Baghpat Murder Case : ಪತ್ನಿಯ ಕತ್ತು ಸೀಳಿ ಅತ್ತೆಗೆ ಕರೆ ಮಾಡಿದ ಅಳಿಯ: ಪ್ರೀತಿಯ ವಿವಾಹ ದುರಂತ ಅಂತ್ಯ….!

Baghpat Murder Case – “ನಾನು ಎಷ್ಟೇ ಸಲ ಹೇಳಿದರೂ ನನ್ನ ಕಣ್ಣೆದುರು ಬೇರೆಯವರ ಜೊತೆ ಮಾತನಾಡುತ್ತಿದ್ದಳು, ಕೊಂದುಬಿಟ್ಟೆ!” – ಹೀಗೆಂದು ತನ್ನ ಹೆಂಡತಿಯನ್ನು ಕೊಲೆ (Murder) ಮಾಡಿದ ನಂತರ ಅಳಿಯ ಅತ್ತೆಗೆ ಕರೆ ಮಾಡಿ ಹೇಳಿದಾಗ ಆ ತಾಯಿಗೆ ಆಘಾತವಾಗಿತ್ತು. ಆಟೋ ಚಾಲಕ ಪ್ರಶಾಂತ್ ಎಂಬಾತ ತನ್ನ ಪತ್ನಿ ನೇಹಾಳ ಕತ್ತು ಕೊಯ್ದು ಕೊಲೆ ಮಾಡಿರುವ ಮನಕಲಕುವ ಘಟನೆ ಉತ್ತರ ಪ್ರದೇಶದ ಬಾಗ​ಪತ್​ ನಲ್ಲಿ ನಡೆದಿದೆ. ನೇಹಾ ಅವರು ತಮ್ಮ ತಾಯಿಯ ಮನೆಯಲ್ಲಿ ಒಂಟಿಯಾಗಿದ್ದಾಗ ಈ ಕೃತ್ಯ ನಡೆದಿದೆ.

Baghpat Murder Case – ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಭಯಾನಕ ವಿಡಿಯೋ

ಈ ಘಟನೆಯ ಒಂದು ಭಯಾನಕ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ದಾಳಿಯ ನಂತರ ಆರೋಪಿ ಫೋನಿನಲ್ಲಿ ಯಾರೊಂದಿಗೋ ಮಾತನಾಡುತ್ತಿರುವುದನ್ನು ಕಾಣಬಹುದು. “ನನ್ನ ಎದುರು ನೀನು ಯಾರೊಂದಿಗಾದರೂ ಮಾತನಾಡಿದರೆ ಅಂದೇ ನಿನ್ನನ್ನು ಕೊಲ್ಲುತ್ತೇನೆ ಎಂದು ಮದುವೆಯಾದ ದಿನವೇ ಆಕೆಗೆ ಎಚ್ಚರಿಕೆ ನೀಡಿದ್ದೆ” ಎಂದು ಆತ ತನ್ನ ಅತ್ತೆಗೆ ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.

Husband confesses after slitting wife's throat in Baghpat, Uttar Pradesh

Baghpat Murder Case – 15 ನಿಮಿಷಗಳ ಕಾಲ ಶವದ ಬಳಿ ಓಡಾಡಿ ನಂತರ ಕರೆ

ಆರೋಪಿಯು ಸುಮಾರು 15 ನಿಮಿಷಗಳ ಕಾಲ ಶವದ ಬಳಿ ಅಡ್ಡಾಡಿದ ನಂತರ ಅತ್ತೆಗೆ ಕರೆ ಮಾಡಿದ್ದಾನೆ. “ನಾನು ಆಕೆಯನ್ನು ಕೊಂದು ಹಾಕಿದ್ದೇನೆ, ಈಗ ನಾನು ಪೊಲೀಸ್ ಠಾಣೆಗೆ ಹೋಗುತ್ತಿದ್ದೇನೆ” ಎಂದು ಆತ ಹೇಳಿದ್ದಾನೆ. ಪ್ರಶಾಂತ್ ಮತ್ತು ನೇಹಾ ಪರಸ್ಪರ ಪ್ರೀತಿಸಿ 8 ವರ್ಷಗಳ ಹಿಂದೆ ಮದುವೆಯಾಗಿದ್ದರು ಮತ್ತು ಅವರಿಗೆ ನಾಲ್ಕು ವರ್ಷದ ಮಗನಿದ್ದಾನೆ. ಮೂಲತಃ ಸಹರಾನ್​ಪುರದವರಾದ ನೇಹಾ ಅವರು ಮೊದಲು ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು ಮತ್ತು ಪ್ರಸ್ತುತ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಕುಟುಂಬವು ಪ್ರಶಾಂತ್ ಅವರ ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು.

Read this also : ಪಲ್ಯ, ಸಾಂಬಾರ್ ಸರಿ ಇಲ್ಲವೆಂದು ಪತ್ನಿಯ ಕತ್ತು ಹಿಸುಕಿ ಕೊಂದ ಪತಿ: ಪ್ರೀತಿಯ ವಿವಾಹಕ್ಕೆ ದುರಂತ ಅಂತ್ಯ..!

Baghpat Murder Case – ವಿವಾಹೇತರ ಸಂಬಂಧದ ಅನುಮಾನವೇ ಕೊಲೆಗೆ ಕಾರಣ?

ಅಕ್ಕಪಕ್ಕದ ಮನೆಯವರು ಹೇಳುವ ಪ್ರಕಾರ, ಇಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ಪ್ರಶಾಂತ್ ತನ್ನ ಪತ್ನಿಗೆ ವಿವಾಹೇತರ ಸಂಬಂಧವಿದೆ ಎಂದು ಅನುಮಾನಿಸುತ್ತಿದ್ದ. ಈ ನಿರಂತರ ಜಗಳದಿಂದ ಬೇಸತ್ತ ನೇಹಾ ಇತ್ತೀಚೆಗೆ ತನ್ನ ತಾಯಿ ರಂಜಿತಾ ಅವರೊಂದಿಗೆ ಅದೇ ಪ್ರದೇಶದಲ್ಲಿ ಮತ್ತೊಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. “ನಾವು ಮದುವೆಯಾದ ದಿನ, ನಾನು ಅವಳಿಗೆ ಬೇರೆಯವರೊಂದಿಗೆ ಮಾತನಾಡಬಾರದೆಂದು ಹೇಳಿದ್ದೆ. ನೀನು ಏನಾದರೂ ತಪ್ಪು ಮಾಡುತ್ತಿರುವುದು ನನಗೆ ಸಿಕ್ಕಿದ ದಿನ, ನಾನು ನಿನ್ನನ್ನು ಕೊಲ್ಲುತ್ತೇನೆ ಎಂದು ಮೊದಲೇ ಹೇಳಿದ್ದಾಗಿ” ಆರೋಪಿ ತನ್ನ ಅತ್ತೆಗೆ ತಿಳಿಸಿದ್ದಾನೆ.

Husband confesses after slitting wife's throat in Baghpat, Uttar Pradesh

ಕೈ ಬೆರಳು ಕತ್ತರಿಸಿ, ಕತ್ತು ಸೀಳಿ ಕೊಲೆ

ಪ್ರಶಾಂತ್ ಮೊದಲು ಆಕೆಯ ಕೈಗಳ ಮೇಲೆ ಹಲ್ಲೆ ನಡೆಸಿದ್ದಾನೆ. ನೇಹಾ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಆಕೆಯ ಬೆರಳುಗಳನ್ನು ಕತ್ತರಿಸಿದ್ದಾನೆ. ನಂತರ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಇನ್ನೂ ಸಂತ್ರಸ್ತೆಯ ತಾಯಿ ರಂಜಿತಾ ಅವರು ನೀಡಿದ ಹೇಳಿಕೆಯಲ್ಲಿ, “ಆತ ನಿತ್ಯ ಕುಡಿದು ಬಂದು ತನ್ನ ಮಗಳಿಗೆ ಹಿಂಸೆ ಕೊಡುತ್ತಿದ್ದ. ಈ ಹಿಂದೆಯೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ನೇಹಾ 20 ದಿನಗಳ ಹಿಂದೆ ಆಶ್ರಯ ನೀಡಿದ್ದರೂ ಸಹ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದ್ದಾರೆ. ಇನ್ನೂ ಆರೋಪಿ ಪ್ರಶಾಂತ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಕೊಲೆಗೆ ಬಳಸಿದ್ದ ಚಾಕುವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಕುರಿತು ತನಿಖೆ ಮುಂದುವರೆದಿದೆ.

Leave a Comment

Your email address will not be published. Required fields are marked *

Scroll to Top