“ಮಕ್ಕಳೇ ದೇವರು” ಅಂತೀವಿ. ಪೋಷಕರು ತಮ್ಮ ಕರುಳ ಕುಡಿಯನ್ನು ನಂಬಿಕೆ ಇಟ್ಟು ಶಾಲೆಗೆ ಕಳುಹಿಸುತ್ತಾರೆ. ಆದರೆ ಇಲ್ಲೊಂದು ಶಾಲೆಯಲ್ಲಿ ನಡೆದ ಘಟನೆ ನೋಡಿದರೆ ಎಂಥವರಿಗೂ ಎದೆ ಝಲ್ ಎನ್ನುತ್ತದೆ. ನರ್ಸರಿ ಓದುತ್ತಿರುವ ಪುಟ್ಟ ಕಂದಮ್ಮನ ಮೇಲೆ ಶಾಲೆಯ ಆಯಾವೊಬ್ಬಳು ರಾಕ್ಷಸಿಯಂತೆ ವರ್ತಿಸಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಸದ್ಯ ಈ ಪೈಶಾಚಿಕ ಕೃತ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೋಡಿದವರ ರಕ್ತ ಕುದಿಯುವಂತೆ ಮಾಡಿದೆ.

Viral Video – ಘಟನೆಯ ವಿವರವೇನು?
ಹೈದರಾಬಾದ್‌ನ ಶಾಪುರನಗರದಲ್ಲಿರುವ ಪೂರ್ಣಿಮಾ ಸ್ಕೂಲ್ ನಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಇದೇ ಶಾಲೆಯಲ್ಲಿ ನರ್ಸರಿ ಓದುತ್ತಿರುವ ಮುಗ್ಧ ಮಗುವಿನ ಮೇಲೆ, ಶಾಲೆಯಲ್ಲಿ ಕೆಲಸ ಮಾಡುವ ಆಯಾ (Caretaker) ಮನಬಂದಂತೆ ಹಲ್ಲೆ ನಡೆಸಿದ್ದಾಳೆ. ಕೇವಲ ಹೊಡೆಯುವುದು ಮಾತ್ರವಲ್ಲದೆ, ಮಗುವಿನ ಮೇಲೆ ಕಾಲು ಇಟ್ಟು ತುಳಿಯುತ್ತಾ ಪೈಶಾಚಿಕವಾಗಿ ವರ್ತಿಸಿದ್ದಾಳೆ.
Viral Video – ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆಯಾ
ಶಾಲೆಯ ಆವರಣದಲ್ಲಿ ಮಗುವಿನ ಮೇಲೆ ಆಯಾ ದೌರ್ಜನ್ಯ ಎಸಗುತ್ತಿರುವುದನ್ನು ಪಕ್ಕದ ಕಟ್ಟಡದಲ್ಲಿದ್ದ ಯುವಕನೊಬ್ಬ ಗಮನಿಸಿದ್ದಾನೆ. ತಕ್ಷಣವೇ ಆತ ತನ್ನ ಮೊಬೈಲ್‌ನಲ್ಲಿ ಈ ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ. ಆ ವಿಡಿಯೋದಲ್ಲಿ ಆಯಾ ಮಗುವನ್ನು ಕಾಲಿನಿಂದ ತುಳಿಯುತ್ತಾ, ವಿಪರೀತವಾಗಿ ಹಿಂಸಿಸುತ್ತಿರುವುದು ಸ್ಪಷ್ಟವಾಗಿ ಸೆರೆಯಾಗಿದೆ. Read this also : ಕರವಸ್ತ್ರ ಇಟ್ಟು ಸೀಟ್ ‘ರಿಸರ್ವ್’: ಪ್ರಶ್ನಿಸಿದವನಿಗೆ ಬಿತ್ತು ಗೂಸಾ! ಜುಟ್ಟು ಹಿಡಿದು ಎಳೆದಾಡಿದ ಮಹಿಳೆಯರು – ವೈರಲ್ ವಿಡಿಯೋ
Viral Video – ಪೋಷಕರ ಆಕ್ರೋಶ ಮತ್ತು ಪೊಲೀಸ್ ದೂರು
ಈ ವಿಡಿಯೋ ಭಾನುವಾರ ವಾಟ್ಸಾಪ್ ಗ್ರೂಪ್‌ಗಳಲ್ಲಿ ಹರಿದಾಡಿದ್ದು, ಮಗುವಿನ ಪೋಷಕರ ಗಮನಕ್ಕೆ ಬಂದಿದೆ. ಆಯಾಳ ಏಟಿನಿಂದ ಮಗು ತೀವ್ರ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದಾಗ ಮಗುವಿನ ಮೈಮೇಲೆ ತೀವ್ರ ಗಾಯಗಳಾಗಿರುವುದು ವೈದ್ಯರು ದೃಢಪಡಿಸಿದ್ದಾರೆ. ವಿಷಯ ತಿಳಿದು ಪೋಷಕರು ಶಾಲಾ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಆದರೆ, ಶಾಲೆಯವರು ಉಡಾಫೆಯಾಗಿ ವರ್ತಿಸಿ, ಘಟನೆಯನ್ನು ನಿರ್ಲಕ್ಷಿಸಿದ್ದಾರೆ ಎನ್ನಲಾಗಿದೆ. ಇದರಿಂದ ರೋಸಿಹೋದ ಪೋಷಕರು ಜೀಡಿಮೆಟ್ಲ (Jeedimetla) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಆಯಾಳನ್ನು ವಶಕ್ಕೆ ಪಡೆದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ವೈರಲ್ ವಿಡಿಯೋ ಮತ್ತು ಪೋಷಕರ ಆತಂಕ
ಸದ್ಯ ಮಗುವಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ತಮ್ಮ ಮಕ್ಕಳನ್ನು ಶಾಲೆಗಳಲ್ಲಿ ಆಯಾಗಳ ನಂಬಿಕೆಗೆ ಬಿಟ್ಟು ಹೋಗುವ ಪೋಷಕರಲ್ಲಿ ಭಾರೀ ಆತಂಕ ಮೂಡಿದೆ. ಚಿಕ್ಕ ಮಕ್ಕಳ ಮೇಲೆ ಇಂತಹ ಕ್ರೌರ್ಯ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
