Chinnaswamy Stadium : ಬೆಂಗಳೂರು ಕಾಲ್ತುಳಿತ ದುರಂತಕ್ಕೆ ಕೊಹ್ಲಿ ಸಂತಾಪ, RCB ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ..!

Chinnaswamy Stadium – ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಬಹುನಿರೀಕ್ಷಿತ ವಿಜಯೋತ್ಸವದ ಸಂಭ್ರಮದ ನಡುವೆಯೇ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ದುರಂತ ಇಡೀ ಕ್ರಿಕೆಟ್ ಲೋಕವನ್ನು ಬೆಚ್ಚಿ ಬೀಳಿಸಿದೆ. ಈ ಘಟನೆಯಲ್ಲಿ ಅಮೂಲ್ಯ ಜೀವಗಳು ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಹೃದಯ ಕಲಕುವ ಘಟನೆಗೆ ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾದಲ್ಲಿ ಪೋಸ್ಟ್‌ ಹಾಕಿರುವ ಅವರು, ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತದಿಂದ ಉಂಟಾದ ಸಾವು-ನೋವಿನಿಂದ ತೀವ್ರ ದುಃಖಿತನಾಗಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.

Chinnaswamy Stadium - Virat Kohli and RCB respond to Chinnaswamy stampede tragedy

Chinnaswamy Stadium – ಮಾತೇ ಬರುತ್ತಿಲ್ಲ, ತುಂಬಾ ದುಃಖವಾಗಿದೆ

ಈ ದುರಂತದ ಸುದ್ದಿ ತಿಳಿದ ಕೂಡಲೇ ವಿರಾಟ್ ಕೊಹ್ಲಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಒಂದು ಭಾವುಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. “ಮಾತೇ ಬರುತ್ತಿಲ್ಲ, ತುಂಬಾ ದುಃಖವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಿಂದ ಉಂಟಾದ ಸಾವು-ನೋವಿನಿಂದ ತೀವ್ರ ದುಃಖಿತನಾಗಿದ್ದೇನೆ. ಬಾಯಿಂದ ಮಾತುಗಳೇ ಹೊರಡುತ್ತಿಲ್ಲ” ಎಂದು ಬರೆದುಕೊಂಡಿದ್ದಾರೆ. ಈ ಘಟನೆಯ ಬಗ್ಗೆ ತಿಳಿದ ಕೂಡಲೇ ನಾವು ನಮ್ಮ ಕಾರ್ಯಕ್ರಮ ತ್ವರಿತಗತಿಯಲ್ಲಿ ಬದಲಾಯಿಸಿದ್ದೇವೆ. ಆರ್‍.ಸಿ.ಬಿ ಅಭಿಮಾನಿಗಳು ದಯವಿಟ್ಟು ಸುರಕ್ಷತೆಯಿಂದ ಇರಬೇಕೆಂದು ಕೊಹ್ಲಿ ಮನವಿ ಮಾಡಿದ್ದಾರೆ.

Chinnaswamy Stadium - Virat Kohli and RCB respond to Chinnaswamy stampede tragedy

ವಿರಾಟ್ ಕೊಹ್ಲಿ ಪೋಸ್ಟ್ ಇಲ್ಲಿದೆ ನೋಡಿ : Click Here

Chinnaswamy Stadium – ವಿಳಂಬವಾದರೂ ಕ್ಷಮೆ ಯಾಚಿಸಿದ ಆರ್‌ಸಿಬಿ: “ಸುರಕ್ಷತೆ ನಮಗೆ ಮುಖ್ಯ”

ವ್ಯಾಪಕ ಟೀಕೆಗಳು ಮತ್ತು ಸಾರ್ವಜನಿಕ ಒತ್ತಡದ ನಂತರ, ಆರ್‌ಸಿಬಿ ಫ್ರಾಂಚೈಸಿ ಕೊನೆಗೂ ಎಚ್ಚೆತ್ತುಕೊಂಡಿದೆ. ತಮ್ಮ ಎಕ್ಸ್ ಖಾತೆಯಲ್ಲಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಆರ್‌ಸಿಬಿ, “ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿರುವ ಅವಘಡದಿಂದ ತೀವ್ರ ದುಃಖಿತರಾಗಿದ್ದೇವೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮ ನಮಗೆ ಅತ್ಯಂತ ಮುಖ್ಯವಾಗಿದೆ. ಈ ಅವಘಡದಿಂದಾಗಿ ಆಗಿರುವ ಜೀವಹಾನಿಗೆ ಆರ್‌ಸಿಬಿ ಶೋಕ ವ್ಯಕ್ತಪಡಿಸುತ್ತದೆ. ಸಂತ್ರಸ್ತ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತದೆ” ಎಂದು ತಿಳಿಸಿದೆ. ಅಲ್ಲದೆ, “ಪರಿಸ್ಥಿತಿಯ ಬಗ್ಗೆ ತಿಳಿದ ತಕ್ಷಣ, ನಾವು ನಮ್ಮ ಕಾರ್ಯಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ಸ್ಥಳೀಯ ಆಡಳಿತದ ಮಾರ್ಗದರ್ಶನ ಮತ್ತು ಸಲಹೆಯನ್ನು ಅನುಸರಿಸಿದ್ದೇವೆ. ದಯವಿಟ್ಟು ಸುರಕ್ಷಿತವಾಗಿರಲು ನಮ್ಮ ಎಲ್ಲಾ ಅಭಿಮಾನಿಗಳ ಬಳಿ ಮನವಿ ಮಾಡುತ್ತೇವೆ” ಎಂದು ಸೇರಿಸಿದೆ. Read this also : ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ದುರಂತಕ್ಕೆ ದೇಶವೇ ಕಂಬನಿ! ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರಿಂದ ಸಂತಾಪ…!

Chinnaswamy Stadium - Virat Kohli and RCB respond to Chinnaswamy stampede tragedy

ಆರ್‍.ಸಿ.ಬಿ. ಪೋಸ್ಟ್ ಇಲ್ಲಿದೆ ನೋಡಿ : Click Here 

Chinnaswamy Stadium – ದುರಂತಕ್ಕೆ ಕಾರಣ ಯಾರು? ತನಿಖೆಗೆ ಆಗ್ರಹ!

ಚಿನ್ನಸ್ವಾಮಿ ದುರಂತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯಬೇಕಿದೆ. ಕ್ರೀಡಾಂಗಣದ ಗೇಟ್‌ಗಳನ್ನು ತೆರೆದ ಕೂಡಲೇ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಜನಸಂದಣಿಯನ್ನು ನಿರ್ವಹಿಸುವಲ್ಲಿನ ವೈಫಲ್ಯ, ಭದ್ರತಾ ಲೋಪಗಳು ಮತ್ತು ಸಂಚಾರ ವ್ಯವಸ್ಥೆಯ ಅಸ್ತವ್ಯಸ್ತತೆ ಇವೆಲ್ಲವೂ ಈ ದುರಂತಕ್ಕೆ ಕಾರಣವಾಗಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಬೆಂಗಳೂರಿನ ಸಂಚಾರ ವ್ಯವಸ್ಥೆ ಸರಿಯಾಗಿದ್ದರೆ, ಬಹುಶಃ ಈ ಘಟನೆಯನ್ನು ತಪ್ಪಿಸಬಹುದಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಅಭಿಪ್ರಾಯಪಟ್ಟಿದ್ದಾರೆ.

Leave a Comment

Your email address will not be published. Required fields are marked *

Scroll to Top