ಡಿಸೆಂಬರ್ ಬಂತೆಂದರೆ ಸಾಕು, ಚಳಿ ನಡುಗಿಸಲು ಶುರು ಮಾಡುತ್ತದೆ. ಬೆಳಗ್ಗೆ ಏಳುವಾಗ ಮೂಗು ಕಟ್ಟಿರುವುದು, ಗಂಟಲು ಕೆರೆತ (Sore Throat) ಅಥವಾ ಹಠಾತ್ ಹಲ್ಲು ನೋವು ಕಾಣಿಸಿಕೊಳ್ಳುವುದು ಚಳಿಗಾಲದಲ್ಲಿ ಸಾಮಾನ್ಯ. ಹವಾಮಾನ ಬದಲಾದಂತೆ ನಮ್ಮ ದೇಹ ಕೂಡ ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತದೆ.

ಸಾಮಾನ್ಯವಾಗಿ ಗಂಟಲು ನೋವು ಅಥವಾ ಕೆಮ್ಮು ಬಂದರೆ ತಕ್ಷಣ ನಾವು ಮೆಡಿಕಲ್ ಶಾಪ್‌ಗೆ (Health Tips) ಹೋಗಿ ಮಾತ್ರೆಗಳನ್ನು ತರುತ್ತೇವೆ. ಆದರೆ, ಸಣ್ಣಪುಟ್ಟ ಸಮಸ್ಯೆಗಳಿಗೆ ಮಾತ್ರೆಗಳ ಮೊರೆ ಹೋಗುವ ಬದಲು, ನಮ್ಮ ಅಡುಗೆ ಮನೆಯಲ್ಲಿಯೇ ಸಿಗುವ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ?
Health Tips – ಸರಳ ಹಾಗೂ ಸಿದ್ಧೌಷಧಗಳು
ಜ್ಯೇಷ್ಠಮಧು (Licorice): ಗಂಟಲಿಗೆ ದಿವ್ಯೌಷಧ
ಗಂಟಲು ನೋವು ಮತ್ತು ಎದೆಯಲ್ಲಿ ಕಫ ಕಟ್ಟಿಕೊಂಡಿದ್ದರೆ ‘ಜ್ಯೇಷ್ಠಮಧು’ ರಾಮಬಾಣದಂತೆ ಕೆಲಸ ಮಾಡುತ್ತದೆ. ಇದು ಕೇವಲ ನೋವು ನಿವಾರಕವಷ್ಟೇ ಅಲ್ಲ, ಶೀತವನ್ನೂ ಕಡಿಮೆ ಮಾಡುತ್ತದೆ.
- ಬಳಸುವುದು ಹೇಗೆ?: ಜ್ಯೇಷ್ಠಮಧುವಿನ ಪುಡಿಯನ್ನು ಸ್ವಲ್ಪ ತುಪ್ಪ ಅಥವಾ ಜೇನುತುಪ್ಪದೊಂದಿಗೆ ಕಲಸಿ ತಿನ್ನಬಹುದು. ಅಥವಾ ಚಹಾ/ಕಷಾಯ ಮಾಡುವಾಗ ಸ್ವಲ್ಪ ಜ್ಯೇಷ್ಠಮಧು ಸೇರಿಸಿ ಕುಡಿದರೆ ಗಂಟಲು ಕೆರೆತದಿಂದ ತ್ವರಿತವಾಗಿ ಆರಾಮ ಸಿಗುತ್ತದೆ.
ತುಳಸಿ ರಸ (Tulsi Juice)
ತುಳಸಿ ಗಿಡ ಇಲ್ಲದ ಮನೆಯೇ ಇಲ್ಲ ಎನ್ನಬಹುದು. ಇದು ಕೇವಲ ಪೂಜೆಗೆ ಮಾತ್ರವಲ್ಲ, ಆರೋಗ್ಯಕ್ಕೂ ಸಂಜೀವಿನಿ. (Health Tips)
- ಬಳಸುವುದು ಹೇಗೆ?: ಎಳೆ ತುಳಸಿ ಎಲೆಗಳ ರಸವನ್ನು ತೆಗೆದು ಕುಡಿಯುವುದರಿಂದ ಗಂಟಲು ನೋವು ಮಾಯವಾಗುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಶೀತ ಮತ್ತು ಕೆಮ್ಮನ್ನು ಓಡಿಸಲು ಸಹಾಯ ಮಾಡುತ್ತದೆ.
ಶುಂಠಿ (Ginger): ಹಲ್ಲುನೋವಿಗೆ ಬೆಸ್ಟ್
ಚಳಿಗಾಲದಲ್ಲಿ ಶುಂಠಿ ಚಹಾ ಕುಡಿಯುವ ಮಜವೇ ಬೇರೆ. ಆದರೆ ಇದು ಕೇವಲ ರುಚಿಗಷ್ಟೇ ಅಲ್ಲ, ನೋವು ನಿವಾರಕವಾಗಿಯೂ ಕೆಲಸ ಮಾಡುತ್ತದೆ. ಹಸಿ ಶುಂಠಿ ಅಥವಾ ಒಣ ಶುಂಠಿ (ಶುಂಠಿ ಪುಡಿ) ಎರಡನ್ನೂ ಬಳಸಬಹುದು.
- ಹಲ್ಲುನೋವಿಗೆ ಟ್ರಿಕ್: ವಿಪರೀತ ಹಲ್ಲು ನೋವು ಇದ್ದರೆ, ಒಣ ಶುಂಠಿಯ ಸಣ್ಣ ತುಂಡನ್ನು ನೋವಿರುವ ಹಲ್ಲಿನ ಸಂಧಿಯಲ್ಲಿ ಒತ್ತಿ ಹಿಡಿಯಿರಿ. ಅದರ ರಸ ನಿಧಾನವಾಗಿ ಇಳಿದಂತೆ ನೋವು ಕಡಿಮೆಯಾಗುತ್ತದೆ. (Health Tips)
- ಗಂಟಲು ನೋವಿಗೆ: ಶುಂಠಿ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ನೆಕ್ಕುವುದರಿಂದ ಕೆಮ್ಮು ಮತ್ತು ಗಂಟಲು ನೋವಿನಿಂದ ಪರಿಹಾರ ಸಿಗುತ್ತದೆ. Read this also : ಪ್ರತಿದಿನ 7 ಗಂಟೆಗಿಂತ ಕಡಿಮೆ ನಿದ್ರೆ ಮಾಡುತ್ತಿದ್ದೀರಾ? ಆರೋಗ್ಯಕ್ಕೆ ಕಾದಿದೆ ದೊಡ್ಡ ಕುತ್ತು..!
ಅರಿಶಿನ (Turmeric): ನೈಸರ್ಗಿಕ ಆಂಟಿಬಯೋಟಿಕ್
ಅರಿಶಿನದ ಗುಣಗಳ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಇದು ಸೋಂಕು ನಿವಾರಕವಾಗಿ ಕೆಲಸ ಮಾಡುತ್ತದೆ.

- ಬಳಸುವುದು ಹೇಗೆ?: ಹಸಿ ಅರಿಶಿನವನ್ನು ಜಜ್ಜಿ, ನೀರಿನಲ್ಲಿ ಹಾಕಿ ಕುದಿಸಿ. ನಂತರ ಆ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಸೋಸಿ (Filter). ಈ ಉಗುರು ಬೆಚ್ಚಗಿನ ನೀರಿನಿಂದ ದಿನಕ್ಕೆ ಎರಡರಿಂದ ಮೂರು ಬಾರಿ ಬಾಯಿ ಮುಕ್ಕಳಿಸಿ (Gargle).
- ಪ್ರಯೋಜನ: ಹೀಗೆ ಮಾಡುವುದರಿಂದ ಗಂಟಲು ನೋವು ಕಡಿಮೆಯಾಗುವುದಲ್ಲದೆ, ಹಲ್ಲು ನೋವು ಮತ್ತು ಬಾಯಿಯ ದುರ್ವಾಸನೆಯೂ ನಿವಾರಣೆಯಾಗುತ್ತದೆ. (Health Tips)
ಗಮನಿಸಿ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ತಿಳುವಳಿಕೆಗಾಗಿ ಮತ್ತು ಮನೆಮದ್ದುಗಳ ಅರಿವಿಗಾಗಿ ಮಾತ್ರ. ಇದನ್ನು ಯಾವುದೇ ರೀತಿಯಲ್ಲೂ ವೈದ್ಯಕೀಯ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು. ನಿಮಗೆ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿದ್ದರೆ, ಅಲರ್ಜಿ ಅಥವಾ ಈ ಮನೆಮದ್ದುಗಳಿಂದ ಗುಣಮುಖವಾಗದಿದ್ದರೆ, ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ.
