ಚಲಿಸುತ್ತಿರುವ ಬೈನ್ ನಲ್ಲಿ ಕಿಸ್ ಮಾಡಿಕೊಂಡ ಪ್ರೇಮಿಗಳು, ವೈರಲ್ ಆದ ವಿಡಿಯೋ, ಕೊನೆಗೆ ಕ್ಷಮೆ ಕೇಳಿದ ಜೋಡಿ….!

ಇತ್ತೀಚಿಗೆ ಸೋಷಿಯಲ್ ಮಿಡಿಯಾ ತುಂಬಾನೆ ಫಾಸ್ಟ್ ಇದೆ ಎಂದು ಹೇಳಲಾಗುತ್ತದೆ. ಪ್ರಪಂಚದ ಮೂಲೆ ಮೂಲೆಯಲ್ಲಿ ನಡೆಯುವಂತ ಘಟನೆಗಳು ನಾವು ಇಲ್ಲಿಂದಲೇ ನೋಡಬಹುದಾಗಿದೆ. ಅದರಲ್ಲೂ ಕೆಲವರಂತೂ ಪಾಪ್ಯುಲರ್‍ ಆಗುವ ನಿಟ್ಟಿನಲ್ಲೋ ಅಥವಾ ದುರಃಕಾರದ ಪರಮಾವಾಧಿಯೋ ತಿಳಿಯದು ಸಾರ್ವಜನಿಕ ಸ್ಥಳಗಳಲ್ಲಿ ಮಾಡಬಾರದ ಕೆಲಸಗಳನ್ನು ಮಾಡಿ ಸುದ್ದಿಯಾಗುತ್ತಿರುತ್ತಾರೆ. ಅದೇ ಮಾದರಿಯಲ್ಲಿ ಬೈಕ್ ನಲ್ಲಿ ಹೋಗುತ್ತಿರುವ ಪ್ರೇಮಿಗಳು ಪರಸ್ಪರ್‍ ಚುಂಬಿಸಿಕೊಂಡು ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದು ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಕೊನೆಗೆ ಈ ಜೋಡಿ ಕ್ಷಮೆ ಕೇಳಿದ್ದಾರೆ.

lovers kissing on bike in rajasthan 1

ಅಂದಹಾಗೆ ಈ ಘಟನೆ ರಾಜಸ್ಥಾನದಲ್ಲಿ ನಡೆದಿದೆ ಎನ್ನಲಾಗಿದೆ. ಪ್ರೇಮಿಗಳಿಬ್ಬರು ಸಾರ್ವಜನಿಕವಾಗಿ ತಮ್ಮ ಪ್ರೀತಿಯನ್ನು ಪ್ರದರ್ಶನ ಮಾಡಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ರಸ್ತೆಯಲ್ಲಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿರುವ ಈ ಜೋಡಿ ಪರಸ್ಪರ ಕಿಸ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಆ ಜೋಡಿಯನ್ನು ಬಂಧಿಸಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಕ್ಷಮೆ ಕೇಳಿಸಿದ್ದಾರೆ. ಆದರೆ ಜೋಡಿ ಕಿಸ್ ಮಾಡಿಕೊಂಡ ವಿಡಿಯೋ ಹಾಗೂ ಕ್ಷಮೆ ಕೇಳಿದ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

lovers kissing on bike in rajasthan 0

ರಾಜಸ್ತಾನದಲ್ಲಿ ಸದಾ ಎನ್.ಇ.ಟಿ ವಿದ್ಯಾರ್ಥಿಗಳ ಸಾವಿನ ಸುದ್ದಿ ಕೇಳಿಬರುತ್ತಿರುತ್ತದೆ. ಇದಿಗ ರಾಜಸ್ತಾನದ ಕೋಟಾದಲ್ಲಿ ಈ ಘಟನೆ ನಡೆದಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವಂತೆ ಪ್ರೇಮಿಗಳಿಬ್ಬರು ಚಲಿಸುತ್ತಿರುವ ಬೈಕ್ ನಲ್ಲಿ ರೊಮ್ಯಾನ್ಸ್ ಮಾಡಿದ್ದಾರೆ. ಪರಸ್ಪರ ಕಿಸ್ ಮಾಡಿಕೊಂಡಿದ್ದಾರೆ. ಈ ದೃಶ್ಯವನ್ನು ಹಿಂಬದಿಯಲ್ಲಿ ಬರುತ್ತಿರುವ ವಾಹನ ಸವಾರರು ವಿಡಿಯೋ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಯುವತಿಯನ್ನು ಬೈಕ್ ನ ಮುಂಬಾಗದಲ್ಲಿ ಯುವಕ ಅಭಿಮುಖವಾಗಿ ಕೂರಿಸಿಕೊಂಡು ಕಿಸ್ ಮಾಡಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೋಟಾ ಪೊಲೀಸರು ಅವರನ್ನು ಹುಡುಕಿ ಬಂಧನ ಮಾಡಿದ್ದಾರೆ. ಬಳಿಕ ಅವರಲ್ಲಿ ಕ್ಷಮೆ ಕೇಳಿಸಿದ್ದಾರೆ. ನಾವು ರಸ್ತೆಯಲ್ಲಿ ಬೈಕ್ ನಲ್ಲಿ ಹೋಗುತ್ತಿರುವಾಗ ಅಸಭ್ಯವಾಗಿ ವರ್ತಿಸಿದ್ದು, ನಮ್ಮ ಜೀವಕ್ಕೆ ಅಪಾಯ ತರುವುದರ ಜೊತೆಗೆ ರಸ್ತೆಯಲ್ಲಿ ಹೋಗುವ ಇತರರ ಜೀವಕ್ಕೂ ಅಪಾಯಕ್ಕೀಡು ಮಾಡಿದ್ದೇವೆ. ಇಂತಹ ಘಟನೆಯನ್ನು ಮುಂದು ಮಾಡಲ್ಲ ಎಂದು ಕ್ಷಮೆ ಕೇಳಿದ್ದಾರೆ. ಈ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

Leave a Comment

Your email address will not be published. Required fields are marked *

Scroll to Top