Divorce – ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಸಣ್ಣಪುಟ್ಟ ಕಾರಣಗಳಿಗೂ ದಂಪತಿಗಳು ದೂರಾಗುತ್ತಿದ್ದಾರೆ. ಇನ್ನು ಕೆಲವು ಕಥೆಗಳಂತೂ ಅಚ್ಚರಿ ಮೂಡಿಸುತ್ತವೆ. ಮದುವೆಯಾಗಿ ಮಕ್ಕಳಿದ್ದರೂ ಬೇರೊಬ್ಬರ ಜೊತೆ ಓಡಿಹೋಗುವ ಘಟನೆಗಳು ಸಮಾಜದಲ್ಲಿ ಹೆಚ್ಚಾಗುತ್ತಿವೆ. ಇಂತಹದ್ದೇ ಒಂದು ಘಟನೆ ಅಸ್ಸಾಂನಲ್ಲಿ ನಡೆದಿದ್ದು, ವಿಚಿತ್ರ ತಿರುವು ಪಡೆದುಕೊಂಡಿದೆ. ಪತ್ನಿ ಬೇರೊಬ್ಬರ ಜೊತೆ ಓಡಿಹೋದ ಕಾರಣ ವಿಚ್ಛೇದನ ಪಡೆದ ಪತಿಯೊಬ್ಬರು, ತಮ್ಮ “ಸ್ವಾತಂತ್ರ್ಯ”ವನ್ನು ಹಾಲಿನಲ್ಲಿ ಸ್ನಾನ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
Divorce – ಪತ್ನಿಗೆ ವಿಚ್ಛೇದನ ನೀಡಿ ಹಾಲಿನ ಸ್ನಾನ ಮಾಡಿದ ಭೂಪ
ಅಸ್ಸಾಂನ ನಲ್ಬಾರಿ ಜಿಲ್ಲೆಯ ನಿವಾಸಿ ಮಾಣಿಕ್ ಅಲಿ ಎಂಬುವರು ತಮ್ಮ ಪತ್ನಿಗೆ ಕಾನೂನುಬದ್ಧವಾಗಿ ವಿಚ್ಛೇದನ ನೀಡಿದ ನಂತರ ಹಾಲಿನಲ್ಲಿ ಸ್ನಾನ ಮಾಡಿದ್ದಾರೆ. “ನನ್ನ ಜೀವನಕ್ಕೆ ಸ್ವಾತಂತ್ರ್ಯ ಸಿಕ್ಕಿದ ಕ್ಷಣ ಇದು. ಇದು ನಮ್ಮ ಆಚರಣೆ ಅಲ್ಲದಿದ್ದರೂ, ನನಗೆ ತುಂಬಾ ಸಂತೋಷವಾಗಿದೆ. ಆ ಕಾರಣಕ್ಕೆ ನಾನು ಹೀಗೆ ಮಾಡಿದ್ದೇನೆ” ಎಂದು ಮಾಣಿಕ್ ಅಲಿ ಹೇಳಿಕೊಂಡಿದ್ದಾರೆ.
ಸ್ಥಳೀಯರ ಪ್ರಕಾರ, ಮಾಣಿಕ್ ಅಲಿಯವರ ಪತ್ನಿ ವಿಚ್ಛೇದನಕ್ಕೂ ಮುನ್ನ ಎರಡು ಬಾರಿ ತಮ್ಮ ಪ್ರೇಮಿಯೊಂದಿಗೆ ಓಡಿ ಹೋಗಿದ್ದರಂತೆ. ಇಷ್ಟೆಲ್ಲಾ ಆದರೂ, ಕುಟುಂಬದ ಶಾಂತಿಗಾಗಿ ಮಾಣಿಕ್ ಮೌನವಾಗಿದ್ದರು ಎನ್ನಲಾಗಿದೆ. ಆದರೆ, ಕೊನೆಗೂ ವಿಚ್ಛೇದನ ಸಿಕ್ಕ ನಂತರ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
Divorce – ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ?
ವೈರಲ್ ಆಗಿರುವ ವಿಡಿಯೋದಲ್ಲಿ, ಮಾಣಿಕ್ ಅಲಿ ತಮ್ಮ ಮನೆಯ ಹೊರಗೆ ಹಾಲು ತುಂಬಿದ ನಾಲ್ಕು ಪ್ಲಾಸ್ಟಿಕ್ ಬಕೆಟ್‌ಗಳನ್ನು ಇಟ್ಟುಕೊಂಡಿರುವುದು ಕಾಣುತ್ತದೆ. ತಮ್ಮ “ಮುಕ್ತಿ” ಸಿಕ್ಕ ಸಂತೋಷದಲ್ಲಿ, ಅವರು ಒಂದೊಂದಾಗಿ ಬಕೆಟ್‌ನಲ್ಲಿದ್ದ ಹಾಲನ್ನು ತಮ್ಮ ತಲೆಯ ಮೇಲೆ ಸುರಿದುಕೊಳ್ಳುತ್ತಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಅನೇಕರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. Read this also : Divorce : ಡಿವೋರ್ಸ್ ಕೊಡೋಕೆ ಇದು ಕಾರಣವಂತೆ, ವೈರಲ್ ಆದ ಡಿವೋರ್ಸ್ ಸುದ್ದಿ, ಡಿವೋರ್ಸ್ ಗೆ ಕಾರಣ ಏನು ಗೊತ್ತಾ?
Divorce – ವಿಚಿತ್ರ ಆಚರಣೆ ಎಂದ ನೆಟ್ಟಿಗರು
ನನಗೆ ಇಂದಿನಿಂದ ಮುಕ್ತಿ ಸಿಕ್ಕಿದೆ ಎಂದು ನನ್ನ ವಕೀಲರು ಹೇಳಿದ್ದಾರೆ. ಹಾಗಾಗಿ, ಇಂದು ನಾನು ನನ್ನ ಸ್ವಾತಂತ್ರ್ಯವನ್ನು ಆಚರಿಸಲು ಹಾಲಿನಲ್ಲಿ ಸ್ನಾನ ಮಾಡುತ್ತಿದ್ದೇನೆ ಎಂದು ಮಾಣಿಕ್ ಅಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕೆಲವರು ಅವರ ಸಂತೋಷವನ್ನು ಅರ್ಥಮಾಡಿಕೊಂಡಿದ್ದರೆ, ಮತ್ತೆ ಕೆಲವರು ಈ ರೀತಿಯ ಆಚರಣೆ ವಿಚಿತ್ರ ಎಂದು ಹೇಳಿದ್ದಾರೆ.