Sunday, October 26, 2025
HomeNationalSnake : ಭಯದಲ್ಲಿ ಹಾವನ್ನೇ ಸಾಯಿಸಿದ ಯುವಕ: ನಂತರ ಆಸ್ಪತ್ರೆಗೆ ಓಡಿದ್ದು ಯಾಕೆ?

Snake : ಭಯದಲ್ಲಿ ಹಾವನ್ನೇ ಸಾಯಿಸಿದ ಯುವಕ: ನಂತರ ಆಸ್ಪತ್ರೆಗೆ ಓಡಿದ್ದು ಯಾಕೆ?

ಹಾವು (Snake) ಎಂದರೆ ಯಾರಿಗೆ ತಾನೇ ಭಯವಿಲ್ಲ? ಅದರಲ್ಲೂ ವಿಷಪೂರಿತ ಹಾವುಗಳನ್ನು ನೋಡಿದರೆ ಮೈಯೆಲ್ಲಾ ನಡುಗುವುದು ಸಹಜ. ಇಂತಹ ಭಯಾನಕ ಸನ್ನಿವೇಶವೊಂದು ಉತ್ತರ ಪ್ರದೇಶದ ಲಲಿತಪುರದಲ್ಲಿ ನಡೆದಿದೆ. ಇಲ್ಲೊಬ್ಬ ಯುವಕನಿಗೆ ಹಾವು ಕಚ್ಚಿದೆ ಎಂದು ಎಲ್ಲರೂ ಭಾವಿಸಿದ್ದರೆ, ಅಲ್ಲಿ ನಡೆದಿರುವ ಘಟನೆಯೇ ಬೇರೆ.

Lalitpur viral news: Snake slithers over man’s body

Snake – ಮಲಗಿದ್ದಾಗ ಮೈ ಮೇಲೆ ಹರಿದಾಡಿದ ನಾಗರ ಹಾವು

ಲಲಿತಪುರದ ತಿಸ್ಗಾನಾ ಗ್ರಾಮದ 32 ವರ್ಷದ ಗೋವಿಂದ್ ಎಂಬ ಯುವಕ ಮಲಗಿದ್ದಾಗ ಅವನ ಮೈ ಮೇಲೆ ಹಾವು ಹರಿದಾಡಿದೆ. ಇದೇ ಸಮಯದಲ್ಲಿ ಎಚ್ಚರಗೊಂಡ ಗೋವಿಂದ್ ಭಯದಿಂದ ಹಾವಿನ ತಲೆಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡಿದ್ದಾನೆ. ಆ ಹಾವು ಅಲ್ಲಿಂದ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ, ಗೋವಿಂದ್ ಹಾವಿನ ತಲೆಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದನು. ಸುಮಾರು 30 ನಿಮಿಷಗಳ ಕಾಲ ಇದೇ ರೀತಿ ಹಿಡಿದಿದ್ದರಿಂದ ಹಾವು ಸತ್ತು ಹೋಗಿದೆ.

Snake – ಹಾವಿನ ಭಯದಿಂದ ಆಸ್ಪತ್ರೆಗೆ ಓಡಿದ ಗೋವಿಂದ್

ತನ್ನ ಕೈಯಲ್ಲೇ ಹಾವು ಸತ್ತಿದ್ದನ್ನು ಕಂಡ ಗೋವಿಂದ್‌ಗೆ ತೀವ್ರ ಭಯ ಶುರುವಾಗಿದೆ. ತನಗೆ ಹಾವು ಕಚ್ಚಿರಬಹುದು ಎಂದುಕೊಂಡು ಜೋರಾಗಿ ಕಿರುಚಲು ಪ್ರಾರಂಭಿಸಿದ್ದಾನೆ. ಇದನ್ನು ಕೇಳಿದ ಕುಟುಂಬದ ಸದಸ್ಯರು ಗಾಬರಿಗೊಂಡು, ತಕ್ಷಣ ಗೋವಿಂದ್‌ರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸಿಎಚ್‌ಸಿ ಮಾಧವರ ಆಸ್ಪತ್ರೆಯಲ್ಲಿ ದಾಖಲಾದ ಗೋವಿಂದ್, ವೈದ್ಯರ ಬಳಿ “ಡಾಕ್ಟರ್, ದಯವಿಟ್ಟು ನನ್ನನ್ನು ಉಳಿಸಿ, ನನಗೆ ಹಾವು ಕಚ್ಚಿದೆ” ಎಂದು ಆತಂಕದಿಂದ ಹೇಳಿಕೊಂಡಿದ್ದಾನೆ. Read this also : ನಿನಗಿದು ಬೇಕಿತ್ತಾ ಮಗನೇ, ಹಾವಿಗೆ ಮುತ್ತಿಟ್ಟ ಯುವಕ, ಕಚ್ಚಿಸಿಕೊಂಡು ಆಸ್ಪತ್ರೆ ಪಾಲಾದ…!

Lalitpur viral news: Snake slithers over man’s body

Snake – ವೈದ್ಯಕೀಯ ಪರೀಕ್ಷೆ ಮತ್ತು ಸತ್ಯಾಂಶ

ಗೋವಿಂದ್ ಮಾತು ಕೇಳಿ ವೈದ್ಯರ ತಂಡ ತಕ್ಷಣವೇ ಆತನನ್ನು ಪರೀಕ್ಷಿಸಿದ್ದಾರೆ. ಆದರೆ, ಆತನ ದೇಹದಲ್ಲಿ ಯಾವುದೇ ಹಾವು ಕಚ್ಚಿದ ಗಾಯಗಳು ಪತ್ತೆಯಾಗಿಲ್ಲ. ಹಾವಿನ ವಿಷದ ಪರಿಣಾಮವೂ ಆತನ ಮೇಲೆ ಇಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಕೇವಲ ಭಯದಿಂದ ಗೋವಿಂದ್ ಆಸ್ಪತ್ರೆಗೆ ಬಂದಿದ್ದಾನೆ ಎಂಬ ಸತ್ಯ ನಂತರ ಬಯಲಾಗಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular