Health Camp – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಮರಣ ಹೊಂದಿದ ವೀರ ಸೈನಿಕರ ಸ್ಮರಣಾರ್ಥವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಆಕಾಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಈ ಶಿಬಿರ ಆಯೋಜಿಸಲಾಗಿತ್ತು.
Health Camp – ಸೈನಿಕರನ್ನು ದೇವರಂತೆ ಪೂಜಿಸಬೇಕು : ಅಂಬರೀಶ್
ಈ ಸಂದರ್ಭದಲ್ಲಿ ಮಾತನಾಡಿದ ಬಜರಂಗದಳದ ಜಿಲ್ಲಾ ಸಂಚಾಲಕ ಅಂಬರೀಶ್, ಪ್ರತಿ ವರ್ಷವೂ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದಂತಹ ವೀರ ಯೋಧರ ನೆನಪಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು. ಪ್ರತಿಯೊಬ್ಬರೂ ವೀರ ಯೋಧರನ್ನು ಪೂಜಿಸಬೇಕು ಎಂದು ಕರೆ ನೀಡಿದ ಅವರು, ಗಡಿಯಲ್ಲಿ ಯೋಧರು ನಮ್ಮನ್ನು ಕಾಪಾಡಲು ಹಗಲಿರುಳು ಶ್ರಮಿಸುತ್ತಾರೆ, ಅವರನ್ನು ದೇವರಂತೆ ಪೂಜಿಸಬೇಕು ಎಂದರು. ಯುವಜನತೆ ಹೆಚ್ಚಾಗಿ ಸೇನೆಗೆ ಸೇರಿ ದೇಶವನ್ನು ಕಾಪಾಡುವಂತಹ ಕೆಲಸ ಮಾಡಬೇಕು ಎಂದು ಅವರು ಪ್ರೇರೇಪಿಸಿದರು. ಗುಡಿಬಂಡೆ ಭಾಗದಲ್ಲಿ ಹೆಚ್ಚು ಬಡವರೇ ಇರುವುದರಿಂದ ಇಂತಹ ಆರೋಗ್ಯ ಶಿಬಿರಗಳು ಸಹಕಾರಿಯಾಗಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅಂಬರೀಶ್ ಹೇಳಿದರು.
Health Camp – ಆಪರೇಷನ್ ಸಿಂಧೂರ, ವಿಶ್ವಕ್ಕೆ ಭಾರತದ ತಾಕತ್ತು ತೋರಿಸಿದೆ : ಶ್ರೀನಾಥ್
ನಂತರ ಮಾತನಾಡಿದ ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಾಥ್, ಇತ್ತೀಚೆಗೆ ಪೆಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ನಡೆದ ಆಪರೇಷನ್ ಸಿಂಧೂರ ಭಾರತೀಯರೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಬಣ್ಣಿಸಿದರು. ವೀರ ಯೋಧರು ಪಾಕಿಸ್ತಾನಿ ಭಯೋತ್ಪಾದಕರ ಮೇಲೆ ಪ್ರತೀಕಾರ ತೀರಿಸಿಕೊಂಡಿದ್ದಾರೆ ಎಂದ ಅವರು, ಈ ದಾಳಿಯಲ್ಲಿ ಮಡಿದ ಅನೇಕ ಯೋಧರಿಗೆ ನಾವೆಲ್ಲರೂ ಚಿರ ಋಣಿಯಾಗಿರಬೇಕು ಹಾಗೂ ಅವರನ್ನು ಸದಾ ಸ್ಮರಿಸಬೇಕು ಎಂದು ತಿಳಿಸಿದರು. ಆಪರೇಷನ್ ಸಿಂಧೂರದ ಮೂಲಕ ಇಡೀ ವಿಶ್ವಕ್ಕೆ ಭಾರತದ ತಾಕತ್ತು ಏನು ಎಂಬುದನ್ನು ತೋರಿಸಲಾಗಿದೆ ಎಂದು ಶ್ರೀನಾಥ್ ನುಡಿದರು.
Read this also : Goat Milk : ತಾಯಿಯ ಎದೆ ಹಾಲಿನಷ್ಟೇ ಶಕ್ತಿ, ಅದ್ಭುತ ಪ್ರಯೋಜನಗಳ ಕಣ, ಮಾಹಿತಿಗಾಗಿ ಈ ಸುದ್ದಿ ಓದಿ…!
Health Camp – ಶಿಬಿರದಲ್ಲಿ ಹಾಜರಿದ್ದ ಗಣ್ಯರು
ಶಿಬಿರದಲ್ಲಿ ವಿಶ್ವ ಹಿಂದೂ ಪರಿಷತ್ ವಿಭಾಗ ಸಂಘಟನಾ ಕಾರ್ಯದರ್ಶಿ ಸಾಗರ್, ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ, ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕದ ಕಾರ್ಯದರ್ಶಿ ಉಲ್ಲೋಡು ಪ್ರಹ್ಲಾದ ರಾವ್, ಬಜರಂಗದಳ ಜಿಲ್ಲಾ ಗೋ ರಕ್ಷಾ ಪ್ರಮುಖ ಮನೋಜ್, ತಾಲ್ಲೂಕು ಸಂಚಾಲಕ ಗಗನ, ಕಾರ್ಯದರ್ಶಿ ರಾಹುಲ್, ಮುಖಂಡರಾದ ಗಜೇಂದ್ರ, ವರುಣ್, ಗಂಗರಾಜ, ಅಮರ್ನಾಥ್, ನಾಗೇಶ್, ರಾಮಂಜಿ, ಆಕಾಶ್ ಆಸ್ಪತ್ರೆ ಶಿಬಿರ ಸಂಯೋಜಕ ಮುರಳಿ, ಗಿರೀಶ್ ಮುಂತಾದವರು ಭಾಗವಹಿಸಿದ್ದರು.