Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಸಂರಕ್ಷಣಾ ವೇದಿಕೆಯ ವತಿಯಿಂದ ತಾಲೂಕು ಯುವ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ಆಯೋಜಿಸಲಾಗಿತ್ತು. ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ನೇಮಕ ಪತ್ರವನ್ನು ತಾಲೂಕು ಅಧ್ಯಕ್ಷ ಶಿವಕುಮಾರ್ ವಿತರಣೆ ಮಾಡಿದರು.

Local News- ನೂತನ ಪದಾಧಿಕಾರಿಗಳು
ದಲಿತ ಸಂರಕ್ಷಣಾ ವೇದಿಕೆಯ ನೂತನ ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ವಿಜಯ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸ್, ಉಪಾಧ್ಯಕ್ಷರಾಗಿ ಎಲ್.ಎ.ಶಿವಕುಮಾರ್, ಹರೀಶ್, ಅಜಯ್ ಕುಮಾರ್, ಹನುಮಂತಪ್ಪ, ಕಾರ್ಯದರ್ಶಿಗಳಾಗಿ ವೆಂಕಟೇಶ್, ಹನುಮಂತಪ್ಪ, ಅಭಿಷೇಕ್, ಶ್ರೀನಿವಾಸ್, ಖಜಾಂಚಿಯಾಗಿ ನರಸಿಂಹಮೂರ್ತಿ, ಸಂಚಾಲಕರಾಗಿ ವಿನೋದ್ ರವರುಗಳನ್ನು ಆಯ್ಕೆ ಮಾಡಲಾಯಿತು.
ದಲಿತರ ಪರ ಪ್ರಾಮಾಣಿಕ ಸೇವೆ ಮಾಡಿ
ಈ ಸಮಯದಲ್ಲಿ ದಲಿತ ಸಂರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಶಿವಕುಮಾರ್ ಮಾತನಾಡಿ, ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ತಾಲೂಕಿನಲ್ಲಿ ದಲಿತರ ಪರ ಧ್ವನಿ ಎತ್ತಬೇಕು. ದಲಿತರ ಸಮಸ್ಯೆಗಳಿಗೆ ಸ್ಪಂಧಿಸುವ ಕೆಲಸ ಮಾಡಬೇಕು. ಸಂಘಟನೆಯ ಹೆಸರು ಕೆಡಿಸುವಂತಹ ಕೆಲಸ ಮಾಡದೇ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದರು. Read this also : ಗುಡಿಬಂಡೆಯಲ್ಲಿ ಅರ್ಥಪೂರ್ಣ ಹುಟ್ಟುಹಬ್ಬ: ಕಿಶಾಲ್ ವತ್ಸರಿಂದ ಮೀನುಗಾರರಿಗೆ ಬೆಡ್‌ಶೀಟ್ ವಿತರಣೆ…!
ಹಾಜರಿದ್ದ ಪ್ರಮುಖರು
ಈ ಸಮಯದಲ್ಲಿ ದಲಿತ ಸಂರಕ್ಷಣಾ ವೇದಿಕೆಯ ನಗರ ಘಟಕ ಅಧ್ಯಕ್ಷ ವೆಂಕಟೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಮೋಹನ್, ಒಬಿಸಿ ಘಟಕದ ಅಧ್ಯಕ್ಷ ಬಾಬಾಜಾನ್, ಅಲ್ಲಾಬಕಾಶ್, ಪದಾಧಿಕಾರಿಗಳಾದ ನಾರಾಯಣಪ್ಪ, ಕೃಷ್ಣಪ್ಪ, ರಾಮಾಂಜಿನಪ್ಪ, ಈರಪ್ಪ ಸೇರಿದಂತೆ ಹಲವರು ಇದ್ದರು.

