Viral Video – ರಾಜಸ್ಥಾನದ ಕೋಟಾ ನಗರದ ಎಂ.ಬಿ.ಎಸ್ ಮತ್ತು ಜೆ.ಕೆ. ಲೋನ್ ಆಸ್ಪತ್ರೆಯಲ್ಲಿ ನಡೆದ ಒಂದು ಅಚ್ಚರಿಯ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾತ್ರಿಯ ಹೊತ್ತು ವೈದ್ಯರು ವಾಸಿಸುತ್ತಿದ್ದ ಪಿ.ಜಿ. ಹಾಸ್ಟೆಲ್‍ಗೆ ಪ್ರವೇಶಿಸಿದ ಬ್ಲ್ಯಾಕ್ ಕೋಬ್ರಾ, ಶೌಚಾಲಯದ ಕಮೋಡ್‍ನಲ್ಲಿ ಸೇರಿಕೊಂಡು ವೈದ್ಯರ ನಿದ್ದೆ ಕೆಡಿಸಿದೆ. ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

Viral Video – ವೈದ್ಯರ ಹಾಸ್ಟೆಲ್‍ನಲ್ಲಿ ನುಸುಳಿದ ನಾಗರಹಾವು
ಕಳೆದ ಭಾನುವಾರ ರಾತ್ರಿ, ಹಾಸ್ಟೆಲ್‍ನ ಕೋಣೆಯೊಂದರ ಬಾತ್‍ರೂಮ್‍ನಲ್ಲಿ ಈ ವಿಷಕಾರಿ ಹಾವು ಕಾಣಿಸಿಕೊಂಡಿದೆ. ಹಾವನ್ನು ನೋಡಿದ ಕೂಡಲೇ ವೈದ್ಯರು ಹೆದರಿ, ತಮ್ಮ ಕೋಣೆಯಿಂದ ಹೊರಗೆ ಓಡಿ ಬಂದಿದ್ದಾರೆ. ಕಮೋಡ್ ಪೈಪ್ ಮೂಲಕ ಹಾವು ಒಳಗೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ. Read this also : ಭಯದಲ್ಲಿ ಹಾವನ್ನೇ ಸಾಯಿಸಿದ ಯುವಕ: ನಂತರ ಆಸ್ಪತ್ರೆಗೆ ಓಡಿದ್ದು ಯಾಕೆ?
Viral Video – ಟಾಯ್ಲೆಟ್‍ನಲ್ಲಿದ್ದ ನಾಗರಹಾವಿನ ಭಯಾನಕ ದೃಶ್ಯ
ಬೆಳಿಗ್ಗೆ ಟಾಯ್ಲೆಟ್‍ಗೆ ಹೋದ ರೆಸಿಡೆಂಟ್ ಡಾಕ್ಟರ್ ಮುದಿತ್ ಶರ್ಮಾ ಹಾವನ್ನು ಮೊದಲು ನೋಡಿದರು. ಹೆಡೆ ಎತ್ತಿ ಕುಳಿತಿದ್ದ ಹಾವನ್ನು ನೋಡಿ ಅವರು ಸಂಪೂರ್ಣವಾಗಿ ಗಾಬರಿಗೊಂಡರು. ಕೂಡಲೇ ತಮ್ಮ ಸಹೋದ್ಯೋಗಿಗಳಿಗೆ ಮಾಹಿತಿ ನೀಡಿದರು. ನಂತರ, ಎಲ್ಲರೂ ಸೇರಿ ಭಯದಿಂದಲೇ ಹಾವು ಕಮೋಡ್‍ನೊಳಗೆ ಹೋಗುವಂತೆ ಮಾಡಲು ಜೆಟ್ ಸ್ಪ್ರೇ ಬಳಸಿದರು. ಈ ಸಂಪೂರ್ಣ ದೃಶ್ಯವನ್ನು ವೀಡಿಯೋ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ನಂತರ ಅದು ಭಾರೀ ವೈರಲ್ ಆಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Viral Video – ರಕ್ಷಿಸಿದ ಸ್ನೇಕ್ ಕ್ಯಾಚರ್ ಗೋವಿಂದ್ ಶರ್ಮಾ
ಈ ಭಯಾನಕ ಪರಿಸ್ಥಿತಿಯನ್ನು ನಿಭಾಯಿಸಲು ತಕ್ಷಣವೇ ಹಾವು ಹಿಡಿಯುವ ತಜ್ಞ, ಗೋವಿಂದ್ ಶರ್ಮಾ ಅವರನ್ನು ಕರೆಸಲಾಯಿತು. ಅವರು ಬಹಳ ಕಷ್ಟಪಟ್ಟು ಹಾವನ್ನು ಹಿಡಿದು, ನಂತರ ಅದನ್ನು ಲಾಡ್‍ಪುರಾ ಕಾಡಿಗೆ ಬಿಟ್ಟರು. ಈ ಘಟನೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ದೃಢಪಡಿಸಿದ್ದಾರೆ. ಹಾವು ಕಾಣಿಸಿಕೊಂಡ ನಂತರ ಹಾಸ್ಟೆಲ್‍ನಲ್ಲಿ ಕೆಲಕಾಲ ಭೀತಿಯ ವಾತಾವರಣ ಉಂಟಾಗಿತ್ತು.
