SBI Manager: ಕನ್ನಡ ಮಾತಾಡಲ್ಲ ಏನಿವಾಗ? ಎಂದು ಉಡಾಫೆ ಕೊಟ್ಟ ಎಸ್‌ಬಿಐ ಮ್ಯಾನೇಜರ್ ಉಡಾಫೆ, ಕನ್ನಡಿಗರ ಆಕ್ರೋಷ…!

SBI Manager – ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಕೋರಮಂಗಲದ ಹೋಟೆಲ್‌ನಲ್ಲಿ ಕನ್ನಡ ವಿರೋಧಿ ಬರಹ ಪ್ರದರ್ಶನ ಪ್ರಕರಣದ ಬಿಸಿ ಮಾಸುವ ಮುನ್ನವೇ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮ್ಯಾನೇಜರ್ ಒಬ್ಬರು ಗ್ರಾಹಕರೊಬ್ಬರೊಂದಿಗೆ ಕನ್ನಡದಲ್ಲಿ ಮಾತನಾಡಲು ನಿರಾಕರಿಸಿ, ಹಿಂದಿ ಮಾತ್ರ ಮಾತನಾಡುತ್ತೇನೆ ಎಂದು ಉಡಾಫೆ ತೋರಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯಾದ್ಯಂತ ಕನ್ನಡಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

SBI manager refuses to speak Kannada, causing public outrage in Bengaluru

SBI Manager  – ಕನ್ನಡ ಮಾತಾಡಲ್ಲ, ಏನಿವಾಗ? SBI ಮ್ಯಾನೇಜರ್ ಉಡಾಫೆ ವೈರಲ್!

ಘಟನೆ ನಡೆದಿದ್ದು ಬೆಂಗಳೂರು ಹೊರವಲಯದ ಚಂದಾಪುರದ ಸೂರ್ಯ ಸಿಟಿ SBI ಬ್ಯಾಂಕ್‌ನಲ್ಲಿ. ಒಬ್ಬ ಗ್ರಾಹಕರು ಹಿಂದಿಯಲ್ಲಿ ಮಾತನಾಡುತ್ತಿದ್ದ ಮಹಿಳಾ ಬ್ಯಾಂಕ್ ಮ್ಯಾನೇಜರ್‌ಗೆ ಕನ್ನಡದಲ್ಲಿ ಮಾತನಾಡಲು ವಿನಂತಿಸಿದ್ದಾರೆ. ಆದರೆ, ಇದಕ್ಕೆ ಕೆರಳಿದ ಮ್ಯಾನೇಜರ್, “ಇದು ಇಂಡಿಯಾ, ಹಿಂದಿ ಮಾತಾಡ್ತೇನೆ, ಕನ್ನಡ ಮಾತಾಡಲ್ಲ” ಎಂದು ಧಿಮಾಕಿನಿಂದ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ಕ್ಷಣಾರ್ಧದಲ್ಲಿ ಎಲ್ಲೆಡೆ ಹರಡಿದೆ.

Read this also : EPF – ಖಾಸಗಿ ಉದ್ಯೋಗಿಗಳ ಗಮನಕ್ಕೆ! ಕೆಲಸ ಬಿಟ್ಟ ತಕ್ಷಣ ನಿಮ್ಮ ಪಿಎಫ್ ಹಣ ಪಡೆಯುವುದು ಹೇಗೆ? ಇಲ್ಲಿದೆ ಸುಲಭ ವಿಧಾನ..!

SBI Manager – ಬೆಂಗಳೂರಿನಲ್ಲಿದ್ದರೂ ಕನ್ನಡ ಕಲಿಯದ SBI ಅಧಿಕಾರಿ: ಸ್ಥಳೀಯರ ಆಕ್ರೋಶ

ವೈರಲ್ ಆಗಿರುವ ವಿಡಿಯೋದಲ್ಲಿ ಗ್ರಾಹಕರು, “ಇದು ಕರ್ನಾಟಕ, ಬೆಂಗಳೂರು, ಇಲ್ಲಿ ನೀವು ಕನ್ನಡದಲ್ಲಿ ಮಾತನಾಡಬೇಕು” ಎಂದು ಹೇಳಿದ್ದರೂ, ಅಹಂನಿಂದ ಉತ್ತರಿಸಿದ ಮ್ಯಾನೇಜರ್, “ಹಿಂದಿ ಮಾತನಾಡು” ಎಂದು ತಿರುಗೇಟು ನೀಡಿದ್ದಾರೆ. “ಬೆಂಗಳೂರು ಆದ್ರೇನು, ಇದು ಭಾರತ, ಇಲ್ಲಿ ಹಿಂದಿ ಮಾತನಾಡು” ಎಂದು ಧ್ವನಿ ಎತ್ತಿದ್ದಾರೆ. ಇಷ್ಟು ವರ್ಷಗಳಿಂದ ಬೆಂಗಳೂರಿನಲ್ಲೇ ಇದ್ದರೂ ಗ್ರಾಹಕರೊಂದಿಗೆ ಕನ್ನಡದಲ್ಲಿ ಮಾತನಾಡಲು ನಿರಾಕರಿಸಿದ ಅವರ ವರ್ತನೆ ಸ್ಥಳೀಯ ಕನ್ನಡಿಗರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.

SBI manager refuses to speak Kannada, causing public outrage in Bengaluru

ಸಂಬಂಧಪಟ್ಟ ವಿಡಿಯೋ ಇಲ್ಲಿದೆ ನೋಡಿ  : Click here

SBI Manager – ಕನ್ನಡಪರ ಹೋರಾಟಗಾರರಿಂದ ಕ್ರಮಕ್ಕೆ ಆಗ್ರಹ

ಈ ಘಟನೆಯನ್ನು ಖಂಡಿಸಿರುವ ಕನ್ನಡಪರ ಹೋರಾಟಗಾರರು, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. SBI ಬ್ಯಾಂಕ್ ಮ್ಯಾನೇಜರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರ ಮತ್ತು ಬ್ಯಾಂಕ್ ಹಿರಿಯ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಸ್ಥಳೀಯ ಭಾಷೆಗೆ ಅಗೌರವ ತೋರಿದ ಈ ವರ್ತನೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಹಕ ಸೇವಾ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Leave a Comment

Your email address will not be published. Required fields are marked *

Scroll to Top
WordPress Lab Ankara Escort: Çankaya Escort, Mamak Escort, Polatlı Escort İstanbul Escort: Avcılar Escort, Beylikdüzü Escort, Esenyurt Escort Bursa Escort: İznik Escort, Büyükorhan Escort, İnegöl Escort ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….! ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ? Supreme Tables X-omatic Automatic Post Generator and X (formerly Twitter) Auto Poster Plugin for WordPress WP Adsense Guard Plugin Nearby Places WordPress Plugin CSS3 Form Pack Progress Map, Draw a Search – WordPress Plugin WooCommerce quick view – woocommerce wish list – woocommerce product compare Addon For Elementor Product Variation Table of WooCommerce Popup Notification + Social Connect – PrestaShop Module Aliomatic – AliExpress Affiliate Money Generator Plugin for WordPress