Politics : ಬಿಜೆಪಿಯಿಂದ ಯತ್ನಾಳ್ ಉಚ್ಛಾಟನೆ: ವಿಜಯೇಂದ್ರರಿಂದ ಮಹತ್ವದ ಸಂದೇಶ, ಯತ್ನಾಳ್‌ ರಿಂದ ಕೌಂಟರ್‍ ಏನು ಗೊತ್ತಾ?

Politics – ಬಿಜೆಪಿ ಹೈಕಮಾಂಡ್‌ನಿಂದ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಛಾಟನೆ ಪ್ರಕಟವಾದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯ ಶೋಕಾಸ್‌ ನೋಟಿಸ್‌ಗೆ ಯಾವುದೇ ಉತ್ತರ ನೀಡದ ಕಾರಣಕ್ಕೆ, ತಕ್ಷಣದಿಂದ ಜಾರಿಗೆ ಬರುವಂತೆ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಈ ನಿರ್ಧಾರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಪಕ್ಷದ ಶಿಸ್ತು ಮತ್ತು ತ್ಯಾಗಕ್ಕೆ ಮೊದಲ ಆದ್ಯತೆ ಎಂದು ಪರೋಕ್ಷವಾಗಿ ವಿರೋಧಿಗಳಿಗೆ ಸಂದೇಶ ರವಾನಿಸಿದ್ದಾರೆ. ಇತ್ತ ಉಚ್ಛಾಟನೆಯಾದ ಬಸನಗೌಡ ಯತ್ನಾಳ್, ಪುರಂದರದಾಸರ ಕೀರ್ತನೆಯ ಮೂಲಕ ಬಿಜೆಪಿ ನಾಯಕರನ್ನು ಕುಟುಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Politics - BJP has expelled Basangouda Patil Yatnal for six years. Vijayendra issues a strong message, and Yatnal responds

Politics – ವಿಜಯೇಂದ್ರರಿಂದ ಶಿಸ್ತಿನ ಸಂದೇಶ

ಯತ್ನಾಳ್ ಉಚ್ಛಾಟನೆ ಆದೇಶ ಹೊರಬೀಳುತ್ತಿದ್ದಂತೆ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪಕ್ಷದ ಶಿಸ್ತು ಮತ್ತು ಸಂಘದ ಸಂಸ್ಕಾರವನ್ನು ಎತ್ತಿ ಹಿಡಿದಿದ್ದಾರೆ. “ಭಾರತೀಯ ಜನತಾ ಪಾರ್ಟಿಯು ಲಕ್ಷಾಂತರ ಕಾರ್ಯಕರ್ತರ ಬೆವರಿನ ಪರಿಶ್ರಮದಿಂದ ಸಮೃದ್ಧ ವೃಕ್ಷದಂತೆ ಬೆಳೆದಿದೆ. ಇಲ್ಲಿ ಶಿಸ್ತು ಮತ್ತು ತ್ಯಾಗಕ್ಕೆ ಮೊದಲ ಆದ್ಯತೆ ಇದೆ. ಪಕ್ಷದ ಹಿರಿಯರು ಮತ್ತು ವರಿಷ್ಠರು ಈ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಯತ್ನಾಳ್ ವಿರುದ್ಧ ತೆಗೆದುಕೊಂಡ ಈ ಕ್ರಮವು ಸುದೀರ್ಘ ಅವಧಿಯ ಸ್ಥಿತಿ-ಗತಿಗಳ ಅವಲೋಕನದ ನಂತರ ಅನಿವಾರ್ಯವಾಗಿ ತೆಗೆದುಕೊಂಡ ನಿರ್ಧಾರವಾಗಿದೆ,” ಎಂದು ಅವರು ಬರೆದಿದ್ದಾರೆ. ಈ ಮೂಲಕ ಬಿಜೆಪಿಯ ಶಿಸ್ತಿನ ನೀತಿಯನ್ನು ಮತ್ತೊಮ್ಮೆ ಜನರ ಮುಂದಿಟ್ಟಿದ್ದಾರೆ.

Politics – ಬಿ.ವೈ. ವಿಜಯೇಂದ್ರ ಹಂಚಿಕೊಂಡ ಟ್ವೀಟ್ ನಲ್ಲಿರುವಂತೆ

ಭಾರತೀಯ ಜನತಾ ಪಾರ್ಟಿ, ಲಕ್ಷಾಂತರ ಕಾರ್ಯಕರ್ತರನ್ನು ಹೊಂದುವ ಮೂಲಕ ವಿಶ್ವದಲ್ಲಿ ಅಗ್ರಮಾನ್ಯತೆ ಪಡೆದಿರುವ ರಾಜಕೀಯ ಪಕ್ಷ, ಸಂಘ ಸಂಸ್ಕಾರ ಪಡೆದಿರುವ ಸಮರ್ಪಣಾ ಮನೋಭಾವದ ಕಾರ್ಯಕರ್ತರ ಬೆವರ ಪರಿಶ್ರಮದಿಂದ ಸಮೃದ್ಧ ವೃಕ್ಷದಂತೆ ಬೆಳೆದಿರುವ ಪಕ್ಷದಲ್ಲಿ ಶಿಸ್ತು-ತ್ಯಾಗಕ್ಕೆ ಮೊದಲ ಆದ್ಯತೆ.
ಪಕ್ಷದ ಹಿರಿಯರು ಹಾಗೂ ವರಿಷ್ಠರು ಈ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿರುವ ಉದಾಹರಣೆ ನಮ್ಮ ಮುಂದಿಲ್ಲ, ಸದ್ಯ
@BasanagoudaBJP ರವರ ವಿರುದ್ಧದ ಶಿಸ್ತುಕ್ರಮ ವರಿಷ್ಠರು ಸುದೀರ್ಘ ಅವಧಿಯಿಂದ ಸ್ಥಿತಿ-ಗತಿಗಳನ್ನು ಅವಲೋಕಿಸಿ ಅನಿವಾರ್ಯವಾಗಿ ತೆಗೆದುಕೊಂಡಿರುವ ಕ್ರಮವಾಗಿರುತ್ತದೆ. ಪಕ್ಷದ ಬೆಳವಣಿಗೆಯಲ್ಲಿನ ಕಹಿ ಘಟನೆಗಳನ್ನು ಉಲ್ಲೇಖಿಸಿ ಪಕ್ಷದ ವರಿಷ್ಠರಿಗೆ ನಾನು ಎಂದೂ ದೂರುಗಳನ್ನು ಹೇಳಿಕೊಂಡಿಲ್ಲ, ದಾಖಲಿಸಿಯೂ ಇಲ್ಲ. ಪೂಜ್ಯ ತಂದೆ ಯಡಿಯೂರಪ್ಪನವರು ಎಲ್ಲರನ್ನೂ ಸಮಚಿತ್ತ ಭಾವದಿಂದ ನೋಡಿ, ಪಕ್ಷವನ್ನು ಕುಟುಂಬದಂತೆ ಬೆಳೆಸಿದ ಮಾದರಿಯಲ್ಲಿಯೇ ನಡೆಯಬೇಕೆಂಬ ಸಂಕಲ್ಪ ಹೊತ್ತು, ಸಂಘದ ಹಿರಿಯರು ಮತ್ತು ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದೇನೆ.
Politics - BJP has expelled Basangouda Patil Yatnal for six years. Vijayendra issues a strong message, and Yatnal responds
ಕೆಲ ದಿನಗಳ ಹಿಂದೆ ನಡೆದ ಕಹಿ ಪ್ರಸಂಗಗಳಿಂದ ಎಂದಿಗೂ ನಾನು ಉದ್ವೇಗಗೊಳ್ಳಲಿಲ್ಲ, ಯಾರೊಂದಿಗೂ ದುಃಖ ತೋಡಿಕೊಂಡಿಲ್ಲ, ಸಮರ್ಪಣೆ-ತ್ಯಾಗದ ಪಾಠವನ್ನು ಹೇಳಿಕೊಡುವ ಸಂಸ್ಕಾರವಂತ ಸಂಘಟನೆಯ ವ್ಯವಸ್ಥೆಯಲ್ಲಿ ಬೆಳೆದು ಬಂದ ನಾನು ಸಹನೆ-ತಾಳ್ಮೆಯನ್ನು ಜವಾಬ್ದಾರಿ ನಿರ್ವಹಿಸುವ ನಿಟ್ಟಿನಲ್ಲಿ ಆಧಾರ ಸ್ಥಂಭವೆಂದು ಪರಿಗಣಿಸಿ ಮುನ್ನಡಿದಿದ್ದೇನೆ. ಈ ನಿಟ್ಟಿನಲ್ಲಿ ವರಿಷ್ಠರು ತೆಗೆದುಕೊಂಡಿರುವ ಶಿಸ್ತು ಕ್ರಮವನ್ನು ನಾನು ಸಂಭ್ರಮಿಸಲಾರೆ ಬದಲಾಗಿ ಈ ಬೆಳವಣಿಗೆಯನ್ನು ದುರದೃಷ್ಟಕರವೆಂದು ದುಃಖಿಸುತ್ತೇನೆ. ವಿಶ್ವಾಸ ರಾಜಕಾರಣವನ್ನು ಎಲ್ಲರೊಡಗೂಡಿ ಮುಂದುವರೆಸಿ ಪಕ್ಷ ಸಂಘಟನೆಗೆ ಕಟ್ಟಕಡೆಯ ಕಾರ್ಯಕರ್ತರನ್ನೂ ಅಣಿಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯಲಿದ್ದೇನೆ. ಭವಿಷ್ಯದಲ್ಲಿಯೂ ನಾನು ನಡೆಯುವ ಹಾದಿಯಲ್ಲಿ ಎಲ್ಲಾದರೂ ಎಡವಿದರೆ, ಅದನ್ನು ತಿದ್ದಿ ತೀಡುವ ಅಧಿಕಾರ ಪಕ್ಷದ ಹಿರಿಯರೆಲ್ಲರಿಗೂ ಇದ್ದೇ ಇದೆ.
ಬಿ.ವೈ.ವಿಜಯೇಂದ್ರ ರವರ ಟ್ವೀಟ್ ಇಲ್ಲಿದೆ ನೋಡಿ: Click Here
ಎಲ್ಲರೂ ಸೇರಿ ರಚನಾತ್ಮಕ ಸಲಹೆಗಳನ್ನು ಸ್ವೀಕರಿಸಿ ಪಕ್ಷವನ್ನು ಮುನ್ನಡೆಸೋಣ, ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತದಲ್ಲಿ ಮುಳುಗಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ, ಸಮೃದ್ಧ ಕರ್ನಾಟಕವನ್ನು ಕಟ್ಟುವ ನಿಟ್ಟಿನಲ್ಲಿ ವಿಕಸಿತ ಭಾರತದ ಸಂಕಲ್ಪ ಹೊತ್ತ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಜೀ ಅವರಿಗೆ ಹೆಗಲು ಕೊಡೋಣ, ಪಕ್ಷದ ವರಿಷ್ಟರ ನಿರೀಕ್ಷೆಯ ಗುರಿ ತಲುಪೋಣ ಎಂದು ಟ್ವೀಟ್ ಮಾಡಿದ್ದಾರೆ.

Politics – ಯತ್ನಾಳ್‌ ಹಂಚಿಕೊಂಡ ಟ್ವೀಟ್ ನಲ್ಲಿ ಏನಿದೆ?

ಬಿಜೆಪಿಯಿಂದ ಉಚ್ಛಾಟನೆಯಾದ ಬಳಿಕ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಟ್ವೀಟ್‌ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಪಕ್ಷದಲ್ಲಿ ಸುಧಾರಣೆ ಮತ್ತು ಏಕವ್ಯಕ್ತಿ ನಾಯಕತ್ವವನ್ನು ಬದಲಾಯಿಸಿ ಎಂದು ಹೇಳಿದ್ದಕ್ಕಾಗಿ ಪಕ್ಷ ನನ್ನನ್ನು 6 ವರ್ಷಗಳ ಕಾಲ ಉಚ್ಛಾಟಿಸಿದೆ. ಸತ್ಯವಂತರಿಗಿದು ಕಾಲವಲ್ಲ ಎಂದು ಪುರಂದರದಾಸರ ಕೀರ್ತನೆಯ ಸಾಲನ್ನು ಉಲ್ಲೇಖಿಸಿ, ಬಿಜೆಪಿ ನಾಯಕರನ್ನು ಪರೋಕ್ಷವಾಗಿ ಕುಟುಕಿದ್ದಾರೆ.”

ಯತ್ನಾಳ್ ಹಂಚಿಕೊಂಡ ಪೋಸ್ಟ್ ಇಲ್ಲಿದೆ ನೋಡಿ : Click Here

ಯತ್ನಾಳ್ ತಮ್ಮ ಟ್ವೀಟ್‌ನಲ್ಲಿ ಮತ್ತಷ್ಟು ವಿವರಿಸಿ, “ವಂಶಪಾರಂಪರ್ಯ ರಾಜಕೀಯ, ಭ್ರಷ್ಟಾಚಾರ, ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ಪಕ್ಷದೊಳಗಿನ ಸುಧಾರಣೆಗಾಗಿ ಮಾತನಾಡಿದ್ದಕ್ಕೆ ಈ ಶಿಕ್ಷೆ ದೊರೆತಿದೆ. ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದಕ್ಕೆ ಪಕ್ಷ ನನಗೆ ಪ್ರತಿಫಲ ನೀಡಿದೆ. ಕೆಲವು ಸ್ಥಾಪಿತ ಹಿತಾಸಕ್ತಿಗಳು ತಮ್ಮ ಕಾರ್ಯಸೂಚಿಯನ್ನು ಯಶಸ್ವಿಯಾಗಿ ಮುಂದುವರಿಸಿದ್ದಾರೆ. ಆದರೆ ಈ ಉಚ್ಛಾಟನೆ ನನ್ನ ಹೋರಾಟವನ್ನು ತಡೆಯಲಾರದು,” ಎಂದು ಸ್ಪಷ್ಟಪಡಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top
WordPress Lab Ankara Escort: Çankaya Escort, Mamak Escort, Polatlı Escort İstanbul Escort: Avcılar Escort, Beylikdüzü Escort, Esenyurt Escort Bursa Escort: İznik Escort, Büyükorhan Escort, İnegöl Escort ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….! ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ? Politpress – Multipurpose Political WordPress theme TheCraft | Responsive Multipurpose WordPress Theme Cesar | Photography WordPress Infinity – One Page WordPress Theme Zyan – Personal Portfolio WordPress Theme Clivo – Portfolio & Agency WordPress Theme Industify – Industry WordPress Theme Blog Post Image Accordion Addon For Elementor Lilac – Fashion Responsive WooCommerce WordPress Theme Catalog | Buy Sell / Marketplace Responsive WordPress Theme