Chitradurga – ಎಚ್‌ಐವಿ (HIV) ಸೋಂಕು ತಗುಲಿರುವ ಕಾರಣಕ್ಕೆ ತನ್ನ ಸ್ವಂತ ಸಹೋದರನನ್ನೇ ಆತನ ಅಕ್ಕ ತನ್ನ ಪತಿಯೊಂದಿಗೆ ಸೇರಿಕೊಂಡು ಕೊಲೆಗೈದಿರುವ ಆಘಾತಕಾರಿ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದಲ್ಲಿ ನಡೆದಿದೆ. ಕುಟುಂಬದ ಗೌರವಕ್ಕೆ ಧಕ್ಕೆಯಾಗಬಹುದೆಂಬ ಆತಂಕವೇ ಈ ಹೇಯ ಕೃತ್ಯಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

Chitradurga – ಘಟನೆಯ ವಿವರಗಳು
ದುಮ್ಮಿ ಗ್ರಾಮದ ನಾಗರಾಜ್ ಅವರ ಪುತ್ರ ಮಲ್ಲಿಕಾರ್ಜುನ್ (23) ಕೊಲೆಯಾದ ದುರ್ದೈವಿ. ಈ ಪ್ರಕರಣದಲ್ಲಿ ಮಲ್ಲಿಕಾರ್ಜುನ್‌ನ ಅಕ್ಕ ನಿಶಾ ಮತ್ತು ಆಕೆಯ ಪತಿ ಮಂಜುನಾಥ್ ಕೊಲೆ ಆರೋಪಿಗಳಾಗಿದ್ದು, ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ನೌಕರ: ಮಲ್ಲಿಕಾರ್ಜುನ್ ಬೆಂಗಳೂರಿನಲ್ಲಿ ಗಾರ್ಮೆಂರ್ಟ್ಸ್ ಉದ್ಯೋಗಿಯಾಗಿದ್ದ. ಜುಲೈ 23ರಂದು ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಸ್ವಗ್ರಾಮ ದುಮ್ಮಿಗೆ ಬರುತ್ತಿದ್ದಾಗ, ಹಿರಿಯೂರು ತಾಲ್ಲೂಕಿನ ಐಮಂಗಲ ಬಳಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಆತನ ಕಾಲು ಮುರಿದುಬಿದ್ದ ಕಾರಣ, ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Chitradurga – HIV ಸೋಂಕು ಪತ್ತೆ ಮತ್ತು ಕೊಲೆ
ಆಸ್ಪತ್ರೆಯಲ್ಲಿ ಮಲ್ಲಿಕಾರ್ಜುನ್‌ಗೆ ರಕ್ತ ಪರೀಕ್ಷೆ ನಡೆಸಿದಾಗ ಆತನಿಗೆ ಎಚ್‌ಐವಿ ಸೋಂಕು ಇರುವುದು ಪತ್ತೆಯಾಗಿದೆ. ಜುಲೈ 25ರಂದು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯಿಂದ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ, ಅಕ್ಕ ನಿಶಾ ತನ್ನ ಪತಿ ಮಂಜುನಾಥ್‌ನೊಂದಿಗೆ ಸೇರಿಕೊಂಡು ಆಂಬುಲೆನ್ಸ್‌ನಲ್ಲಿಯೇ ಮಲ್ಲಿಕಾರ್ಜುನ್‌ನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
Chitradurga – ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಮಲ್ಲಿಕಾರ್ಜುನ್‌ನ ಅಂತ್ಯಕ್ರಿಯೆ ಸಂದರ್ಭದಲ್ಲಿ, ಆತನ ಕುತ್ತಿಗೆಯ ಮೇಲೆ ಗಾಯದ ಗುರುತುಗಳನ್ನು ಗಮನಿಸಿದ ಸಂಬಂಧಿಕರು ಮತ್ತು ಗ್ರಾಮಸ್ಥರಿಗೆ ಅನುಮಾನ ಮೂಡಿದೆ. ತಕ್ಷಣವೇ ಮೃತ ಮಲ್ಲಿಕಾರ್ಜುನ್‌ನ ತಂದೆ ನಾಗರಾಜ್ ಅವರು ಹೊಳಲ್ಕೆರೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪೊಲೀಸರ ತನಿಖೆಯ ಸಂದರ್ಭದಲ್ಲಿ, ಮಲ್ಲಿಕಾರ್ಜುನ್‌ಗೆ ಎಚ್‌ಐವಿ ಸೋಂಕು ಇರುವುದು ಮತ್ತು ಇದೇ ಕಾರಣಕ್ಕಾಗಿ ಅಕ್ಕನಿಂದಲೇ ಹತ್ಯೆ ನಡೆದಿರುವುದು ಬಯಲಾಗಿದೆ.

Read this also : ದೆಹಲಿಯಲ್ಲಿ ಆಘಾತಕಾರಿ ಘಟನೆ: ಮೈದುನನೊಂದಿಗೆ ಅಫೈರ್, ಅಕ್ರಮ ಸಂಬಂಧಕ್ಕಾಗಿ ಗಂಡನನ್ನೇ ಕೊಂದ ಪತ್ನಿ..!
Chitradurga – ಆಸ್ತಿ ವಿವಾದದ ಅನುಮಾನ?
ಮೃತ ಮಲ್ಲಿಕಾರ್ಜುನ್‌ನ ಸಹೋದರಿ ನಿಶಾ ಅಂತರ್ಜಾತಿ ವಿವಾಹವಾಗಿದ್ದು, ಆಸ್ತಿ ಆಸೆಗೆ ಈ ಕೊಲೆ ಮಾಡಿರುವ ಆರೋಪವೂ ಕೇಳಿಬಂದಿದೆ. ಈ ಘಟನೆ ದುಮ್ಮಿ ಗ್ರಾಮದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಗ್ರಾಮಸ್ಥರು ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ಸದ್ಯ ಹೊಳಲ್ಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ನಿಶಾನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
