Sunday, August 31, 2025
HomeStateChamarajanagar - ಗಂಡನಿಗೆ ತಲೆಯಲ್ಲಿ ಕೂದಲು ಇಲ್ಲ ಅಂತಾ ಹೆಂಡ್ತಿ ಟಾರ್ಚರ್, ಆತ್ಮಹತ್ಯೆಗೆ ಶರಣಾದ ಗಂಡ…!

Chamarajanagar – ಗಂಡನಿಗೆ ತಲೆಯಲ್ಲಿ ಕೂದಲು ಇಲ್ಲ ಅಂತಾ ಹೆಂಡ್ತಿ ಟಾರ್ಚರ್, ಆತ್ಮಹತ್ಯೆಗೆ ಶರಣಾದ ಗಂಡ…!

Chamarajanagar – ಸಾಮಾನ್ಯವಾಗಿ ಪತಿ ಅಥವಾ ಪತಿಯ ಕುಟುಂಬಸ್ಥರಿಂದ ಕಿರುಕುಳಕ್ಕೆ ಗುರಿಯಾದ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳ ಬಗ್ಗೆ ಆಗಾಗ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಆದರೆ ಇಲ್ಲೊಂದು ಘಟನೆ ಅದಕ್ಕೆ ತದ್ವಿರುದ್ದವಾಗಿದೆ. ಅಂದರೇ ಗಂಡನಿಗೆ ತಲೆಯಲ್ಲಿ ಕೂದಲಿಲ್ಲ ಎಂದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ (Chamarajanagar) ತಾಲೂಕಿನ ಉಡಿಗಾಲ (Udigala) ಗ್ರಾಮದಲ್ಲಿ ನಡೆದಿದೆ.

Baldness taunts lead to suicide in Chamarajanagar

Chamarajanagar – ಪತ್ನಿಯಿಂದಲೇ ಪತಿಗೆ ಕಿರುಕುಳ

ಪತ್ನಿಯಿಂದ ಕಿರುಕುಳಕ್ಕೆ ಗುರಿಯಾದ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಉಡಿವಾಲ ಎಂಬ ಗ್ರಾಮದ ಪರಶಿವ (32) ಎಂದು ಗುರ್ತಿಸಲಾಗಿದೆ. ಆತನ ಪತ್ನಿ ಮಮತಾ ಎಂಬಾಕೆಯೇ ಮೃತ ಪರಶಿವನಿಗೆ ಕಿರುಕುಳ ನೀಡುತ್ತಿದ್ದಳು ಎನ್ನಲಾಗಿದೆ. ಇನ್ನೂ ಆರೋಪಿ ಮಮತಾ ಗೆ ಹೈಫೈ ಜೀವನದ ಮೇಲೆ ವ್ಯಾಮೋಹವಿತ್ತು. ಜೊತೆಗೆ ರೀಲ್ಸ್ ಮಾಡುವ ಗೋಳು ಸಹ ಹೆಚ್ಚಾಗಿತ್ತು ಎಂದು ಹೇಳಲಾಗಿದೆ. ಆಗಾಗ ತನ್ನ ಪತಿಗೆ ನೀನು ಚೆನ್ನಾಗಿಲ್ಲ, ನೀನು ನನಗೆ ಸರಿಯಾದ ಜೋಡಿಯಲ್ಲ ಎಂದು ಎಲ್ಲರ ಎದುರಿನಲ್ಲಿಯೇ ಅವಮಾನ ಸಹ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.

Chamarajanagar – ರೀಲ್ಸ್ ರಾಣಿಯ ಶೋಕಿಗೆ ಬಲಿಯಾದ ವ್ಯಕ್ತಿ

ಇನ್ನೂ ಆರೋಪಿ ಮಮತಾ ರೀಲ್ಸ್ ಮಾಡುವ ಹುಚ್ಚು ಬೆಳೆಸಿಕೊಂಡಿದ್ದಳು. ಸಂಸಾರವನ್ನು ಬಿಟ್ಟು ಸದಾ ರೀಲ್ಸ್ ಗಾಗಿ ಶೋಕಿ ಜೀವನ ನಡೆಸುತ್ತಿದ್ದಳಂತೆ. ಗಂಡನ ಜೊತೆ ವಿಡಿಯೋ ಮಾಡಲು ಆತ ಚೆನ್ನಾಗಿಲ್ಲ ಅಂತಾ ಗಂಡನಿಗೆ ಕಿರುಕುಳ ನೀಡಲು ಶುರು ಮಾಡಿದ್ದಾಳೆ. ನೀನು ನನಗೆ ಸರಿಯಾದ ಜೋಡಿಯಲ್ಲ ಎಂದು ಎಲ್ಲರ ಮುಂದೆಯೇ ಅವಮಾನ ಮಾಡುತ್ತಿದ್ದಳಂತೆ. ರೀಲ್ಸ್ ಹುಚ್ಚಿನ  ಜೊತೆಗೆ ಹೈಪೈ ಜೀವನ ಮಾಡಲು ಪ್ರತಿನಿತ್ಯ ಬ್ರಾಂಡೆಡ್ ಬಟ್ಟೆ, ಆಭರಣ ಕೊಡಿಸುವಂತೆ ಹಾಗೂ ಬೇರೆ ಮನೆ ಮಾಡುವಂತೆ ಈ ಬಡಪಾಯಿ ಪತಿಗೆ ಕಿರುಕುಳ ಕೊಡಲು ಶುರು ಮಾಡಿದ್ದಾಳೆ.

Baldness taunts lead to suicide in Chamarajanagar

ಇದೆಲ್ಲಾ ಸಾಲದು ಅಂತಾ ಒಂದೂವರೆ ತಿಂಗಳು ಪತಿಯನ್ನು ಸುಳ್ಳು ಕೇಸಿನ ಮೇಲೆ ಜೈಲಿಗೆ ಸಹ ಕಳುಹಿದ್ದಳಂತೆ. ವರದಕ್ಷಿಣೆ ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತೇನೆ ಅಂತಾ ಬೆದರಿಕೆಗಳನ್ನು ಸಹ ಹಾಕುತ್ತಿದ್ದಳಂತೆ. ಈ ಎಲ್ಲಾ ಕಿರುಕುಳವನ್ನು ತಾಳಲಾರದೆ ಪರಶಿವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular