OG Pre Release Event – ಪವರ್ ಸ್ಟಾರ್ ಪವನ್ ಕಲ್ಯಾಣ್ ನಟಿಸಿರುವ ಬಹುನಿರೀಕ್ಷಿತ ಚಿತ್ರ ‘OG‘ (ಒರಿಜಿನಲ್ ಗ್ಯಾಂಗ್‌ಸ್ಟರ್) ನ ಪ್ರಿ-ರಿಲೀಸ್ ಈವೆಂಟ್ ಅದ್ದೂರಿಯಾಗಿ ನೆರವೇರಿದೆ. ಭಾರೀ ಮಳೆಯ ನಡುವೆಯೂ, ಪವನ್ ಕಲ್ಯಾಣ್ ಅವರು ತಮ್ಮ ಕೈಯಲ್ಲಿ ಕತ್ತಿ ಹಿಡಿದು, ಚಿತ್ರದ ಗ್ಯಾಂಗ್‌ಸ್ಟರ್ ಲುಕ್‌ನಲ್ಲಿ ಅಭಿಮಾನಿಗಳಿಗೆ ಅಚ್ಚರಿ ನೀಡಿದರು. “ಸೋಲು ನನ್ನನ್ನು ತಡೆಯಲಿಲ್ಲ, ಈ ಮಳೆ ನನ್ನನ್ನು ತಡೆಯುತ್ತದೆಯೇ?” ಎಂದು ಮಳೆಯಲ್ಲೇ ನಿಂತು ಭಾಷಣ ಮಾಡಿ ಅಭಿಮಾನಿಗಳನ್ನು ಹುರಿದುಂಬಿಸಿದರು.

OG Pre Release Event – ಮಳೆಯಲ್ಲೇ ಪವರ್ ಸ್ಟಾರ್ ಸ್ಪೀಚ್
ಭಾರೀ ಮಳೆಯ ನಡುವೆಯೂ ಅಭಿಮಾನಿಗಳ ಪ್ರೀತಿಗಾಗಿ ಪವನ್ ಕಲ್ಯಾಣ್ ಭಾಷಣ ಮಾಡಿದರು. ಈ ಬಗ್ಗೆ ಮಾತನಾಡಿದ ಅವರು, “ನಾನು ರಾಜಕೀಯಕ್ಕೆ ಹೋದರೂ ನೀವು ನನ್ನನ್ನು ಬಿಡಲಿಲ್ಲ, ನಿಮ್ಮ ಪ್ರೀತಿಗಾಗಿ ನಾನು ಹೀಗೆ ಹೋರಾಡುತ್ತಿದ್ದೇನೆ. ಈ ದಿನ ಆಕಾಶವೇ ಗುಡುಗುತ್ತಿದೆ, ಇದು ತೆಲುಗನ ಶಕ್ತಿ” ಎಂದು ಹೇಳಿದರು. ತಮ್ಮ ಅಭಿಮಾನಿಗಳಿಗಾಗಿ ಜಪಾನೀಸ್ ಕವಿತೆ “ವಾಷಿ ಯೋ ವಾಷಿ” ಯನ್ನು ಮಳೆಯಲ್ಲೇ ಹೇಳಿದರು.
OG Pre Release Event – ಖುಷಿ ಸಿನಿಮಾದ ಕತ್ತಿಯೇ ಸ್ಫೂರ್ತಿ
ನಿರ್ದೇಶಕ ಸುಜೀತ್ ಬಗ್ಗೆ ಮಾತನಾಡಿದ ಪವನ್, “ಸುಜೀತ್ ನನ್ನ ಅಭಿಮಾನಿ. ಖುಷಿ ಚಿತ್ರದಲ್ಲಿ ನಾನು ಬಳಸಿದ ಕಟಾನ ಕತ್ತಿಯನ್ನು ನೋಡಿ, ಅದರ ಸುತ್ತ ಈ OG ಕಥೆಯನ್ನು ರೂಪಿಸಿದ್ದಾರೆ. ನಿರ್ದೇಶಕ ಸುಜೀತ್ ಹಾಗೂ ಸಂಗೀತ ನಿರ್ದೇಶಕ ಥಮನ್ ಇಬ್ಬರೇ ಈ ಸಿನಿಮಾದ ನಿಜವಾದ ಸ್ಟಾರ್‌ಗಳು. ನಾನು ರಾಜಕೀಯದಲ್ಲಿದ್ದೇನೆ ಎಂಬುದು ಅವರ ಕೆಲಸ ನೋಡಿದಾಗ ಮರೆತುಹೋಯಿತು” ಎಂದು ಹೇಳಿದರು. ಈ ಚಿತ್ರವು 80ರ ದಶಕದ ಹಿನ್ನೆಲೆಯಲ್ಲಿ ಸಾಗುವ ಅದ್ಭುತ ಲವ್ ಸ್ಟೋರಿ ಹೊಂದಿದೆ ಎಂದು ತಿಳಿಸಿದರು. ನಾಯಕಿ ಪ್ರಿಯಾಂಕಾ ಅರುಳ್ ಮೋಹನ್ ಅವರ ಅಭಿನಯವನ್ನು ಪವನ್ ಕೊಂಡಾಡಿದರು. Read this also : ಪವನ್ ಕಲ್ಯಾಣ್ ಚಿತ್ರವನ್ನು ತನ್ನ ರಕ್ತದಲ್ಲಿ ಬಿಡಿಸಿದ ಕಟ್ಟಾಭಿಮಾನಿ, ವೈರಲ್ ಆದ ಪೋಟೋ…!
OG Pre Release Event – ಟ್ರೈಲರ್ ಬಿಡುಗಡೆ ಮುಂದೂಡಿಕೆ
ಇಮ್ರಾನ್ ಹಶ್ಮಿ ಅವರೊಂದಿಗೆ ಕೆಲಸ ಮಾಡಿದ್ದು ಖುಷಿಯಾಗಿದೆ ಎಂದು ಹೇಳಿದ ಪವನ್ ಕಲ್ಯಾಣ್, ಚಿತ್ರದ ಟ್ರೈಲರ್ ಬಿಡುಗಡೆ ಆಗಲಿದೆ ಎಂದು ಮೊದಲು ಘೋಷಿಸಲಾಗಿತ್ತು. ಆದರೆ, ಕೆಲವು ಗ್ರಾಫಿಕ್ಸ್ ಕೆಲಸಗಳು ಬಾಕಿ ಇರುವುದರಿಂದ ಟ್ರೈಲರ್ ಬಿಡುಗಡೆಯನ್ನು ಮುಂದೂಡಲಾಗಿದೆ. ಈ ತಿಂಗಳ 25 (ಸೆಪ್ಟೆಂಬರ್ 25) ರಂದು ಚಿತ್ರವು ಬಿಡುಗಡೆ ಆಗಲಿದೆ ಎಂದು ತಿಳಿಸುವ ಮೂಲಕ ಅಭಿಮಾನಿಗಳಲ್ಲಿ ಮತ್ತಷ್ಟು ಉತ್ಸಾಹ ತುಂಬಿದರು.

