Instagram Love: ರಾಯಚೂರು-ಚಾಮರಾಜನಗರ ಪ್ರೇಮ ಕಥೆ ದುರಂತ ಅಂತ್ಯ: ಇನ್‌ಸ್ಟಾಗ್ರಾಮ್‌ನಿಂದ ಬೆಳೆದ ನಂಟು, ಗರ್ಭಿಣಿ ಪತ್ನಿ ನಿಗೂಢ ಸಾವು, ಪತಿ ಬಂಧನ…!

Instagram Love – ಪ್ರೀತಿ ಕುರುಡು ಎನ್ನುವುದು ನಿಜಕ್ಕೂ ಸತ್ಯ. ದೂರದ ಊರಿನ ಯುವಕ-ಯುವತಿಯರನ್ನು ಒಂದುಗೂಡಿಸುವಲ್ಲಿ ಸಾಮಾಜಿಕ ಜಾಲತಾಣಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಇಂತಹ ಪ್ರೇಮ ಕಥೆಗಳು ಕೆಲವೊಮ್ಮೆ ದುರಂತ ಅಂತ್ಯವನ್ನು ಕಾಣಬಹುದು. ರಾಯಚೂರು ಜಿಲ್ಲೆಯ ಯುವಕನ ಪ್ರೇಮಕ್ಕೆ ಬಲಿಯಾದ ಚಾಮರಾಜನಗರದ ಒಂಬತ್ತು ತಿಂಗಳ ಗರ್ಭಿಣಿ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

Instagram Love - Pregnant woman Anupama, victim of dowry harassment in Raichur

Instagram Love  – ಇನ್ಸ್ಟಾಗ್ರಾಮ್‌ನಿಂದ ಆರಂಭವಾದ ಪ್ರೀತಿಯ ಪಯಣ

ಚಾಮರಾಜನಗರ ಮೂಲದ 20 ವರ್ಷದ ಅನುಪಮಾ ಎಂಬ ಯುವತಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬೂದಿಹಾಳದ ನಾಗರಾಜ್ ಎಂಬಾತನನ್ನು ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದಳು. ಈ ಪರಿಚಯವು ಪ್ರೇಮಕ್ಕೆ ತಿರುಗಿ ಕೇವಲ 11 ತಿಂಗಳ ಹಿಂದೆ ಇಬ್ಬರೂ ಮದುವೆಯಾಗಿದ್ದರು. ಆರಂಭದಲ್ಲಿ ಎಲ್ಲವೂ ಸುಸೂತ್ರವಾಗಿತ್ತು. ಆದರೆ, ವಿಧಿ ಆಟ ಬೇರೆಯೇ ಇತ್ತು. ಅನುಪಮಾ ಅವರು ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.

Instagram Love  – ಕೊಲೆ ಪ್ರಕರಣ ದಾಖಲು

ಆದರೆ, ಅನುಪಮಾ ಅವರ ಪೋಷಕರು ಇದು ಕೊಲೆಯೆಂದು ಆರೋಪಿಸಿದ್ದಾರೆ. ಜಾತಿ ಮತ್ತು ವರದಕ್ಷಿಣೆ ಕಿರುಕುಳದಿಂದ ಬೇಸತ್ತೇ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅವರು ದೂರಿದ್ದಾರೆ. ನಾಗರಾಜ್ ಮನೆಯವರು ಬೇರೆ ಜಾತಿಯವಳೆಂದೂ ಹಾಗೂ ವರದಕ್ಷಿಣೆ ತಂದಿಲ್ಲವೆಂದೂ ಕಿರುಕುಳೆ ನೀಡುತ್ತಿದ್ದರು ಎಂದು ಅನುಪಮಾ ತಂದೆ ಆರೋಪಿಸಿದ್ದಾರೆ. ಈ ಸಂಬಂಧ ಅನುಪಮಾ ಪತಿ ನಾಗರಾಜ್ ಸೇರಿದಂತೆ ಆರು ಜನರ ವಿರುದ್ಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಸದ್ಯಕ್ಕೆ ಪೊಲೀಸರು ನಾಗರಾಜ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Instagram Love - Pregnant woman Anupama, victim of dowry harassment in Raichur

Instagram Love  – ಪ್ರೇಮ ವಿವಾಹಗಳಲ್ಲಿ ಎದುರಾಗುವ ಸಮಸ್ಯೆಗಳು

ಒಂದು ತುದಿಯ ಜಿಲ್ಲೆಯ ಯುವಕನ ಪ್ರೇಮದ ಬಲೆಗೆ ಬಿದ್ದು ಮತ್ತೊಂದು ತುದಿಯ ಜಿಲ್ಲೆಯ ಯುವತಿ ದುರಂತ ಸಾವನ್ನಪ್ಪಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ. ಸಮಾಜ ಎಷ್ಟೇ ಮುಂದುವರಿದಿದ್ದರೂ, ಪ್ರೇಮ ವಿವಾಹಗಳಲ್ಲಿ ಸಮಸ್ಯೆಗಳು ಎದುರಾಗುವುದು ಸಾಮಾನ್ಯವಾಗಿದೆ. ಜಾತಿ, ಆರ್ಥಿಕ ಪರಿಸ್ಥಿತಿ ಮತ್ತು ಕೌಟುಂಬಿಕ ಭಿನ್ನಾಭಿಪ್ರಾಯಗಳಂತಹ ಅನೇಕ ಅಡೆತಡೆಗಳು ಪ್ರೇಮಿಗಳ ನಡುವೆ ಗೋಡೆಗಳಾಗಿ ನಿಲ್ಲಬಹುದು. Read this also : Gadag : ಡೆತ್‌ನೋಟ್ ಬರೆದಿಟ್ಟು ನವವಿವಾಹಿತೆ ಆತ್ಮಹತ್ಯೆ, ಕುಟುಂಬಸ್ಥರಿಂದ ಗಂಭೀರ ಆರೋಪ?

ಪ್ರೀತಿಸಿ ಮದುವೆಯಾಗುವುದು ತಪ್ಪಲ್ಲ. ಆದರೆ, ಮದುವೆಗೆ ಮುಂಚಿತವಾಗಿ ಪರಸ್ಪರರ ಕುಟುಂಬದ ಹಿನ್ನೆಲೆ, ಆಚಾರ-ವಿಚಾರಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಅರಿತುಕೊಳ್ಳುವುದು ಬಹಳ ಮುಖ್ಯ. ಭಾವಾವೇಶದಲ್ಲಿ ತೆಗೆದುಕೊಂಡ ನಿರ್ಧಾರಗಳು ಮುಂದೆ ದುರಂತಕ್ಕೆ ತಿರುಗಬಹುದು. ಹೀಗಾಗಿ, ಪ್ರತಿಯೊಬ್ಬ ಯುವಕ-ಯುವತಿಯರು ಮದುವೆಯಾಗುವ ಮುನ್ನ ಒಂದು ಕ್ಷಣ ಯೋಚಿಸಿ ಮುಂದಿನ ಹೆಜ್ಜೆ ಇಡುವುದು ಉತ್ತಮ.

Leave a Comment

Your email address will not be published. Required fields are marked *

Scroll to Top