ನಂಜುಂಡಿ ಕಲ್ಯಾಣ ಎಂಬ ಸಿನೆಮಾದಲ್ಲಿ ನಟಿ ಮಾಲಾಶ್ರೀ ರವರು ಒಳಗೆ ಸೇರಿದರೇ ಗುಂಡು ಎಂಬ ಹಾಡಿಗೆ ಮದ್ಯ ಸೇವನೆ ಮಾಡಿದವರಂತೆ ನಟಿಸಿದ್ದಾರೆ. ಈ ಹಾಡು ತುಂಬಾನೆ ಫೇಮಸ್ ಆಗಿದೆ. ಇಂದಿಗೂ ಸಹ ಈ ಹಾಡು ಕೇಳಿಬರುತ್ತಲೇ ಇದೆ. ಇದೀಗ ರಿಯಲ್ ಲೈಫ್ ನಲ್ಲಿ ಕುಡಿದ ಓರ್ವ ಮಹಿಳೆ ರಂಪಾಟ ಮಾಡಿದ್ದಾಳೆ. ಕುಡಿದ ನಶೆಯಲ್ಲಿ ಯುವತಿಯೊಬ್ಬಳು ರಂಪಾಟ ಮಾಡಿದ್ದು, ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಕಾನ್ಪುರದ ಗುಮ್ನಿ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕುಡಿದ ಮತ್ತಿನಲ್ಲಿ ಯುವತಿಯೊಬ್ಬಳು ನಡು ರಸ್ತೆಯಲ್ಲೇ ಹೈವೋಲ್ಟೇಜ್ ಡ್ರಾಮಾ ಮಾಡಿದ್ದಾಳೆ. ಆಕೆಯ ರಂಪಾಟ ಕಂಡು ಭಾರಿ ಜನಸಾಗರ ಜಮಾಯಿಸಿತ್ತು. ಈ ಘಟನೆಯನ್ನು ಕೆಲವರು ವಿಡಿಯೋ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಮಹಿಳೆ ರಸ್ತೆಯಲ್ಲಿ ಗಲಾಟೆ ಮಾಡಿದ್ದನ್ನು ಕಾಣಬಹುದಾಗಿದೆ. ಈ ರಂಪಾಟ ನಿಯಂತ್ರಣ ಮಾಡಲು ಸ್ಥಳಕ್ಕೆ ಪೊಲೀಸರು ಬಂದಾಗ ಪೊಲೀಸರ ಮೇಲೂ ಜಗಳ ಮಾಡಿ ಅವರ ಮಂದೆ ಬಟ್ಟೆ ಹರಿದಾಕಲು ಸಹ ಮುಂದಾಗಿದ್ದಾಳೆ. ಮದ್ಯದ ಅಮಲಿನಲ್ಲಿದ್ದ ಯುವತಿ ಇನ್ಸ್ ಪೆಕ್ಟರ್ ಜೊತೆಗೆ ಜಗಳ ಆಡಿದ್ದಾರೆ. ತಲೆಗೂದಲನ್ನು ಬೀಸುತ್ತಾ ರಂಪಾಟ ಮಾಡುತ್ತಿದ್ದಳು. ಪೊಲೀಸರು ಏಕೆ ಎಂಬುದನ್ನು ಕೇಳಲು ಹೋದರೇ ಪೊಲೀಸರ ಮುಂದೆಯೇ ಜಗಳಕ್ಕೆ ಇಳಿದಿದ್ದಾರೆ. ಜೊತೆಗೆ ಪೊಲೀಸರು ಗದರಿದಾಗ ತನ್ನ ಬಟ್ಟೆಯನ್ನು ತಾನೆ ಹರಿದುಕೊಳ್ಳಲು ಮುಂದಾಗಿದ್ದಾಳೆ.
ಇನ್ನೂ ಈ ಘಟನೆ ಕಳೆದೆರಡು ದಿನಗಳ ಹಿಂದೆಯಷ್ಟೆ ನಡೆದಿದೆ ಎನ್ನಲಾಗಿದೆ. ಮಾಹಿತಿಯ ಪ್ರಕಾರ ಆ ಯುವತಿ ತುಂಬಾನೆ ಕುಡಿದಿದ್ದಳು ಎನ್ನಲಾಗಿದೆ. ಪೊಲೀಸರು ಆಕೆಯನ್ನು ನಿಯಂತ್ರಣ ಮಾಡಲು ಮುಂದಾದಾಗ ಅವರ ಮೇಲೆಯೆ ಜಗಳಕ್ಕೆ ಇಳಿದಿದ್ದಾಳೆ. ಸುಮಾರು ಅರ್ಧ ಗಂಟೆ ಹೈಡ್ರಾಮ ನಡೆಸಿದ್ದಾಳೆ. ಇದೇ ಸಮಯದಲ್ಲಿ ತನ್ನ ಬಟ್ಟೆಯನ್ನು ಬಿಚ್ಚಲು ಮುಂದಾಗಿದ್ದಾಳೆ. ಬಳಿಕ ಪೊಲೀಸರು ಆಕೆಯನ್ನು ನಿಯಂತ್ರಣ ಮಾಡಿ ಮಹಿಳಾ ಆಶ್ರಯ ಕೇಂದ್ರಕ್ಕೆ ಕಳುಹಿಸಿದ್ದಾರೆ. ಬಳಿಕ ಆಕೆಗೆ ಚಿಕಿತ್ಸೆ ಕೊಡಿಸಿ ಮುಂದಿನ ಕ್ರಮಕ್ಕೆ ಸ್ಥಳೀಯ ಪೊಲೀಸರು ಮುಂದಾಗಿದ್ದಾರೆ.