Video – ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ಬಿರ್ಸಾ ಮುಂಡಾ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಘಟನೆಯೊಂದು ಸದ್ಯ ಎಲ್ಲೆಡೆ ಸುದ್ದಿಯಾಗುತ್ತಿದೆ. ಹೆರಿಗೆ ಕೊಠಡಿಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯೆಯ ಮೇಲೆ ಇಬ್ಬರು ಇಂಟರ್ನ್ ವಿದ್ಯಾರ್ಥಿನಿಯರು ಹಲ್ಲೆ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಪ್ರತಿಯೊಬ್ಬರೂ ಮನುಷ್ಯತ್ವವನ್ನು ಮರೆಯುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Video – ವೈದ್ಯರ ಮೇಲೆ ಮನಬಂದಂತೆ ಹಲ್ಲೆ
@indiainyourfeed ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ, ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರನ್ನು ಕರೆದೊಯ್ಯುತ್ತಿರುವಾಗ, ಇಬ್ಬರು ಯುವತಿಯರು ವೈದ್ಯೆಯ ತಲೆಗೂದಲನ್ನು ಹಿಡಿದು ಎಳೆದಾಡುತ್ತಿರುವುದು ಕಾಣುತ್ತದೆ. ಈ ವೇಳೆ ಒಬ್ಬ ಪುರುಷ ವೈದ್ಯರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ. ಆದರೆ, ಆ ಇಬ್ಬರು ವಿದ್ಯಾರ್ಥಿನಿಯರು ಅವರಿಗೂ ಬೆದರಿಕೆ ಹಾಕಿದ್ದಾರೆ ಎಂದು ವಿಡಿಯೋದಲ್ಲಿ ಕಂಡುಬರುತ್ತದೆ. Read this also : ಆಸ್ಪತ್ರೆಯ ಟಾಯ್ಲೆಟ್ ಕಮೋಡ್ ಮೇಲೆ ಬುಸ್ ಬುಸ್ ಎಂದ ಬ್ಲ್ಯಾಕ್ ಕೋಬ್ರಾ, ವೈರಲ್ ಆದ ವಿಡಿಯೋ…!
Video – ಗಲಾಟೆಗೆ ಕಾರಣವೇನು?
ಸೆಪ್ಟೆಂಬರ್ 11ರಂದು ರಾತ್ರಿ 9:30ರ ಸುಮಾರಿಗೆ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಡಾ.ಶಿವಾನಿ ಅವರ ಪ್ರಕಾರ, ಡಾ.ಯೋಗಿತಾ ತ್ಯಾಗಿ ಮತ್ತು ಡಾ.ಶಾನು ಅಗರ್ವಾಲ್ ಎಂಬ ಇಬ್ಬರು ಇಂಟರ್ನ್ ವಿದ್ಯಾರ್ಥಿನಿಯರು ಹೆರಿಗೆ ಕೊಠಡಿಗೆ ನುಗ್ಗಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ನೈಟ್ ಶಿಫ್ಟ್ ಬಗ್ಗೆ ಈ ವಿದ್ಯಾರ್ಥಿನಿಯರ ನಡುವೆ ಉದ್ವಿಗ್ನತೆ ಉಂಟಾಗಿತ್ತು. ಇದೇ ಕಾರಣಕ್ಕೆ ಈ ಘಟನೆ ನಡೆದಿರಬಹುದು ಎನ್ನಲಾಗಿದೆ. ಹಲ್ಲೆಗೊಳಗಾದ ಡಾ.ಶಿವಾನಿಯವರು ಕಾಲೇಜು ಆಡಳಿತ ಮಂಡಳಿಗೆ ಲಿಖಿತ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Video – ವಿಡಿಯೋ ನೋಡಿ ಸಾರ್ವಜನಿಕರ ಆಕ್ರೋಶ
ಈ ವಿಡಿಯೋ ವೈರಲ್ ಆದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಮಹಿಳೆಯೊಬ್ಬರು ಪ್ರಸವ ವೇದನೆಯಲ್ಲಿ ಒದ್ದಾಡುತ್ತಿರುವಾಗ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಹಲವರು ಟೀಕಿಸಿದ್ದಾರೆ. “ಇವರಂತವರು ವೈದ್ಯರಾಗಲು ಅನರ್ಹರು,” ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು “ಇದು ಹೆರಿಗೆ ಕೊಠಡಿಯೋ ಅಥವಾ ಮಾರ್ಕೆಟೋ?” ಎಂದು ಪ್ರಶ್ನಿಸಿದ್ದಾರೆ.
