ಸದ್ಯ ಎಲ್ಲಿ ನೋಡಿದರೂ ‘ಚಿಕಿರಿ… ಚಿಕಿರಿ..’ (Chikiri Song) ಹಾಡಿನದ್ದೇ ಸದ್ದು! ಮದುವೆ ಮನೆ ಇರಲಿ, ಯಾವುದೇ ಶುಭ ಸಮಾರಂಭವಿರಲಿ, ಡಿಜೆಗಳಲ್ಲಿ ಈ ಹಾಡು ಮೊಳಗಲೇಬೇಕು. ಇನ್ನು ಸೋಶಿಯಲ್ ಮೀಡಿಯಾದಲ್ಲಂತೂ ರೀಲ್ಸ್ ಮತ್ತು ಶಾರ್ಟ್ಸ್ ವಿಡಿಯೋಗಳಲ್ಲಿ ಈ ಹಾಡು ಟ್ರೆಂಡಿಂಗ್‌ನಲ್ಲಿದೆ. ಗ್ಲೋಬಲ್ ಸ್ಟಾರ್ ರಾಮ್ ಚರಣ್ (Ram Charan) ಅವರ ಎನರ್ಜಿಟಿಕ್ ಸ್ಟೆಪ್ಸ್ ಮತ್ತು ಆಸ್ಕರ್ ವಿಜೇತ ಎ.ಆರ್. ರೆಹಮಾನ್ (AR Rahman) ಅವರ ಸಂಗೀತದ ಮೋಡಿಗೆ ಫ್ಯಾನ್ಸ್ ಹುಚ್ಚೆದ್ದು ಕುಣಿಯುತ್ತಿದ್ದಾರೆ.

ಯೂಟ್ಯೂಬ್‌ನಲ್ಲಿಯೂ ಧೂಳೆಬ್ಬಿಸುತ್ತಿರುವ ಈ ಹಾಡು ಈಗಾಗಲೇ 100 ಮಿಲಿಯನ್ (10 ಕೋಟಿ) ವೀವ್ಸ್ ದಾಟಿ ಮುನ್ನುಗುತ್ತಿದೆ. ಇದೀಗ ಈ ಹಾಡಿಗೆ ಅಜ್ಜಿಯೊಬ್ಬರು ಹಾಕಿರುವ ಸ್ಟೆಪ್ಸ್ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.
Chikiri Song – ರಾಮ್ ಚರಣ್ ಸ್ಟೆಪ್ಸ್‌ಗೆ ಅಜ್ಜಿ ಸವಾಲ್!
ಹೌದು, ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಅಜ್ಜಿಯೊಬ್ಬರು ‘ಚಿಕಿರಿ’ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಕೇವಲ ಡ್ಯಾನ್ಸ್ ಮಾಡಿದ್ದಲ್ಲ, ಅಚ್ಚು ರಾಮ್ ಚರಣ್ ಅವರಂತೆಯೇ ಎನರ್ಜಿಟಿಕ್ ಮೂವ್‌ಮೆಂಟ್ಸ್ (Energetic Moves) ಹಾಕುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. Read this also : ಹಸಿವು ನೀಗಿಸಿ, ಸ್ವೆಟರ್ ಹೊದಿಸಿ ಅಜ್ಜಿಯ ಪಾಲಿಗೆ ‘ದೇವರಾದ’ ಯುವಕ; ಕಣ್ಣಂಚು ಒದ್ದೆ ಮಾಡುತ್ತೆ ಈ ದೃಶ್ಯ!
ಸಾಮಾನ್ಯವಾಗಿ ಈ ವಯಸ್ಸಿನಲ್ಲಿ ನಡೆಯುವುದೇ ಕಷ್ಟ, ಅಂತದರಲ್ಲಿ ಈ ಅಜ್ಜಿ ತೋರಿದ ಉತ್ಸಾಹ, ಆಕೆಯ ಮುಖಭಾವ ಮತ್ತು ಡ್ಯಾನ್ಸ್ ಸ್ಪೀಡ್ ನೋಡಿ ನೆಟಿಜನ್‌ಗಳು ಆಶ್ಚರ್ಯಚಕಿತರಾಗಿದ್ದಾರೆ. “ವಯಸ್ಸು ಕೇವಲ ಸಂಖ್ಯೆ ಮಾತ್ರ” ಎಂದು ಈ ಅಜ್ಜಿ ಸಾಬೀತುಪಡಿಸಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಜ್ಜಿಯ ಟ್ಯಾಲೆಂಟ್‌ಗೆ ಪ್ರಶಂಸೆಗಳ ಸುರಿಮಳೆಯೇ ಹರಿದುಬರುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Chikiri Song – ‘ಪೆದ್ದಿ’ ಚಿತ್ರದ ವಿಶೇಷತೆಗಳೇನು?
‘ಉಪ್ಪೇನಾ’ ಖ್ಯಾತಿಯ ಬುಚ್ಚಿಬಾಬು ಸನಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಪೆದ್ದಿ’ ಸಿನಿಮಾ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾದಲ್ಲಿ ರಾಮ್ ಚರಣ್ ಅವರಿಗೆ ಜೋಡಿಯಾಗಿ ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ ನಟಿಸುತ್ತಿದ್ದಾರೆ. ವಿಶೇಷವೆಂದರೆ, ಈ ಚಿತ್ರದಲ್ಲಿ ನಮ್ಮ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಜೊತೆಗೆ ಜಗಪತಿ ಬಾಬು, ದಿವ್ಯೇಂದು ತ್ರಿಪಾಠಿ, ಸತ್ಯ ಮುಂತಾದವರು ನಟಿಸುತ್ತಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌ಗಳು ಮತ್ತು ಹಾಡುಗಳು ಸಿನಿಮಾ ಮೇಲಿನ ಹೈಪ್ ಹೆಚ್ಚಿಸಿವೆ. ಬಹುತೇಕ ಶೂಟಿಂಗ್ ಮುಗಿಸಿಕೊಂಡಿರುವ ‘ಪೆದ್ದಿ’, ಮುಂದಿನ ವರ್ಷದ ಬೇಸಿಗೆಗೆ (Summer Release) ತೆರೆಗೆ ಅಪ್ಪಳಿಸಲು ಸಜ್ಜಾಗಿದೆ.
