ್ನೋರು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅವರ ಆರೋಪ ಕೇಳಿದ್ರೆ ಎಂಥವರೂ ದಂಗಾಗ್ತಾರೆ. ಸ್ವತಃ ಡಿಎಸ್‌ಪಿ (DSP) ಆಗಿರೋ ಕಲ್ಪನಾ ವರ್ಮಾ, ತಮ್ಮನ್ನ “ಲವ್ ಟ್ರ್ಯಾಪ್” ಮಾಡಿ ಬರೋಬ್ಬರಿ 2.5 ಕೋಟಿ ರೂಪಾಯಿ ವಂಚಿಸಿದ್ದಾರೆ ಅಂತ ದೂರು ಕೊಟ್ಟಿದ್ದಾರೆ. ಬರೀ ಹಣ ಮಾತ್ರವಲ್ಲ, ಕಾರು, ವಜ್ರದ ಉಂಗುರ ಎಲ್ಲವನ್ನೂ ಗಿಫ್ಟ್ ಹೆಸರಲ್ಲಿ ಪಡೆದುಕೊಂಡಿದ್ದಾರೆ ಅಂತೆ.
ಅಸಲಿಗೆ ಆಗಿದ್ದೇನು? ಪರಿಚಯ ಪ್ರೇಮವಾಗಿದ್ದು ಹೇಗೆ?
ಇವರಿಬ್ಬರ ಸ್ಟೋರಿ ಶುರುವಾಗಿದ್ದು 2021ರಲ್ಲಿ. ಕಾಮನ್ ಫ್ರೆಂಡ್ ಒಬ್ಬರ ಮೂಲಕ ದೀಪಕ್ ಮತ್ತು ಕಲ್ಪನಾ ಪರಿಚಯ ಆಗುತ್ತೆ.
- ಆರಂಭದಲ್ಲಿ: ಫ್ರೆಂಡ್ಶಿಪ್ ಹೆಸರಲ್ಲಿ ಶುರುವಾದ ಮಾತುಕತೆ, ಆಮೇಲೆ ಹೋಟೆಲ್ ಮೀಟಿಂಗ್ಗಳಿಗೆ ಶಿಫ್ಟ್ ಆಯ್ತು.
- ಕ್ಲೋಸ್ನೆಸ್: ಲೇಟ್ ನೈಟ್ ವಿಡಿಯೋ ಕಾಲ್ಸ್, ಗಂಟೆಗಟ್ಟಲೆ ಮಾತುಕತೆಯಿಂದ ಇಬ್ಬರ ನಡುವೆ ಆಪ್ತತೆ ಬೆಳೆಯಿತು. ದೀಪಕ್ ಕೂಡ ಮೇಡಂ ಪ್ರೀತಿಯಲ್ಲಿ ಬಿದ್ದುಬಿಟ್ಟರು.
- ಡಿಮ್ಯಾಂಡ್ಸ್: ಯಾವಾಗ ಇಬ್ಬರು ಕ್ಲೋಸ್ ಆದ್ರೋ, ಕಲ್ಪನಾ (DSP Kalpana Verma) ಅವರು ಒಂದೊಂದೇ ಡಿಮ್ಯಾಂಡ್ ಇಡೋಕೆ ಶುರು ಮಾಡಿದ್ರಂತೆ. Read this also : ಲಕ್ನೋದಲ್ಲಿ ಘೋರ ಕೃತ್ಯ: ಲಿವ್-ಇನ್ ಪಾರ್ಟನರ್ ಕತೆ ಮುಗಿಸಿ ಶವದ ಜೊತೆಗೇ ರಾತ್ರಿ ಕಳೆದ ಅಮ್ಮ-ಮಕ್ಕಳು!
ಉಡುಗೊರೆ ಲಿಸ್ಟ್ ನೋಡಿದ್ರೆ ತಲೆ ತಿರುಗುತ್ತೆ!
ಪ್ರೀತಿ ಹೆಸರಲ್ಲಿ ಡಿಎಸ್‌ಪಿ ಮೇಡಂ (DSP Kalpana Verma) ಏನೆಲ್ಲಾ ಪಡ್ಕೊಂಡಿದ್ದಾರೆ ಅಂತ ದೀಪಕ್ ಪಟ್ಟಿ ಕೊಟ್ಟಿದ್ದಾರೆ ನೋಡಿ:
- ನಗದು ರೂಪದಲ್ಲಿ ಬರೋಬ್ಬರಿ 2 ಕೋಟಿ ರೂಪಾಯಿ! (ತಮ್ಮನ ಹೋಟೆಲ್ ಬಿಸಿನೆಸ್ ಹೆಸರಲ್ಲಿ).
- ಒಂದು ಐಷಾರಾಮಿ ಕಾರು.
- ಸುಮಾರು 12 ಲಕ್ಷ ಬೆಲೆಬಾಳುವ ವಜ್ರದ ಉಂಗುರ.
- 5 ಲಕ್ಷ ಮೌಲ್ಯದ ಚಿನ್ನದ ಆಭರಣ ಹಾಗೂ 1 ಲಕ್ಷದ ಬಳೆಗಳು.
ಒಟ್ಟಾರೆಯಾಗಿ ಲೆಕ್ಕ ಹಾಕಿದ್ರೆ ಉದ್ಯಮಿಗೆ ಬಿದ್ದಿರೋ ಕನ್ನ ಸುಮಾರು 2.5 ಕೋಟಿ ರೂಪಾಯಿ!

ಹೆಂಡತಿಗೆ ಡಿವೋರ್ಸ್ ಕೊಡು ಅಂದ್ರು!
ವಿಷಯ ಇಲ್ಲಿಗೆ ನಿಲ್ಲಲ್ಲ. ಕಲ್ಪನಾ (DSP Kalpana Verma) ಅವರು ದೀಪಕ್ ಮೇಲೆ “ನಿನ್ನ ಹೆಂಡತಿಗೆ ಡಿವೋರ್ಸ್ ಕೊಡು” ಅಂತ ಒತ್ತಡ ಹಾಕೋಕೆ ಶುರು ಮಾಡಿದ್ರಂತೆ. ಇದಕ್ಕೆ ಒಪ್ಪದ ದೀಪಕ್, “ನನ್ನ ಹಣ, ಒಡವೆ ವಾಪಸ್ ಕೊಡು” ಅಂತ ಕೇಳಿದ್ದಾರೆ. ಆಗ ಅಸಲಿ ಆಟ ಶುರುವಾಗಿದೆ. ತನ್ನ ಪೊಲೀಸ್ ಪವರ್ ಬಳಸಿ, ಹಿರಿಯ ಅಧಿಕಾರಿಗಳ ಪರಿಚಯ ಇದೆ ಅಂತ ಹೇಳಿ ದೀಪಕ್ ಅವರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಇಬ್ಬರ ನಡುವಿನ ‘ವಾಟ್ಸಾಪ್ ಚಾಟ್ಸ್’ ಈಗ ಲೀಕ್ ಆಗಿದ್ದು, ಭಾರೀ ಸಂಚಲನ ಸೃಷ್ಟಿಸಿದೆ.
ಸಂಬಂಧಿಸಿದ ಪೋಸ್ಟ್ ಇಲ್ಲಿದೆ ನೋಡಿ : Click Here
ಯಾರೀ ಕಲ್ಪನಾ ವರ್ಮಾ? (DSP Kalpana Verma Profile)
ಕಲ್ಪನಾ ವರ್ಮಾ 2016-17ನೇ ಸಾಲಿನ ಪೊಲೀಸ್ ಬ್ಯಾಚ್ ಅಧಿಕಾರಿ. ಸದ್ಯ ನಕ್ಸಲ್ ಪೀಡಿತ ದಂತೇವಾಡದಲ್ಲಿ ಡಿಎಸ್‌ಪಿ ಆಗಿ ಕೆಲಸ ಮಾಡ್ತಿದ್ದಾರೆ. ಅಂದಹಾಗೆ ಇವರು ಸುದ್ದಿಯಾಗ್ತಿರೋದು ಇದೇ ಮೊದಲೇನಲ್ಲ. ಹಿಂದೆ ಒಮ್ಮೆ ಬಿಜೆಪಿ ನಾಯಕರು ಮತ್ತು ಈಗಿನ ಗೃಹ ಸಚಿವರು ಮನವಿ ಕೊಡಲು ಬಂದಾಗ, ಅದನ್ನೇನೂ ಕೇರ್ ಮಾಡದೆ ಮೊಬೈಲ್ ನೋಡುತ್ತಾ ಕುಳಿತಿದ್ದ ಫೋಟೋ ವೈರಲ್ ಆಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ರು.

ಸದ್ಯ ಕಲ್ಪನಾ ವರ್ಮಾ ಈ ಎಲ್ಲಾ ಆರೋಪಗಳನ್ನ ತಳ್ಳಿಹಾಕಿದ್ದಾರೆ. “ಇದೆಲ್ಲಾ ಸುಳ್ಳು, ನನ್ನ ವಿರುದ್ಧ ನಡೀತಿರೋ ರಾಜಕೀಯ ಪಿತೂರಿ” ಅಂತ ಹೇಳಿದ್ದಾರೆ. ಆದರೆ, ಉದ್ಯಮಿ ದೀಪಕ್ ಸಾಕ್ಷಿ ಸಮೇತ ದೂರು ನೀಡಿದ್ದು, ಖಾಕಿ ಪವರ್ ಗೆಲ್ಲುತ್ತಾ ಅಥವಾ ಸತ್ಯ ಗೆಲ್ಲುತ್ತಾ ಅನ್ನೋದನ್ನ ಕಾದು ನೋಡಬೇಕು.
