ಲೋಕಸಭಾ ಚುನಾವಣೆ 2024 ನಿಮಿತ್ತ ರಾಜಕೀಯ ಪಕ್ಷಗಳ ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿಯೇ ಇದೆ. ಪ್ರಧಾನಿ ನರೇಂದ್ರ ಮೋದಿಯವರು ಇಂಡಿಯಾ ಮೈತ್ರಿ ಕೂಟದ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಒಂದು ವೇಳೆ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೇ ಕಾಂಗ್ರೇಸ್ ಹಾಗೂ ಸಮಾಜವಾದಿ ಪಕ್ಷ ರಾಮಮಂದಿರವನ್ನು ಬುಲ್ಡೋಜರ್ ನಿಂದ ಬೀಳಿಸುತ್ತದೆ ಎಂದು ಆರೋಪಿಸಿದ್ದಾರೆ.
ಚುನಾವಣಾ ಪ್ರಚಾರ ನಿಮಿತ್ತ ಇಂಡಿಯಾ ಮೈತ್ರಿಕೂಟದ ವಿರುದ್ದ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಮಾಜವಾದಿ ಹಾಗೂ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದರೇ ರಾಮಲಲ್ಲಾನನ್ನು ಟೆಂಟ್ ಗೆ ಕಳುಹಿಸುತ್ತೇವೆ. ದೇವಸ್ಥಾನದ ಮೇಲೆ ಬುಲ್ಡೋಜರ್ ಬಿಡುತ್ತೇವೆ ಎಂದು ಹೇಳಿದ್ದರು ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ. ಇಂಡಿಯಾ ಮೈತ್ರಿಕೂಟ ರಾಮಮಂದಿರ ನಿರ್ಮಾಣಕ್ಕೆ ತುಂಬಾ ವಿರೋಧ ಮಾಡಿತ್ತು. ಇದೀಗ ಅವರು ಅಧಿಕಾರಕ್ಕೆ ಬಂದರೇ ಮತ್ತೆ ರಾಮಮಂದಿರ ಟೆಂಟ್ ಗೆ ಶಿಫ್ಟ್ ಮಾಡಬಹುದು ಎಂದಿದ್ದಾರೆ.
ಇನ್ನೂ ಸ್ವಾತಂತ್ಯ್ರ ಹೋರಾಟದ ಸಂದರ್ಭದಲ್ಲಿ ದೇಶದ ವಿಭಜನೆಯ ಕುರಿತು ಮಾತುಗಳು ಕೇಳಿಬಂತು. ಆ ಸಮಯದಲ್ಲಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದರು. ದೇಶ ವಿಭಜನೆಯಾಗಬಹುದೇ? ಅದು ಸಂಭವಿಸಿದೆ ಅಲ್ಲವೇ, ಅವರು ಮಾಡಿದ್ದಾರೋ ಇಲ್ಲವೋ. ವಿಭಜನೆಯಲ್ಲಿ ಯಾವ ಹಂತಕ್ಕೆ ಹೋಗಬಹುದು ಎಂಬ ಪ್ರಶ್ನೆಗಳು ಉದ್ಬವಿಸಿದೆ ಎಂದು, ಕಾಂಗ್ರೇಸ್ ನವರಿಗೆ ದೇಶ ಮುಖ್ಯವಲ್ಲ, ಅವರಿಗೆ ಅಧಿಕಾರ ಹಾಗೂ ಕುಟುಂಬ ಮುಖ್ಯ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಇನ್ನೂ ಉತ್ತರ ಪ್ರದೇಶ ಲಾಲ್ ಗಂಜ್ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಪ್ರಚಾರದಲ್ಲಿ ಮಾತನಾಡಿದ ಅವರು, ದೇಶವನ್ನು ನಾಶ ಮಾಡಲು ಆ ಎರಡೂ ಪಕ್ಷಗಳು ತಮ್ಮ ಶಕ್ತೀ ಮೀರಿ ಪ್ರಯತ್ನಿಸುತ್ತಿವೆ. ಮೋದಿ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಮುಂದೊಂದು ದಿನ ಸಿಎಎ ತೆಗೆದುಹಾಕುತ್ತೇವೆ ಎಂದು ಇಂಡಿ ಕೂಟದ ನಾಯಕರು ಹೇಳುತ್ತಿದ್ದಾರೆ. ಆದರೆ ದೇಶದಲ್ಲಿ ಅಂಥಹ ವ್ಯಕ್ತಿ ಹುಟ್ಟಿದ್ದಾನಾ ಎಂದು ಮೋದಿ ಪ್ರಶ್ನೆ ಮಾಡಿದ್ದಾರೆ. ಈಗಾಗಲೇ ಮೊದಲ ಹಂತದಲ್ಲಿ ವಿದೇಶದಿಂದ ಬಂದಂತಹವರಿಗೆ ಮೊದಲ ಹಂತದಲ್ಲಿ ಪೌರತ್ವ ಪ್ರಮಾಣ ಪತ್ರ ನೀಡಿದ್ದೇವೆ. ಅದನ್ನು ತಡೆಯಲು ನಿಮ್ಮಲ್ಲಿ ಎಷ್ಟೆಲ್ಲಾ ಸಾಮರ್ಥ್ಯವಿದೆಯೋ ಅದನ್ನೆಲ್ಲಾ ಬಳಸಲಿ ಎಂದು ಮೋದಿ ಸವಾಲಾಕಿದ್ದರು.