Viral Video – ಸಾಮಾನ್ಯವಾಗಿ ಮನೆಯಲ್ಲಿ ಹಾವು ಕಾಣಿಸಿಕೊಂಡರೆ ಸಾಕು, ಆ ಮನೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗುತ್ತದೆ. ಆದರೆ ಆಸ್ಟ್ರೇಲಿಯಾದ ಒಂದು ಕುಟುಂಬ ಇದಕ್ಕೆ ಸಂಪೂರ್ಣ ತದ್ವಿರುದ್ಧ. ಕಾಡಿನ ಮಧ್ಯೆ ಇರುವ ತಮ್ಮ ಸುಂದರ ಮನೆಗೆ ನುಗ್ಗಿದ ದೈತ್ಯ ಹಾವನ್ನು ಕಂಡು ಈ ಕುಟುಂಬದ ಪುಟ್ಟ ಬಾಲಕಿ ಸ್ವಲ್ಪವೂ ಹೆದರಿಲ್ಲ. ಬದಲಿಗೆ, ಕೈಗೊಂದು ಮಾಪ್ ಹಿಡಿದು ಹಾವನ್ನು ಮನೆಯಿಂದ ಹೊರಗಟ್ಟಿದ್ದಾಳೆ! ಈ ವಿಡಿಯೋ ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ವೈರಲ್ ಆಗಿದ್ದು, ಬಾಲಕಿಯ ಧೈರ್ಯಕ್ಕೆ ನೆಟ್ಟಿಗರು ಸಲಾಂ ಹೇಳಿದ್ದಾರೆ.

Viral Video – ಏನಿದು ವೈರಲ್ ವಿಡಿಯೋ?
ಈ ವೈರಲ್ ವಿಡಿಯೋವನ್ನು ವನ್ಯಜೀವಿ ತಜ್ಞ ಮತ್ತು ಸೋಶಿಯಲ್ ಮೀಡಿಯಾ ವ್ಯಕ್ತಿತ್ವವಾದ ಮ್ಯಾಟ್ ರೈಟ್ (@mattwright) ಅವರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಅವರ ಪುಟ್ಟ ಮಗಳು ಡಸ್ಟಿ, ಮನೆಯ ಡ್ರೆಸ್ಸಿಂಗ್ ಕನ್ನಡಿಯ ಹಿಂದೆ ಅಡಗಿಕೊಂಡಿದ್ದ ದೊಡ್ಡ ಹಾವನ್ನು ತನ್ನ ತಂದೆಗೆ ತೋರಿಸುತ್ತಾಳೆ.
ಸಾಮಾನ್ಯವಾಗಿ ಪೋಷಕರು ಇಂತಹ ಸಮಯದಲ್ಲಿ ಮಗುವನ್ನು ದೂರ ಕಳುಹಿಸುತ್ತಾರೆ. ಆದರೆ ಮ್ಯಾಟ್ ರೈಟ್ ತಮ್ಮ ಮಗಳಿಗೆ, “ಹೋಗಿ ಅದನ್ನ ಹೊರಗೆ ಕಳಿಸು” ಎಂದು ಧೈರ್ಯ ತುಂಬುತ್ತಾರೆ. ತಂದೆಯ ಮಾತಿನಿಂದ ಪ್ರೇರಿತಳಾದ ಪುಟಾಣಿ ಡಸ್ಟಿ, ತಕ್ಷಣವೇ ಒಂದು ಕ್ಲೀನಿಂಗ್ ಮಾಪ್ ತೆಗೆದುಕೊಂಡು, ಹಾವನ್ನು ನಿಧಾನವಾಗಿ ಬಾಗಿಲಿನ ಕಡೆಗೆ ಮಾರ್ಗದರ್ಶನ ಮಾಡಿ ಮನೆಯಿಂದ ಹೊರಗಟ್ಟುತ್ತಾಳೆ. ಈ ಸಂಪೂರ್ಣ ಘಟನೆಯಲ್ಲಿ ಮಗುವಿನ ಮುಖದಲ್ಲಿ ಭಯದ ಲವಲೇಶವೂ ಇರಲಿಲ್ಲ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click here
Viral Video – ಅಮ್ಮನ ರಿಯಾಕ್ಷನ್ ನೋಡಿ ನೆಟ್ಟಿಗರು ಶಾಕ್!
ಈ ವಿಡಿಯೋದ ಅತ್ಯಂತ ಅಚ್ಚರಿಯ ಭಾಗವೆಂದರೆ ಡಸ್ಟಿಯ ತಾಯಿಯ ಪ್ರತಿಕ್ರಿಯೆ. ಮಗಳು ಹಾವನ್ನು ಮನೆಯಿಂದ ಹೊರಗೆ ಓಡಿಸುತ್ತಿರುವಾಗ, ಆಕೆಯ ತಾಯಿ ಏನೂ ಆಗೇ ಇಲ್ಲ ಎಂಬಂತೆ ತಣ್ಣಗೆ ಮನೆಯೊಳಗೆ ನಡೆದುಕೊಂಡು ಬರುತ್ತಾರೆ. ಹಾವನ್ನು ನೋಡಿ ಗಾಬರಿಯಾಗುವ ಬದಲು, “ಇದೆಲ್ಲಾ ಮಾಮೂಲಿ” ಎಂಬಂತೆ ಅವರು ನಡೆದುಕೊಳ್ಳುತ್ತಾರೆ. ಈ ಕುಟುಂಬದ ಧೈರ್ಯ ಮತ್ತು ಶಾಂತ ಸ್ವಭಾವ ಇಂಟರ್‌ನೆಟ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

Viral Video – ಯಾರು ಈ ಮ್ಯಾಟ್ ರೈಟ್?
ವಿಡಿಯೋವನ್ನು ಪೋಸ್ಟ್ ಮಾಡಿದ ಮ್ಯಾಟ್ ರೈಟ್ ಅವರು ಆಸ್ಟ್ರೇಲಿಯಾದಲ್ಲಿ ವನ್ಯಜೀವಿಗಳು ಮತ್ತು ಸರೀಸೃಪಗಳ ಜೊತೆಗಿನ ಒಡನಾಟಕ್ಕೆ ಹೆಸರುವಾಸಿಯಾದವರು. ಅವರು ಆಗಾಗ ಇಂತಹ ಸಾಹಸಮಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಹೀಗಾಗಿ, ಅವರ ಕುಟುಂಬ ಕೂಡ ಪ್ರಾಣಿಗಳೊಂದಿಗೆ ವ್ಯವಹರಿಸುವ ಕಲೆಯನ್ನು ಕಲಿತಿರುವುದರಲ್ಲಿ ಆಶ್ಚರ್ಯವಿಲ್ಲ. Read this also : ಅಬ್ಬಬ್ಬಾ! ಇಷ್ಟೊಂದು ದೊಡ್ಡ ಹಾವು ಅಂದ್ರೆ ಸುಮ್ನೆನಾ? ನೋಡಿದ್ರೆ ಎದೆ ಝಲ್ಲೆನ್ನುತ್ತೆ, ವೈರಲ್ ಆದ ವಿಡಿಯೋ…!
ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ
ಈ ವಿಡಿಯೋ ನೋಡಿದ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರರು, “ನಿಮ್ಮ ಮೂವರ ಬದಲು ನಾನೇ ನಿಮಗೋಸ್ಕರ ಕಿರುಚಿಕೊಂಡೆ!” ಎಂದು ತಮಾಷೆಯಾಗಿ ಬರೆದಿದ್ದಾರೆ. ಇನ್ನೊಬ್ಬರು, “ಅಬ್ಬಾ! ನಿಮ್ಮ ಪತ್ನಿ ಹಾವಿನ ಪಕ್ಕದಲ್ಲೇ ನಡೆದು ಹೋಗುತ್ತಿದ್ದಾರೆ, ಆದರೆ ಅವರಿಗೆ ಯಾವುದೇ ಚಿಂತೆಯಿಲ್ಲ” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, “ದಿನಕ್ಕೆ ಐದು ಬಾರಿ ಹಾವು ಬಂದು ಹೋಗುತ್ತೆ ಅನ್ನುವ ಹಾಗೆ ನಿಮ್ಮ ಅಮ್ಮ ನಡೆದುಕೊಂಡು ಹೋದರು” ಎಂದು ಕಾಮೆಂಟ್ ಮಾಡಿದ್ದಾರೆ. “ನಿಮ್ಮ ಮಗಳಿಗೆ ಭಯಪಡದಂತೆ ಮತ್ತು ಸಮಸ್ಯೆಯನ್ನು ಹೇಗೆ ಪರಿಹರಿಸಬೇಕೆಂದು ಕಲಿಸುತ್ತಿರುವುದು ಅದ್ಭುತ ಎಂದು ಹಲವರು ಮ್ಯಾಟ್ ರೈಟ್ ಅವರ ಪಾಲನೆಯನ್ನು ಶ್ಲಾಘಿಸಿದ್ದಾರೆ. “ನಾನು ಯುಕೆಯಲ್ಲಿದ್ದುಕೊಂಡೇ ಕುರ್ಚಿಯ ಮೇಲೆ ನಿಂತುಕೊಂಡಿದ್ದೇನೆ! ನಿಮ್ಮ ಮಗಳು ಎಷ್ಟು ಧೈರ್ಯವಂತೆ ಮತ್ತು ಬುದ್ಧಿವಂತೆ” ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.
