Rashtriya Ekta Diwas – ಭಾರತದ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಹಾಗೂ ಒಗ್ಗಟ್ಟಿನ ಮಂತ್ರ ಸಾರಿದಂತಹ ಸರ್ದಾರ್ ವಲ್ಲಭಬಾಯ್ ಪಟೇಲ್ ರವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕೆಂದು ಗುಡಿಬಂಡೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಗಣೇಶ್ ತಿಳಿಸಿದರು. ಗುಡಿಬಂಡೆ ಪೊಲೀಸ್ ಇಲಾಖೆಯ ವತಿಯಿಂದ ಸರ್ದಾರ್ ವಲ್ಲಭಬಾಯ್ ಪಟೇಲ್ ರವರ 150ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಏಕತಾ ಓಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Rashtriya Ekta Diwas – ರಾಷ್ಟ್ರೀಯ ಏಕತಾ ದಿನ ಮತ್ತು ಒಗ್ಗಟ್ಟಿನ ಮಂತ್ರ
ರಾಷ್ಟ್ರೀಯ ಏಕತಾ ದಿನವನ್ನು ಉಕ್ಕಿನ ಮನುಷ್ಯ ಸರ್ದಾರ ವಲ್ಲಭಭಾಯಿ ಪಟೇಲರ ಜನ್ಮದಿನವನ್ನಾಗಿ ಆಚರಿಸುವ ಮೂಲಕ ಒಗ್ಗಟ್ಟಿನ ಮಂತ್ರವನ್ನು ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶ ಹೊಂದಲಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ರ ಪಾತ್ರ ಬಹಳ ಪ್ರಮುಖವಾದುದು. ಪಟೇಲ್ ಅವರು ಸ್ವಾತಂತ್ರ್ಯ ಹೋರಾಟ ಮತ್ತು ದೇಶ ಸ್ವತಂತ್ರಗೊಂಡ ನಂತರ ರಾಜರ ಆಳ್ವಿಕೆಯಲ್ಲಿ ಹರಿದು ಹಂಚಿ ಹೋಗಿದ್ದ ದೇಶವನ್ನು ಒಂದುಗೂಡಿಸುವಲ್ಲಿ ಶ್ರಮಪಟ್ಟವರು. ಸುಮಾರು 500 ಕ್ಕೂ ಹೆಚ್ಚು ಸಂಸ್ಥಾನಗಳನ್ನು ಒಗ್ಗೂಡಿಸುವ ಮೂಲಕ ದೇಶದ ಅಖಂಡತೆಯನ್ನು ಸಾರಿದ ಉಕ್ಕಿನ ಮನುಷ್ಯ ಎಂದೇ ವರ್ಣಿಸಬಹುದಾಗಿದೆ. ಇಂದಿನ ದಿನಗಳಲ್ಲಿ ದೇಶದ ಏಕತೆಯನ್ನು (Rashtriya Ekta Diwas) ನಾವೆಲ್ಲರೂ ಕಾಪಡಬೇಕಿದೆ ಎಂದರು.
Rashtriya Ekta Diwas – ಯುವಜನರಿಗೆ ಏಕತಾ ಓಟದ ಸಂದೇಶ
ದೇಶೀಯ ರಾಜ್ಯಗಳ ಏಕೀಕರಣ ಮೂಲಕ ಭಾರತವನ್ನು ನಿರ್ಮಿಸುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಪಾತ್ರವನ್ನು ಯುವ ಜನರಿಗೆ ತಿಳಿಸುವುದು ಮತ್ತು ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿಯುವ ಜನರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿಗಳೂ ಸಹ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಅರಿತುಕೊಳ್ಳಬೇಕು. ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಿ ಯಶಸ್ಸು ಗಳಿಸಿ ದೇಶಕ್ಕೆ ಒಳ್ಳೆಯ ಹೆಸರು ತಂದುಕೊಡಬೇಕೆಂದು ಸಲಹೆ ನೀಡಿದರು.

Read this also : ಆಸ್ತಿ ಖರೀದಿಯ ದೊಡ್ಡ ಸತ್ಯ! ರಿಜಿಸ್ಟ್ರೇಷನ್ ಆದ ತಕ್ಷಣವೇ ನೀವು ಓನರ್ ಆಗಲ್ಲ! ಮಾಲೀಕರಾಗಲು ಬೇಕು ಈ 6 ಪ್ರಮುಖ ದಾಖಲೆಗಳು!
ಇನ್ನೂ ಈ ಏಕತಾ ಓಟ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಆರಂಭವಾಯಿತು. ಈ ಸಮಯದಲ್ಲಿ ಗುಡಿಬಂಡೆ ಪೊಲೀಸರು, ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಇದ್ದರು.
