ESIC – ಎಂಪ್ಲಾಯೀಸ್ ಸ್ಟೇಟ್ ಇನ್ಶುರೆನ್ಸ್ ಕಾರ್ಪೊರೇಶನ್ (ESIC), ಕರ್ನಾಟಕವು ಬೆಂಗಳೂರು ಮತ್ತು ಕಲಬುರಗಿಯ ತನ್ನ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ 111 ವೈದ್ಯಕೀಯ ಮತ್ತು ಶೈಕ್ಷಣಿಕ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಇದರಲ್ಲಿ ಸೀನಿಯರ್ ರೆಸಿಡೆಂಟ್, ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಸ್ಪೆಷಲಿಸ್ಟ್ ಮತ್ತು ಸೂಪರ್ ಸ್ಪೆಷಲಿಸ್ಟ್ ಹುದ್ದೆಗಳು ಸೇರಿವೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನಿಗದಿತ ದಿನಾಂಕಗಳಲ್ಲಿ ನೇರ ಸಂದರ್ಶನಕ್ಕೆ (Walk-in Interview) ಹಾಜರಾಗಬಹುದು. ESIC ಕರ್ನಾಟಕ ನೇಮಕಾತಿ 2024ರ ಪ್ರಮುಖ ವಿವರಗಳು, ಅರ್ಹತೆ, ವೇತನ ಮತ್ತು ಅರ್ಜಿ ಪ್ರಕ್ರಿಯೆ ಇಲ್ಲಿದೆ.

ESIC ಕರ್ನಾಟಕ ನೇಮಕಾತಿ 2025 – ಹುದ್ದೆಗಳ ಸಂಪೂರ್ಣ ವಿವರ
✅ ಸಂಸ್ಥೆ: ಕಾರ್ಮಿಕರ ರಾಜ್ಯ ವಿಮಾ ನಿಗಮ, ಕರ್ನಾಟಕ (ESIC Karnataka)
✅ ಒಟ್ಟು ಹುದ್ದೆಗಳ ಸಂಖ್ಯೆ: 111
✅ ಉದ್ಯೋಗ ಸ್ಥಳ: ಬೆಂಗಳೂರು, ಕಲಬುರಗಿ – ಕರ್ನಾಟಕ
✅ ಹುದ್ದೆಗಳ ಹೆಸರು: ಸೀನಿಯರ್ ರೆಸಿಡೆಂಟ್, ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟಂಟ್ ಪ್ರೊಫೆಸರ್, ಸ್ಪೆಷಲಿಸ್ಟ್
✅ ನೇಮಕಾತಿ ಪ್ರಕ್ರಿಯೆ: ನೇರ ಸಂದರ್ಶನ
✅ ವೇತನ ಶ್ರೇಣಿ: ₹60,000 – ₹2,38,896
✅ ಅಧಿಕೃತ ವೆಬ್‌ಸೈಟ್: rokarnataka.esic.gov.in
ESIC – ಹುದ್ದೆವಾರು ಖಾಲಿ ಸ್ಥಾನಗಳ ವಿವರ
ಹುದ್ದೆ ಹೆಸರು | ಸ್ಥಾನಗಳ ಸಂಖ್ಯೆ |
ಸೀನಿಯರ್ ರೆಸಿಡೆಂಟ್ (ಬೆಂಗಳೂರು) | 16 |
ಪೂರ್ಣಕಾಲಿಕ/ಅರೆಕಾಲಿಕ ಸ್ಪೆಷಲಿಸ್ಟ್ | 4 |
ಸೂಪರ್ ಸ್ಪೆಷಲಿಸ್ಟ್ | 2 |
ಸೀನಿಯರ್ ರೆಸಿಡೆಂಟ್ (ಕಲಬುರಗಿ) | 57 |
ಪ್ರೊಫೆಸರ್ | 6 |
ಅಸೋಸಿಯೇಟ್ ಪ್ರೊಫೆಸರ್ | 14 |
ಅಸಿಸ್ಟಂಟ್ ಪ್ರೊಫೆಸರ್ | 12 |
ESIC ಅರ್ಹತೆ ಮತ್ತು ಶೈಕ್ಷಣಿಕ ವಿದ್ಯಾರ್ಹತೆ:
▶ ಸೀನಿಯರ್ ರೆಸಿಡೆಂಟ್ (ಬೆಂಗಳೂರು): MBBS, ಸ್ನಾತಕೋತ್ತರ ಪದವಿ (MD/MS/DNB)
▶ ಪೂರ್ಣಕಾಲಿಕ/ಅರೆಕಾಲಿಕ ಸ್ಪೆಷಲಿಸ್ಟ್: MD/MS/DNB ಅಥವಾ ತತ್ಸಮಾನ ಡಿಗ್ರಿ
▶ ಸೂಪರ್ ಸ್ಪೆಷಲಿಸ್ಟ್: DM/M.Ch
▶ ಸೀನಿಯರ್ ರೆಸಿಡೆಂಟ್ (ಕಲಬುರಗಿ): MD/MS/DNB ಅಥವಾ ಸಮಾನವಾದ ಪದವಿ
▶ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟಂಟ್ ಪ್ರೊಫೆಸರ್: PG ಡಿಗ್ರಿಯ ಜೊತೆಗೆ ಅನುಭವ ಅಗತ್ಯ
ESIC – ವಯೋಮಿತಿ:
▶ ಸೀನಿಯರ್ ರೆಸಿಡೆಂಟ್ (ಬೆಂಗಳೂರು): ಗರಿಷ್ಠ 45 ವರ್ಷ
▶ ಸೀನಿಯರ್ ರೆಸಿಡೆಂಟ್ (ಕಲಬುರಗಿ): ಗರಿಷ್ಠ 44 ವರ್ಷ
▶ ಇತರೆ ಹುದ್ದೆಗಳ ಗರಿಷ್ಠ ವಯೋಮಿತಿ: 69 ವರ್ಷ
ESIC – ಅಪ್ಲಿಕೇಶನ್ ಶುಲ್ಕ
✔ ಸಾಮಾನ್ಯ ಅಭ್ಯರ್ಥಿಗಳು: ₹300 (ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕು)
✔ SC/ST/ಮಹಿಳಾ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ
ESIC – ಆಯ್ಕೆ ಪ್ರಕ್ರಿಯೆ
✅ ಸ್ಕ್ರೀನಿಂಗ್ ಟೆಸ್ಟ್
✅ ಮೆಡಿಕಲ್ ಪರೀಕ್ಷೆ
✅ ದಾಖಲೆಗಳ ಪರಿಶೀಲನೆ
✅ ನೇರ ಸಂದರ್ಶನ
ESIC – ವೇತನ ಶ್ರೇಣಿ (ಹುದ್ದೆವಾರು)
ಹುದ್ದೆ | ವೇತನ (₹) |
ಸೀನಿಯರ್ ರೆಸಿಡೆಂಟ್ (ಬೆಂಗಳೂರು) | ESIC ನಿಯಮಗಳ ಪ್ರಕಾರ |
ಸ್ಪೆಷಲಿಸ್ಟ್ | 60,000 – 1,27,141 |
ಸೂಪರ್ ಸ್ಪೆಷಲಿಸ್ಟ್ | 1,00,000 – 2,00,000 |
ಸೀನಿಯರ್ ರೆಸಿಡೆಂಟ್ (ಕಲಬುರಗಿ) | 1,36,483 |
ಪ್ರೊಫೆಸರ್ | 2,38,896 |
ಅಸೋಸಿಯೇಟ್ ಪ್ರೊಫೆಸರ್ | 1,58,861 |
ಅಸಿಸ್ಟಂಟ್ ಪ್ರೊಫೆಸರ್ | 1,36,483 |
ESIC – ನೇರ ಸಂದರ್ಶನ ದಿನಾಂಕಗಳು
📅 ಸೀನಿಯರ್ ರೆಸಿಡೆಂಟ್ (ಬೆಂಗಳೂರು): 04 ಮಾರ್ಚ್ 2025
📅 ಸ್ಪೆಷಲಿಸ್ಟ್, ಸೂಪರ್ ಸ್ಪೆಷಲಿಸ್ಟ್: 05 ಮಾರ್ಚ್ 2025
📅 ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟಂಟ್ ಪ್ರೊಫೆಸರ್, ಸೀನಿಯರ್ ರೆಸಿಡೆಂಟ್ (ಕಲಬುರಗಿ): 28 ಫೆಬ್ರವರಿ 2025
ESIC – ನೇರ ಸಂದರ್ಶನ ಸ್ಥಳ ಮತ್ತು ವಿಳಾಸ
📍 ಬೆಂಗಳೂರು:
ಮೆಡಿಕಲ್ ಸೂಪರಿಂಟೆಂಡಂಟ್ ಕಚೇರಿ, ಇಎಸ್‌ಐಸಿ ಹಾಸ್ಪಿಟಲ್, ಪೀಣ್ಯ, ಯಶವಂತಪುರ, ಬೆಂಗಳೂರು – 22.
📍 ಕಲಬುರಗಿ:
ಇಎಸ್‌ಐಸಿ ಮೆಡಿಕಲ್ ಕಾಲೇಜು ಮತ್ತು ಹಾಸ್ಪಿಟಲ್, ಕಲಬುರಗಿ.
📢 ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: rokarnataka.esic.gov.in