Viral Video – ಸಂಬಂಧಗಳಿಗೆ ಬೆಲೆ ಇಲ್ಲದ ಇಂದಿನ ದಿನಗಳಲ್ಲಿ, ಆಸ್ತಿಗಾಗಿ ಹಿರಿಯರ ಮೇಲೆ ದೌರ್ಜನ್ಯ ನಡೆಸುವ ಘಟನೆಗಳು ಹೆಚ್ಚುತ್ತಿವೆ. ಇಂತಹದ್ದೇ ಒಂದು ಘಟನೆ ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯಲ್ಲಿ ನಡೆದಿದೆ. ಆಸ್ತಿ ಆಸೆಗೆ ಬಿದ್ದ ಸೊಸೆಯೊಬ್ಬಳು ತನ್ನ 87 ವರ್ಷದ ಮಾವನ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Viral Video – ಏನಿದು ಘಟನೆ?
ಪ್ರತಾಪ್‌ಗಢದ ಅಂಟು ಪೊಲೀಸ್ ಠಾಣಾ ವ್ಯಾಪ್ತಿಯ ಸರಾಯ್ ಕಲ್ಯಾಣದೇವ್ ಗ್ರಾಮದ ನಿವಾಸಿ, 87 ವರ್ಷದ ವಿಶ್ವನಾಥ್ ತಿವಾರಿ ಅವರು ತಮ್ಮ ಸಹೋದರನ ಪುತ್ರ ಓಂಕಾರನಾಥ್ ಅವರೊಂದಿಗೆ ವಾಸಿಸುತ್ತಿದ್ದರು. ವಿಶ್ವನಾಥ್ ಅವರು ತಮ್ಮ ಸಂಪೂರ್ಣ ಆಸ್ತಿಯನ್ನು ಸಹೋದರನ ಮಕ್ಕಳಿಗೆ ಬರೆದಿದ್ದಾರೆ. ಓಂಕಾರನಾಥ್ ಉತ್ತರಾಖಂಡದಲ್ಲಿ ಉದ್ಯೋಗದಲ್ಲಿರುವುದರಿಂದ, ಅವರ ಪತ್ನಿ ಸುನೀತಾ ತಿವಾರಿ ಮನೆಯಲ್ಲಿದ್ದು, ಮಾವನ ಆರೈಕೆ ಮಾಡುತ್ತಿದ್ದರು. Read this also : ಪ್ರೇಮಿಗಾಗಿ ಮಕ್ಕಳನ್ನು ಬಿಟ್ಟುಹೋದ ತಾಯಿ, ನೀನು ಬೇಕಮ್ಮ, ಬಿಟ್ಟು ಹೋಗ್ಬೇಡ ಎಂದು ಬೇಡಿಕೊಂಡ ಮಕ್ಕಳು..!
ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ವಿಡಿಯೋದಲ್ಲಿ, ಸುನೀತಾ ತಿವಾರಿ ಅವರು ವೃದ್ಧ ಮಾವನ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Viral Video – ಘಟನೆ ಕುರಿತು ಗ್ರಾಮಸ್ಥರ ಹೇಳಿಕೆ
ವಿಡಿಯೋ ವೈರಲ್ ಆದ ಕೂಡಲೇ, ಅಂಟು ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಆನಂದಪಾಲ್ ಭದೌರಿಯಾ ಅವರು ವಿಶ್ವನಾಥ್ ಅವರ ಮನೆಗೆ ಭೇಟಿ ನೀಡಿ, ಸುನೀತಾ ಮತ್ತು ಗ್ರಾಮಸ್ಥರನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ, ವಿಶ್ವನಾಥ್ ಅವರ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ತಿಳಿದುಬಂದಿದೆ. ಗ್ರಾಮಸ್ಥರ ಹೇಳಿಕೆ ಪ್ರಕಾರ, ಸುನೀತಾ ಒಬ್ಬಳೇ ವೃದ್ಧನ ಆರೈಕೆ ಮಾಡುತ್ತಿದ್ದರು. ಆದರೆ, ಕೋಪದಿಂದ ಹಲ್ಲೆ ಮಾಡಿದ್ದು, ನಂತರ ಕ್ಷಮೆಯಾಚಿಸಿದ್ದಾರೆ ಎಂದು ಹೇಳಿದ್ದಾರೆ. ಪೊಲೀಸರು ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದು, ಸುನೀತಾ ವಿರುದ್ಧ ಕಾನೂನು ಕ್ರಮ ಜರುಗಿಸಲು ತಯಾರಿ ನಡೆಸುತ್ತಿದ್ದಾರೆ.