ಸಾಫ್ಟ್‌ವೇರ್ ಕೆಲಸಕ್ಕೆ (Software Job) ಗುಡ್ ಬೈ, ಆಟೋ ಡ್ರೈವಿಂಗ್‌ಗೆ ಹಾಯ್! ‘ಈ ಗುಲಾಮಗಿರಿ ಸಾಕು’ ಎಂದ ಟೆಕ್ಕಿಯ ವಿಡಿಯೋ ವೈರಲ್

“ಸಾಫ್ಟ್‌ವೇರ್ ಇಂಜಿನಿಯರ್ (Software Job) ಅಂದ್ರೆ ‘ವೈಟ್ ಕಾಲರ್ ಜಾಬ್’ ಅಂತಾನೇ ಫೇಮಸ್. ಆದ್ರೆ ಆ ವೈಟ್ ಕಾಲರ್ ಹಿಂದಿನ ಕಷ್ಟ ಅನುಭವಿಸಿದವರಿಗೇ ಗೊತ್ತು. ಅದೇ ಕಾರಣಕ್ಕೆ ಹೈದರಾಬಾದ್ ಮೂಲದ ಟೆಕ್ಕಿಯೊಬ್ಬರು ತಮಗಿದ್ದ ‘ಬಾನಿಸ’ ಪಟ್ಟವನ್ನು ಕಿತ್ತೊಗೆದು, ರಾಜನಂತೆ ಬದುಕಲು ನಿರ್ಧರಿಸಿದ್ದಾರೆ. ಸಾಫ್ಟ್‌ವೇರ್ ಕೆಲಸಕ್ಕೆ ರಾಜೀನಾಮೆ ಕೊಟ್ಟು ಆಟೋ ಡ್ರೈವರ್ ಆಗಿರುವ ಇವರ ಮಾತುಗಳು ಈಗ ಲಕ್ಷಾಂತರ ಯುವಕರಿಗೆ ಕನ್ನಡಿ ಹಿಡಿದಂತಿದೆ.”

A Hyderabad techie quits his software job to become an auto driver, saying he wants freedom, not corporate slavery

Software Job – ವೈರಲ್ ಆದ ವಿಡಿಯೋದಲ್ಲಿ ಏನಿದೆ?

ತಮ್ಮ ಈ ನಿರ್ಧಾರದ ಬಗ್ಗೆ ವಿವರಿಸುತ್ತಾ ಈ ಮಾಜಿ ಸಾಫ್ಟ್‌ವೇರ್ ಉದ್ಯೋಗಿ ಮಾಡಿರುವ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ಅದರಲ್ಲಿ ಅವರು ಹೇಳಿದ್ದಿಷ್ಟು:

“ಹಾಯ್ ಗಾಯ್ಸ್, ನಾನೀಗ ಆಟೋ ಓಡಿಸುತ್ತಿದ್ದೀನಿ. ಜೀವನವನ್ನು ಮತ್ತೆ ಮೊದಲಿನಿಂದ (Restart) ಶುರು ಮಾಡಲು ನನಗೇನೂ ಭಯವಿಲ್ಲ. ನಿಜ ಹೇಳ್ತೀನಿ ಕೇಳಿ, ಒಂದು ಹಂತದಲ್ಲಿ ನಾನು ಜೀವನವೇ ಮುಗಿದು ಹೋಯಿತು, ಇನ್ನು ನನ್ನ ಕೈಯಲ್ಲಿ ಚೇತರಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದೆ. ಆದರೆ ನಾನಿನ್ನೂ ಇಲ್ಲೇ ಇದ್ದೀನಿ. ಆಟೋ ಓಡಿಸುವುದರಿಂದ ನಾನು ಸೋತಂತೆ ಅಲ್ಲ. ಸುಮ್ಮನೆ ಕೂರುವ ಬದಲು ಬದುಕಲು ಏನಾದರೂ ಮಾಡಬೇಕು ಅಲ್ವಾ?” Read this also : ಐಟಿ ಉದ್ಯೋಗಕ್ಕೆ ಕುತ್ತು: ರ‍್ಯಾಪಿಡೋ ಡ್ರೈವರ್ ಆದ ಸಾಫ್ಟ್‌ವೇರ್ ಇಂಜಿನಿಯರ್! ಈತನ ಕಷ್ಟ ಕೇಳಿದ್ರೆ ಕಣ್ಣೀರು ಬರುತ್ತೆ

Software Job – ಹಣವೇ ಮುಖ್ಯವಲ್ಲ, ನೆಮ್ಮದಿ ಮುಖ್ಯ!

ಆರ್ಥಿಕ ವಿಷಯಗಳ ಬಗ್ಗೆಯೂ ಅವರು ಬಹಳ ಪ್ರಬುದ್ಧವಾಗಿ ಮಾತನಾಡಿದ್ದಾರೆ. “ಬದುಕಲು ಹಣ ಅವಶ್ಯಕತೆ ಹೌದು, ಆದರೆ ಹಣವೊಂದೇ (Money) ಜೀವನ ಅಲ್ಲ. ಹಣವನ್ನು ಮೀರಿದ ಎಷ್ಟೋ ಮುಖ್ಯವಾದ ವಿಷಯಗಳು ಜೀವನದಲ್ಲಿವೆ. ಮೊದಲು ನಿಮ್ಮ ಬದುಕಿಗೆ ಒಂದು ಮೌಲ್ಯವನ್ನು ಮತ್ತು ನಿಜವಾದ ಗುರಿಯನ್ನು ಹುಡುಕಿಕೊಳ್ಳಿ,” ಎಂದು ಸಲಹೆ ನೀಡಿದ್ದಾರೆ. ಜೀವನದಲ್ಲಿ ಕಷ್ಟಗಳು ಅಥವಾ ಅಡೆತಡೆಗಳು ಬಂದರೆ ಓಡಿ ಹೋಗಬೇಡಿ, ಅಥವಾ ಅವಿತು ಕೂರಬೇಡಿ. ಬದಲಾಗಿ ಎದೆಗುಂದದೆ ಅದನ್ನು ಎದುರಿಸಿ ಎಂದು ಯುವಜನತೆಗೆ ಸ್ಪೂರ್ತಿ ತುಂಬಿದ್ದಾರೆ.

A Hyderabad techie quits his software job to become an auto driver, saying he wants freedom, not corporate slavery

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here 

Software Job – ‘ಆಟೋ ಡ್ರೈವರ್.. ನಾಟ್ ಎ ಕಾರ್ಪೊರೇಟ್ ಸ್ಲೇವ್’

ತಮ್ಮ ವಿಡಿಯೋಗೆ ಅವರು ನೀಡಿರುವ ಕ್ಯಾಪ್ಷನ್ ಈಗ ಎಲ್ಲರ ಗಮನ ಸೆಳೆದಿದೆ. “ಆಟೋ ಡ್ರೈವರ್.. ನಾಟ್ ಎ ಕಾರ್ಪೊರೇಟ್ ಸ್ಲೇವ್” (Auto Driver.. Not a Corporate Slave) ಎಂದು ಬರೆದುಕೊಳ್ಳುವ ಮೂಲಕ, ತಾನು ಈಗಿನ ಕೆಲಸದಲ್ಲಿ ಎಷ್ಟು ಸ್ವತಂತ್ರ ಮತ್ತು ನೆಮ್ಮದಿಯಾಗಿದ್ದೇನೆ ಎಂಬುದನ್ನು ಸಾರಿದ್ದಾರೆ.

ಒಟ್ಟಿನಲ್ಲಿ, ಕೆಲಸದ ಒತ್ತಡದಿಂದ ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವ ಬದಲು, ಇಷ್ಟದ ಕೆಲಸ ಮಾಡಿ ನೆಮ್ಮದಿಯಿಂದ ಬದುಕಬಹುದು ಎಂದು ಈ ಟೆಕ್ಕಿ ತೋರಿಸಿಕೊಟ್ಟಿದ್ದಾರೆ.

Leave a Comment

Your email address will not be published. Required fields are marked *

Scroll to Top