Sunday, August 31, 2025
HomeStateEntertainment - ನಾಟಕ, ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಮುಂದಾಗಬೇಕು: ಪ್ರಸನ್ನಕುಮಾರ್....!

Entertainment – ನಾಟಕ, ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಮುಂದಾಗಬೇಕು: ಪ್ರಸನ್ನಕುಮಾರ್….!

Entertainment : ಇಂದಿನ ತಂತ್ರಜ್ಞಾನ ಯುಗದಲ್ಲಿ ಬಹುತೇಕರು ಮೊಬೈಲ್, ಟಿ.ವಿ, ಇಂಟರ್‍ ನೆಟ್, ಸೋಷಿಯಲ್ ಮಿಡಿಯಾಗಳಲ್ಲಿ ತಲ್ಲೀನರಾಗಿರುತ್ತಾರೆ. ಆದರೆ ಮಾನವೀಯ ಮೌಲ್ಯಗಳನ್ನು ತಿಳಿಸುವಂತಹ ನಾಟಕ, ರಂಗಭೂಮಿ ಕಲೆಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಆದ್ದರಿಂದ ಎಲ್ಲರೂ ರಂಗಭೂಮಿ, ನಾಟಕ ಕಲೆಯನ್ನು ಉಳಿಸಿ, ಬೆಳೆಸಲು ಮುಂದಾಗಬೇಕೆಂದು ಐಶ್ವರ್ಯ ಕಲಾನಿಕೇತನ ಸಂಸ್ಥೆಯ ಸಂಸ್ಥಾಪಕ ಪ್ರಸನ್ನ ಕುಮಾರ್‍ ತಿಳಿಸಿದರು.

Entertainment - miss-sevanti-kannada-play-gudibande

Entertainment – ನೂರಾರು ಮಂದಿ ವೀಕ್ಷಣೆ ಮಾಡಿದ ನಾಟಕ

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದ ಅಂಗವಾಗಿ ಸಂಜೆಯ ಮನರಂಜನಾ ಕಾರ್ಯಕ್ರಮವಾಗಿ ನಕ್ಕು ನಗಿಸುತ್ತಾ ಮಾನವೀಯ ಮೌಲ್ಯಗಳನ್ನು ತಿಳಿಸುವಂತಹ ಕುರಿಬಾಂಡ್ ಕಾರ್ಯಕ್ರಮ ಖ್ಯಾತಿಯ ಐ-ಸಾಗರ್‍ ನಿರ್ದೇಶನದ, ಚಿಕ್ಕಬಳ್ಳಾಪುರದ ಐಶ್ವರ್ಯ ಕಲಾನಿಕೇತನ ಸಂಸ್ಥೆಯ ಸಹಯೋಗದಲ್ಲಿ ಹಾಸ್ಯಮಯ ನಾಟಕ ಮಿಸ್ ಸೇವಂತಿ ಎಂಬ ನಾಟಕವನ್ನು ಪ್ರದರ್ಶನ ಮಾಡಲಾಯಿತು. ನಾಟಕದ ಆರಂಭದಿಂದ ಮುಕ್ತಾಯವಾಗುವ ತನಕ ನೂರಾರು ಮಂದಿ ಪ್ರೇಕ್ಷಕರು ನಾಟಕ ವೀಕ್ಷಣೆ ಮಾಡಿದರು.

Entertainment – ರಂಗಭೂಮಿ ಕಲೆಯನ್ನು ಉಳಿಸಲು ಕರೆ

ನಾಟಕ ಪ್ರದರ್ಶನಕ್ಕೂ ಮುನ್ನಾ ಮಾತನಾಡಿದ ಐಶ್ವರ್ಯ ಕಲಾನಿಕೇತನ ಸಂಸ್ಥೆಯ ಸಂಸ್ಥಾಪಕ ಪ್ರಸನ್ನ ಕುಮಾರ್‍, ಹಿಂದಿನ ಕಾಲದಲ್ಲಿ ರಂಗಭೂಮಿ ಕ್ಷೇತ್ರ ತುಂಬಾನೆ ಪ್ರಾಮುಖ್ಯತೆ ಹೊಂದಿತ್ತು. ಸ್ವತಂತ್ರ ಹೋರಾಟದಲ್ಲೂ ಸಹ ರಂಗಭೂಮಿ ಕಲೆ ಪ್ರಮುಖ ಪಾತ್ರ ವಹಿಸಿದೆ. ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿ ತೀಡುವಂತಹ, ಅವುಗಳ ದುಷ್ಪರಿಣಾಮಗಳ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವಲ್ಲಿ ನಾಟಕಗಳು ತುಂಬಾ ಸಹಕಾರಿಯಾಗಿತ್ತು. ಜೊತೆಗೆ ಜನರಿಗೆ ಮನರಂಜನೆಯಾಗಿಯೂ ಸಹ ನಾಟಕಗಳು ರೂಪುಗೊಂಡಿತ್ತು. ಆದರೆ ಇಂದಿನ ಆಧುನಿಕ ಭರಾಟೆಯಲ್ಲಿ ನಮ್ಮ ರಂಗಭೂಮಿ ಕಲೆ ಅವನತಿಯತ್ತ ಸಾಗುತ್ತಿದೆ. ಆದರೂ ಕೆಲವೊಂದು ಕಡೆ ಇನ್ನೂ ರಂಗಭೂಮಿ ಕಲೆ ಉಳಿದಿದೆ. ಜೊತೆಗೆ ಅನೇಕ ರಂಗಭೂಮಿ ಕಲಾವಿದರು ನಾಟಕಗಳನ್ನು ಪ್ರದರ್ಶನ ಮಾಡುತ್ತಾ ರಂಗಭೂಮಿ ಕಲೆಯನ್ನು ಉಳಿಸುತ್ತಾ ಬರುತ್ತಿದ್ದಾರೆ. ಅದೇ ರೀತಿ ಪ್ರತಿಯೊಬ್ಬರೂ ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸುವುತ್ತಾ ಮುಂದಾಗಬೇಕೆಂದರು.

Entertainment - miss-sevanti-kannada-play-gudibande

Entertainment – ಜನರ ಮನಸೋರೆಗೋಳಿಸಿದ ಮಿಸ್ ಸೇವಂತಿ ನಾಟಕ

ಇನ್ನೂ ಮಾನವೀಯ ಮೌಲ್ಯಗಳನ್ನು ತಿಳಿಸುವ ಕುರಿತು ಹಾಸ್ಯಮಯ ರೂಪದಲ್ಲಿ ಈ ನಾಟಕ ರೂಪುಗೊಂಡಿದ್ದು, ಯಶಸ್ವಿಯಾಗಿ ಪ್ರದರ್ಶನಗೊಂಡಿತ್ತು. ನಾಟಕದಲ್ಲಿ ಪ್ರಧಾನ ಪಾತ್ರ ವಹಿಸಿದ್ದಂತಹ ಸೇವಂತಿ ಎಂಬ ಮಹಿಳೆ ಮೊರಟು ವ್ಯಕ್ತಿತ್ವ ಹೊಂದಿರುತ್ತಾಳೆ. ಆಕೆಯಲ್ಲಿ ಉತ್ತಮ ಶಿಸ್ತನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಾಧ್ಯಾಪಕ ಹಾಗೂ ಭಾಷಾ ಶಾಸ್ತ್ರಜ್ಞ ಭಾರ್ಗವ ಶಾಸ್ತ್ರಿಯ ಹಾಸ್ಯಮಯವಾದ ಪ್ರಯತ್ನ ಪ್ರೇಕ್ಷಕರನ್ನು ನಕ್ಕು ನಲಿಸುವಂತಾಗಿತ್ತು.

ಕಥೆಯಲ್ಲಿ ಸೇವಂತಿ ತನ್ನದೇ ಆದ ಬದುಕನ್ನು ಕಟ್ಟಿಕೊಳ್ಳಲು ಹೂಮಾರುವ ಮಹಿಳೆಯಾಗಿರುತ್ತಾಳೆ. ಅವಳು ಶಿಕ್ಷಣವಿಲ್ಲದೇ ಶಿಸ್ತಿನ ಬದುಕನ್ನು ಕಾಣಲಿಲ್ಲ. ಶಿಕ್ಷಣ ಇಲ್ಲದೇ ಮೊರಟು ಮಾತಿನಿಂದ ಸಮಾಜದಲ್ಲಿ ಒರಟು ಮಹಿಳೆ ಎಂದೇ ಕರಿಯಲ್ಪಡುತ್ತಾಳೆ. ಇವಳನ್ನು ಹೇಗಾದರೂ ಸುಶಿಕ್ಷಿತಳಾಗಿ ಮಾಡಿ ಶಿಕ್ಷಣ ನೀಡಬೇಕೆಂದು ಭರ್ಗವ ಶಾಸ್ತ್ರಿ ಪ್ರಯತ್ನ, ಪಟ್ಟು ವಿಜಯ ಸಾಧಿಸಿದರೂ ಶಾಸ್ತ್ರ ಸ್ವಾರ್ಥ ಮನೋಭಾವನೆ ಹಾಗೂ ಸೇವಂತಿಯ ಸ್ವಾಭಿಮಾನ ಸಂಘರ್ಷಕ್ಕೆ ಎಡಮಾಡಿ ಸೇವಂತಿ ಮತ್ತೆ ಹೂವಾಡಗಿತ್ತಿ ಆಗುವುದೇ ಈ ನಾಟಕದ ಸಾರಾಂಶ.

Entertainment - miss-sevanti-kannada-play-gudibande

Entertainment – ಯುವ ಕಲಾವಿದರ ನಾಟಕ ಪ್ರದರ್ಶನ

ಚಿಕ್ಕಬಳ್ಳಾಪುರದ ಐಶ್ವರ್ಯ ಕಲಾನಿಕೇತನ ಹಾಗೂ ಬೆಂಗಳೂರಿನ ರಂಗಸಾಗರ ರವರ ಸಹಯೋಗದಲ್ಲಿ ಗಡಿನಾಡು ಗುಡಿಬಂಡೆಯಲ್ಲಿ ವಿವಿಧ ಕಾಲೇಜುಗಳಲ್ಲಿ ಓದುತ್ತಿರುವ ಇಂಜನೀಯರಿಂಗ್ ವಿದ್ಯಾರ್ಥಿಗಳ ತಂಡ ಈ ನಾಟಕವನ್ನು ಪ್ರದರ್ಶನ ಮಾಡಿತ್ತು. ಸಂಫೂರ್ಣ ಹೊಸಬರು ಹಾಗೂ ಯುವ ಕಲಾವಿದರನ್ನೇ ಹೊಂದಿದ್ದ ಈ ನಾಟಕ ಅತ್ಯಂತ ವರ್ಣಮಯವಾಗಿ, ತಿಳಿ ಹಾಸ್ಯದ ನಿರೂಪಣೆಯಲ್ಲಿ ಸಂಗೀತ ಹಾಗೂ ನೃತ್ಯಮಯವಾಗಿ ಮೂಡಿಬಂದಿತ್ತು. ಸುಮಾರು 50 ಮಂದಿ ಕಲಾವಿದರು, 10 ಮಂದಿಯ ಸಂಗೀತ ಮೇಳ ನಾಟಕಕ್ಕೆ ಮತ್ತಷ್ಟು ಮೆರುಗು ನೀಡಿತ್ತು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular