ಮೈಸೂರಿನ ಸಂತ್ರಸ್ತೆ ಮಹಿಳೆಯನ್ನು ಅಪಹರಣ ಮಾಡಿದ ಆರೋಪದ ಮೇರೆಗೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಹೆಚ್.ಡಿ.ರೇವಣ್ಣ ಷರತ್ತು ಬದ್ದ ಜಾಮೀನು ಮೇರೆಗೆ ಬಿಡುಗಡೆಯಾಗಿದ್ದು, ತಾತ್ಕಲಿಕವಾಗಿ ಅವರಿಗೆ ರಿಲೀಫ್ ಸಿಕ್ಕಿದೆ ಎನ್ನಲಾಗಿದೆ. ಜೈಲಿನಿಂದ ಬಂದ ಕೂಡಲೇ ಅವರು ಬೆಂಗಳೂರಿನ ಪದ್ಮನಾಭನಗರದಲ್ಲಿರುವ ದೇವೆಗೌಡರ ಮನೆಗೆ ತೆರಳಿ ತಂದೆ ತಾಯಿ ಆರ್ಶಿವಾದ ಪಡೆದು ಬಳಿಕ ದೇವಾಲಯಗಳಿಗೆ ಭೇಟಿ ನೀಡಿದರು. ಜೈಲಿನಿಂದ ಹೊರಬಂದ ಬಳಿಕ ಮೊದಲ ಬಾರಿಗೆ ಮಾದ್ಯಮಗಳೊಂದಿಗೆ ಮಾತನಾಡಿದ್ದಾರೆ.
ಮಾಜಿ ಸಚಿವ ಹೆಚ್.ಡಿ.ರೇವಣ್ಣ ಜೈಲಿನಿಂದ ಹೊರಬಂದ ಕೂಡಲೇ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಹೆಚ್.ಡಿ.ದೇವೇಗೌಡ ರವರ ಮನೆಗೆ ತೆರಳಿ ತಂದೆ ತಾಯಿ ಆರ್ಶಿವಾದ ಪಡೆದುಕೊಂಡರು. ಬಳಿಕ ಜೆ.ಪಿ.ನಗರದ ಲಕ್ಷ್ಮೀ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಮಯದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದರು. ನನಗೆ ನ್ಯಾಯಾಂಗದ ಬಗ್ಗೆ ನಂಬಿಕೆ ಹಾಗೂ ಅಪಾರ ಗೌರವ ಇದೆ. ಕಳೆದ ಹನ್ನೊಂದು ದಿನಗಳಿಂದ ಕಾನೂನು ಪಾಲನೆ ಮಾಡಿದ್ದೇನೆ. ನನಗೆ ದೇವರ ಮೇಲೆ ನಂಬಿಕೆ ಇದೆ. ಶೀಘ್ರದಲ್ಲೇ ಈ ಆಪಾದನೆಯಿಂದ ಹೊರಬರುತ್ತೇನೆ. ನ್ಯಾಯಾಂಗದ ಆದೇಶಗಳನ್ನು ಪಾಲನೆ ಮಾಡುತ್ತೇನೆ. ಈ ಕುರಿತು ಹೆಚ್ಚಿಗೆ ಮಾತನಾಡೊಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೂ ಜೈಲಿನಿಂದ ಹೊರಬಂದ ಬಳಿಕ ಮಾಜಿ ಪ್ರಧಾನಿ ದೇವೇಗೌಡರ ಮನೆಯ ಬಳಿಕ ರೇವಣ್ಣ ತಮ್ಮ ಅಭಿಮಾನಿಗಳು ಹಾಗೂ ಕಾರ್ಯಕರ್ತರನ್ನು ಭೇಟಿ ಯಾದರು. ಈ ವೇಳೆ ಕಾರ್ಯಕರ್ತರ ಮುಂದೆ ರೇವಣ್ಣ ಕಣ್ಣೀರಾಕಿದ್ದಾರೆ. ರೇವಣ್ಣ ಕಣ್ಣೀರನ್ನು ಕಂಡು ಅಭಿಮಾನಿಗಳೂ ಸಹ ಕಣ್ಣಿರಾಕಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ನೀವು ಅಳಬೇಡಿ ಎಂದು ಕಾರ್ಯಕರ್ತರು ಧೈರ್ಯ ತುಂಬಿದ್ದಾರೆ. ಇನ್ನೂ ಇಂದೂ ಸಹ ರೇವಣ್ಣ ರಾಜ್ಯದ ಹಲವು ದೇವಾಲಯಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.