HomeStateLove : ಪೋಷಕರ ವಿರೋಧದ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಚಿಕ್ಕಬಳ್ಳಾಪುರದ ಹಿಂದೂ-ಮುಸ್ಲಿಂ ಜೋಡಿ….!

Love : ಪೋಷಕರ ವಿರೋಧದ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಚಿಕ್ಕಬಳ್ಳಾಪುರದ ಹಿಂದೂ-ಮುಸ್ಲಿಂ ಜೋಡಿ….!

Love – ಪ್ರೀತಿಗೆ ಯಾವುದೇ ಜಾತಿ, ಧರ್ಮ, ಹಣ, ಆಸ್ತಿ ಯಾವುದರ ಅಡ್ಡಿಯಿಲ್ಲ ಎಂದೇ ಹೇಳಲಾಗುತ್ತದೆ. ಕೆಲವೊಂದು ಪ್ರೇಮ ಪ್ರಕರಣಗಳು ಸುಖಾಂತ್ಯ ಕಂಡರೇ, ಕೆಲವೊಂದು ಪ್ರಕರಣಗಳು ದುರಂತ ಕಾಣುತ್ತದೆ. ಚಿಕ್ಕಬಳ್ಳಾಪುರದಲ್ಲೊಂದು ಪ್ರೇಮ ವಿವಾಹ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಮೈಲಪ್ಪನಹಳ್ಳಿ ಗ್ರಾಮದ ನಿವಾಸಿ ಪಸೀಹಾ (23) ಹಾಗೂ ನಾಗಾರ್ಜುನ (24) ಜಾತಿ ಧರ್ಮ ಮೀರಿ ಮದುವೆಯಾಗಿದ್ದಾರೆ.

Love – ವಾಟ್ಸಾಪ್ ಮೂಲಕ ಪರಿಚಯವಾದ ಎದುರು ಬದುರು ಜೋಡಿ…!

ಚಿಕ್ಕಬಳ್ಳಾಪುರ (Chikkaballapur) ತಾಲ್ಲೂಕಿನ ಮೈಲಪ್ಪನಹಳ್ಳಿ ಗ್ರಾಮದ ನಿವಾಸಿ 23 ವರ್ಷದ ಪಸೀಹಾ ಕಳೆದ 2 ವರ್ಷಗಳಿಂದ ತನ್ನ ಮನೆ ಎದುರಿನ ಹಿಂದೂ ಯುವಕ 24 ವರ್ಷದ ನಾಗಾರ್ಜುನನನ್ನು ಪ್ರೀತಿಸುತ್ತಿದ್ದಳು. ಮೊದಲಿಗೆ ವಾಟ್ಸಾಪ್ ಮೂಲಕ ಪರಿಚಯವಾಗಿ ಪ್ರೀತಿ ಹುಟ್ಟಿದೆ. ಆದರೆ ಅವರ ಪೋಷಕರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಎಲ್ಲವನ್ನೂ ಮೀರಿ, ಜಾತಿ ಧರ್ಮ ಬದಿಗಿಟ್ಟು ಪೋಷಕರ ವಿರೋಧದ ನಡುವೆಯೂ ಪೊಲೀಸ್ ಠಾಣೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Love - Hindu-Muslim couple marriage in Chikkaballapur with police protection | ಚಿಕ್ಕಬಳ್ಳಾಪುರದಲ್ಲಿ ಪೊಲೀಸ್ ಸುರಕ್ಷತೆಯಲ್ಲಿ ಅಂತರ್ಜಾತಿ ಮದುವೆ

Love – ಪೋಷಕರ ವಿರೋಧ

ಎದುರು ಬದರು ಮನೆಯಲ್ಲಿ ವಾಸವಿದ್ದ ಫಸೀಹಾ ಹಾಘೂ ನಾಗಾರ್ಜುನ ಸುಮಾರು ಎರಡು ವರ್ಷಗಳಿಂದ ಪ್ರತಿಸುತ್ತಿದ್ದಾರೆ. ಆದರೆ ಅವರಿಬ್ಬರ ಮದುವೆಗೆ ಪೋಷಕರು ವಿರೋಧವಿತ್ತು. ತಾವು ಏನಾದರೂ ಮಾಡಿ ಮದುವೆಯಾಗಲೇ ಬೇಕು, ತಮ್ಮ ಪ್ರೀತಿಯನ್ನು ಗೆಲ್ಲಬೇಕು ಎಂದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಮೊರೆ ಹೋಗಿದ್ದರು. ವಿಚಾರ ತಿಳಿದ ಜೋಡಿಯ ಪೋಷಕರು ಆಗಮಿಸಿ ಇಬ್ಬರ ಪ್ರೀತಿಗೆ ವಿರೋಧ ಮಾಡಿದ್ದಾರೆ. ಆದರೂ ಸಹ ಫಸೀಹಾ ತಾನು ಪ್ರೀತಿಸಿದ ಯುವಕನ ಜೊತೆಗೆ ಬಾಳುತ್ತೇನೆ ಹಠ ಹಿಡಿದಿದ್ದಾಳೆ.

Read this Also : ತನ್ನ ಪ್ರಿಯಕರ ಬೇರೊಬ್ಬಳ ಜೊತೆ ಚಾಟ್ ಮಾಡ್ತಿದ್ದಾ ಅಂತಾ ಆತ್ಮಹತ್ಯೆಗೆ ಶರಣಾದ ಅಪ್ರಾಪ್ತ ಬಾಲಕಿ….!

Love – ಪೊಲೀಸ್ ಠಾಣೆಯಲ್ಲಿ ನಡೆದ ಹೈಡ್ರಾಮಾ

ಇನ್ನೂ ಈ ಸಮಯದಲ್ಲಿ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದೊಡ್ಡ ಹೈಡ್ರಾಮ ನಡೆದಿದೆ. ಜೋಡಿಯ ಪೋಷಕರು ಠಾಣೆಗೆ ಬಂದು ಅವರ ಪ್ರೀತಿಗೆ ವಿರೋಧ ಮಾಡಿದ್ದಾರೆ. ಜೊತೆಗೆ ಯುವತಿಯ ಪೋಷಕರು ಇದನ್ನು ಇಲ್ಲಿಗೆ ಬಿಟ್ಟು, ನಮ್ಮ ಜೊತೆ ಮನೆಗೆ ಬಾ ಎಂದು ಬೇಡಿಕೊಂಡಿದ್ದಾರೆ. ಪೋಷಕರು ಎಷ್ಟೇ ಬೇಡಿಕೊಂಡು ಫಸೀಹಾ ಮಾತ್ರ ತನ್ನ ಪ್ರಿಯಕರನನ್ನು ಬಿಟ್ಟು ಬರಲ್ಲ ಎಂದು ಪಟ್ಟು ಹಿಡಿದಿದ್ದಳು. ಕೊನೆಗೆ ಫಸೀಹಾ ಹಾಗೂ ನಾಗಾರ್ಜುನ್ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular