Bengaluru : ಬೆಂಗಳೂರಿನಲ್ಲಿ ನಡೆದ ಘಟನೆ, ಓಯೋ ರೂಂನಲ್ಲಿ ನಡೆಯಿತು ಪ್ರಿಯಕರನಿಂದಲೇ ವಿವಾಹಿತ ಪ್ರಿಯತಮೆಯ ಬರ್ಬರ ಹತ್ಯೆ…!

Bengaluru – ಬೆಂಗಳೂರಿನಲ್ಲಿ ನಡೆದ ಒಂದು ಘಟನೆ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಒಂದು ಜಾತ್ರೆಯಲ್ಲಿ ಚಿಗುರಿದ ಪ್ರೀತಿ, ಕೊನೆಗೆ OYO ರೂಂನ ನಾಲ್ಕು ಗೋಡೆಗಳ ನಡುವೆ ಕ್ರೂರ ಅಂತ್ಯ ಕಂಡಿದೆ. ಹರಿಣಿ (36) ಎಂಬಾಕೆ ತನ್ನ ಪ್ರಿಯಕರ ಯಶಸ್‌ (25) ಕೈಯಿಂದಲೇ ಕೊಲೆಯಾಗಿದ್ದಾಳೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಯಶಸ್‌ ಮತ್ತು ಇಬ್ಬರು ಮಕ್ಕಳ ತಾಯಿ ಹರಿಣಿ ಇಬ್ಬರೂ ಕೆಂಗೇರಿ ನಿವಾಸಿಗಳು. ಆದರೆ, ಅವರಿಬ್ಬರ ಈ ಸಂಬಂಧ ಇಷ್ಟು ಕ್ರೂರ ಅಂತ್ಯ ಕಾಣುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

Crime scene in Bengaluru OYO hotel involving a techie and a woman, police investigation ongoing

Bengaluru – ಜಾತ್ರೆಯಲ್ಲಿ ಪರಿಚಯ, ಬಳಿಕ ಚಾಟಿಂಗ್ ಅಂಡ್ ಡೇಟಿಂಗ್

ಕೆಲವೇ ತಿಂಗಳುಗಳ ಹಿಂದೆ ಕೆಂಗೇರಿಯಲ್ಲಿ ನಡೆದ ಜಾತ್ರೆಯೊಂದು ಹರಿಣಿ ಮತ್ತು ಯಶಸ್‌ ಬದುಕಿನಲ್ಲಿ ಹೊಸ ಅಧ್ಯಾಯವನ್ನೇ ತೆರೆದಿತ್ತು. ಆ ಜನಸಂದಣಿಯಲ್ಲಿ ಇಬ್ಬರು ಪರಿಚಯವಾದರು. ಫೋನ್ ನಂಬರ್‌ಗಳು ವಿನಿಮಯವಾದವು. ಅಲ್ಲಿಂದ ಶುರುವಾಯಿತು ಅವರ ಗೌಪ್ಯ ಸಂಬಂಧ. ಗೃಹಿಣಿ ಹರಿಣಿಗೆ ಟೆಕ್ಕಿ ಯಶಸ್‌ ಜೊತೆಗಿನ ಸ್ನೇಹ ದಿನದಿಂದ ದಿನಕ್ಕೆ ಆಳವಾಗುತ್ತಾ ಹೋಯಿತು. ಚಾಟಿಂಗ್, ಡೇಟಿಂಗ್, ಭೇಟಿಗಳು… ಎಲ್ಲವೂ ಸದ್ದಿಲ್ಲದೆ ನಡೆಯುತ್ತಾ ಹೋಯಿತು.

Bengaluru – ಅಕ್ರಮ ಸಂಬಂಧ ಬಯಲು

ಹೀಗೆ ಹಲವು ತಿಂಗಳುಗಳ ಕಾಲ ಸಾಗಿದ ಈ ಅನೈತಿಕ ಸಂಬಂಧ ಒಂದು ದಿನ ಹರಿಣಿ ಪತಿ ದಾಸೇಗೌಡನಿಗೆ ಗೊತ್ತಾಗಿಬಿಟ್ಟಿತು. ಅವನಿಗೆ ಈ ಸಂಬಂಧದ ಬಗ್ಗೆ ತಿಳಿದಾಗ, ಆತಂಕ ಮತ್ತು ಕೋಪ ಆವರಿಸಿತು. ಆತ ಹರಿಣಿ ಫೋನ್ ಕಿತ್ತುಕೊಂಡು, ಆಕೆಯನ್ನು ಮನೆಯಲ್ಲೇ ಕೂಡಿಹಾಕಿದ. ಯಶಸ್‌ಗೆ ಹರಿಣಿ ಸಂಪರ್ಕಕ್ಕೆ ಸಿಗದೆ, ಅವನಿಗೂ ಒಂದು ರೀತಿಯ ಹುಚ್ಚು ಹಿಡಿದಿತ್ತು. ಕೆಲವು ತಿಂಗಳುಗಳ ನಂತರ, ಹರಿಣಿ ಮನೆಯಿಂದ ಹೊರಬಂದಳು. ಮತ್ತೆ ಯಶಸ್‌ ಅನ್ನು ಸಂಪರ್ಕಿಸಿದಳು. ತಿಂಗಳುಗಳ ಕಾಲ ತನ್ನ ಪ್ರಿಯತಮೆ ಸಂಪರ್ಕಕ್ಕೆ ಸಿಗದೆ ಹುಚ್ಚನಂತಾಗಿದ್ದ ಯಶಸ್‌, ಹರಿಣಿ ಸಿಕ್ಕರೆ ಆಕೆಯನ್ನು ಸಾಯಿಸಿಯೇ ಬಿಡಬೇಕೆಂದು ನಿರ್ಧರಿಸಿದ್ದ. ಹರಿಣಿಯನ್ನು ಕೊಲೆ ಮಾಡಲು ಪ್ಲಾನ್ ಒಂದನ್ನು ಸಹ ತಯಾರಿಸಿಕೊಂಡಿದ್ದ.

Bengaluru – OYO ರೂಂ ನಲ್ಲಿ ಹರಿಣಿ ಕೊಲೆ

ಹರಿಣಿ ಮತ್ತೆ ಸಿಕ್ಕಾಗ, ಇಬ್ಬರೂ ಮಾತುಕತೆ ನಡೆಸಿ ರಾಯಲ್ಸ್ ಹೊಟೇಲ್‌ನಲ್ಲಿ ಒಂದು OYO ರೂಂ ಬುಕ್ ಮಾಡಿದರು. ರೂಂನಲ್ಲಿ ದೈಹಿಕ ಸಂಪರ್ಕ ಬೆಳೆಸಿದ ನಂತರ, ಯಶಸ್‌ ಮನಸ್ಸಿನಲ್ಲಿ ಮೂಡಿದ ಆ ಕರಾಳ ಆಲೋಚನೆಯನ್ನು ಕಾರ್ಯಗತಗೊಳಿಸಿದ. “ನನಗೆ ಸಿಕ್ಕವಳು ಬೇರೆ ಯಾರಿಗೂ ಸಿಗಬಾರದು” ಎಂಬ ಕ್ರೂರ ನಿರ್ಧಾರಕ್ಕೆ ಬಂದ ಯಶಸ್‌, ಮೊದಲೇ ಯೋಜಿಸಿದಂತೆ ಚಾಕುವಿನಿಂದ ಹರಿಣಿಗೆ ಬರ್ಬರವಾಗಿ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

Crime scene in Bengaluru OYO hotel involving a techie and a woman, police investigation ongoing

Bengaluru – ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು

ಜೂನ್ 6 ರಂದು ಈ ಭೀಕರ ಕೊಲೆ ನಡೆಸಿ, ಸಾಫ್ಟ್‌ವೇರ್ ಇಂಜಿನಿಯರ್ ಯಶಸ್‌ ಅಲ್ಲಿಂದ ಪರಾರಿಯಾದ. ವಿಷಯ ತಿಳಿದ ಸುಬ್ರಮಣ್ಯಪುರ ಇನ್ಸ್‌ಪೆಕ್ಟರ್ ರಾಜು ಮತ್ತು ಅವರ ತಂಡ ತಕ್ಷಣವೇ ಸ್ಥಳಕ್ಕೆ ಧಾವಿಸಿ, FSL ತಂಡದ ಸಹಾಯದಿಂದ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸಿದರು. ಕೇವಲ ಎರಡು ದಿನಗಳ ನಂತರ, ಜೂನ್ 8 ರಂದು, ಸುಬ್ರಮಣ್ಯಪುರ ಪೊಲೀಸರು ಯಶಸ್‌ ಅನ್ನು ಬಂಧಿಸುವಲ್ಲಿ ಯಶಸ್ವಿಯಾದರು.

Read this also : ಹೆಂಡತಿಯನ್ನು ಬಾಲ್ಕನಿಯಲ್ಲಿ ನೇತುಹಾಕಿದ ಪತಿ – ಭಯಾನಕ ದೃಶ್ಯ, ರಿಷಿಕೇಶ್‌ ನಲ್ಲಿ ನಡೆದ ಘಟನೆ…!

Bengaluru – ಕೊಲೆಗೆ ಕಾರಣವೇನು?

ಬಂಧನಕ್ಕೊಳಗಾದ ಯಶಸ್‌ ಪೊಲೀಸರ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. “ನನ್ನ ಜೊತೆ ಹರಿಣಿಗೆ ಅನೈತಿಕ ಸಂಬಂಧ ಇತ್ತು. ಆದರೆ, ಆಕೆ ನನ್ನನ್ನು ಅವಾಯ್ಡ್ ಮಾಡುತ್ತಿದ್ದಳು. ಅದಕ್ಕೆ ಕೊಲೆ ಮಾಡಿದೆ” ಎಂದು ಆತ ಹೇಳಿಕೆ ನೀಡಿದ್ದಾನ ಎಂದು ತಿಳಿದುಬಂದಿದೆ. ಇನ್ನೂ ಸುಬ್ರಮಣ್ಯಪುರ ಪೊಲೀಸರು ಯಶಸ್‌ ಅನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇಂದು ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಗಂಡ ಮತ್ತು ಮಕ್ಕಳೊಂದಿಗೆ ಸುಖವಾಗಿ ಜೀವನ ನಡೆಸಬೇಕಿದ್ದ ಹರಿಣಿ, ಒಂದು ಕ್ಷಣದ ಪ್ರೀತಿಯ ಭ್ರಮೆಯಿಂದಾಗಿ ತನ್ನ ಜೀವವನ್ನೇ ಕಳೆದುಕೊಂಡಳು.

Leave a Comment

Your email address will not be published. Required fields are marked *

Scroll to Top