Marriage – ಹಲವಾರು ಕಾರಣಗಳಿಂದ ಅನೇಕ ಯುವಕರಿಗೆ ಮದುವೆಯಾಗುವುದಿಲ್ಲ. ಈ ಕೊರಗು ಅನೇಕ ಯುವಕರಲ್ಲಿರುತ್ತದೆ ಎಂದು ಹೇಳಬಹುದಾಗಿದೆ. ಹೆಣ್ಣು ಮಕ್ಕಳಿಗೆ ತಾನು ಮದುವೆಯಾಗುವ ಗಂಡ, ಅತ್ತೆ ಮಾವ, ಗಂಡನ ಮನೆಯ ಕಡೆಯವರು ಹೇಗಿರುತ್ತಾರೋ ಎಂಬ ಚಿಂತೆಯಿರುತ್ತದೆ. ಅದೇ ರೀತಿ ಗಂಡು ಮಕ್ಕಳಿಗೆ ಮದುವೆಯಾಗುವ ಹೆಂಡತಿ ಮನೆಯಲ್ಲಿ ಹೊಂದಿಕೊಂಡು ಹೋಗುತ್ತಾಳೋ ಅಥವಾ ಇಲ್ಲವೋ ಎಂಬುದೇ ದೊಡ್ಡ ಚಿಂತೆಯಾಗಿರುತ್ತದೆ. ಈ ಕಾರಣಗಳಿಂದಲೂ ಅನೇಕರು ಮದುವೆ ಎಂಬ ಜಂಜಾಟವೇ ಬೇಡ ಎಂದು ಮದುವೆಯಾಗದೇ ಇರುತ್ತಾರೆ. ಆದರೆ ಇಲ್ಲೋಬ್ಬ ಭೂಪ ಹೆಣ್ಣಿಗಿಂತ ಪ್ರೆಷರ್ ಕುಕ್ಕರ್ ಬೆಸ್ಟ್ ಎಂದು ಪ್ರೆಷರ್ ಕುಕ್ಕರ್ ಅನ್ನೇ ಮದುವೆಯಾಗಿರುವ ವಿಭಿನ್ನ ಘಟನೆ ನಡೆದಿದೆ.
Marriage – ಪ್ರೆಷರ್ ಕುಕ್ಕರ್ ಅನ್ನು ಮದುವೆಯಾದ ಭೂಪ:
ಅಂದಹಾಗೆ ಈ ಘಟನೆ ನಡೆದಿರೋದು ಇಂಡೋನೇಷ್ಯಾದಲ್ಲಿ. ಹೌದು ಇಂಡೋನೇಷ್ಯಾದ ನಿವಾಸಿ ಖೋಯಿರುಲ್ ಅನಮ್ ಎಂಬಾತ ತನ್ನ ರೈಸ್ ಕುಕ್ಕರ್ ನೊಂದಿಗೆ ಮದುವೆಯಾಗಿದ್ದಾನೆ. ಈ ಹಿಂದೆ ಪ್ರಾಣಿಗಳನ್ನು, ರೋಬೋಟ್ ಗಳನ್ನು, ಬೊಂಬೆಗಳನ್ನು ಹೀಗೆ ವಸ್ತುಗಳ ಜೊತೆ ಮದುವೆಯಾದ ಘಟನೆಗಳನ್ನು ನೋಡಿರುತ್ತೇವೆ. ಮತ್ತೆ ಕೆಲವೊಂದು ಘಟನೆಗಳಲ್ಲಿ ಹುಡುಗರ ಸಹವಾಸವೇ ಬೇಡ ಅಂತಾ ಇಬ್ಬರು ಹುಡುಗಿಯರು ಮದುವೆಯಾದ ಘಟನೆಗಳ ಬಗ್ಗೆ ಸಹ ಕೇಳಿದ್ದೇವೆ. ಅದೇ ರೀತಿ ಇಬ್ಬರು ಯುವಕರು ಮದುವೆಯಾದಂತಹ ಘಟನೆಗಳ ಸುದ್ದಿಗಳನ್ನು ಸಹ ಕೇಳಿರುತ್ತೇವೆ.

Marriage -ವೈರಲ್ ಆದ ಮದುವೆ ಸುದ್ದಿ:
ಇದೀಗ ತನ್ನ ಪ್ರೆಷರ್ ಕುಕ್ಕರ್ ಅನ್ನೇ ಖೋಯಿರುಲ್ ಅನಮ್ ಎಂಬ ವ್ಯಕ್ತಿ ಮದುವೆಯಾಗಿದ್ದಾನೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಈತ ನಿಜವಾಗಿಯೂ ಕುಕ್ಕರ್ ಜೊತೆ ಮದುವೆಯಾಗಿಲ್ಲ. ಬದಲಿಗೆ ಎಲ್ಲೂ ಲೈಕ್ ಗಳಿಗಾಗಿ ಫೇಮಸ್ ಆಗೋಕೆ ಪ್ರೆಷರ್ ಕುಕ್ಕರ್ ಅನ್ನು ಮದುವೆಯಾಗಿದ್ದಾನೆ. ಕುಕ್ಕರ್ ಗೆ ಸಿಂಗಾರ ಮಾಡಿ ಅದರ ಜೊತೆಗೆ ಮದುವೆಯಾಗಿದ್ದಾನೆ. ಮದುವೆಯಾದರೇ ಪತ್ನಿ ಉಲ್ಟಾ ಉತ್ತರ ಕೊಡ್ತಾಳೆ, ನನಗೆ ಅನ್ನ-ಆಹಾರ ಕೊಡ್ತಾಳೋ ಇಲ್ಲವೋ, ಆದರೆ ಈ ಪ್ರೆಷರ್ ಕುಕ್ಕರ್ ಮಾತ್ರ ನನಗೆ ಬಿಸಿ ಬಿಸಿ ಆಹಾರ ಕೊಡುತ್ತೆ ಎಂದು ಪ್ರೆಷರ್ ಕುಕ್ಕರನ್ನೇ ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ.
ಇನ್ನೂ ಮತ್ತಷ್ಟು ಸುದ್ದಿಯಾಗಲು ಮತ್ತೊಂದು ಕೆಲಸ ಸಹ ಮಾಡಿದ್ದಾನೆ. ಪ್ರೆಷರ್ ಕುಕ್ಕರ್ ಅನ್ನು ಮದುವೆಯಾದ ಈ ಭೂಪ, ನಂತರ ಡಿವೋರ್ಸ್ ಕೊಟ್ಟು ಸುದ್ದಿಯಾಗಿದ್ದಾನೆ. ಮೊದಲು ಕುಕ್ಕರ್ ಜೊತೆಗೆ ಸಂಪ್ರದಾಯಿಕ ಉಡುಗೆ ಧರಿಸಿ ಮದುವೆಯಾಗಿದ್ದಾನೆ. ಈ ಪೊಟೋ ಹಂಚಿಕೊಂಡಿದ್ದಾನೆ. ನಂತರ ಡಿವೋರ್ಸ್ ಸಹ ಕೊಟ್ಟಿದ್ದಾನೆ. ಕುಕ್ಕರ್ ಜೊತೆಗೆ ಮದುವೆಯಾಗಿದ್ದು ಏಕೆ ಎಂದೂ ಸಹ ಹೇಳಿದ್ದಾನೆ. ಈ ಕುಕ್ಕರ್ ವಿಧೇಯ, ನ್ಯಾಯಯುತ, ಪ್ರೀತಿಯ ಮತ್ತು ಅಡುಗೆಯಲ್ಲಿ ಉತ್ತಮವಾಗಿರುವುದು ನನ್ನ ಭಾಗ್ಯ, ಈ ರೀತಿಯ ಹೆಣ್ಣು ಎಲ್ಲೂ ಸಿಗೊಲ್ಲ ಎಂದು ನನಗೆ ತಿಳಿಯಿತು ಎಂದು ಕುಕ್ಕರ್ ಜೊತೆ ಮದುವೆಯಾದ ಕಾರಣ ಹೇಳಿದ್ದಾನೆ.

Marriage -ಮದುವೆಯಾದ ಡಿವೋರ್ಸ್ ಕೊಟ್ಟ:
ಮುಂದುವರೆದು ತಾನು ಡಿವೋರ್ಸ್ ಕೊಟ್ಟಿದ್ದು ಏಕೆ ಎಂಬುದನ್ನು ತಿಳಿಸಿದ್ದಾನೆ. ಇದು ಅನ್ನ ಮಾಡುವುದರಲ್ಲಿ ತುಂಬಾನೆ ಫೇಮಸ್, ಅಡುಗೆ ಸಹ ಮಾಡುತ್ತೇ, ಆದರೆ ಮದುವೆಯಾದ ಬಳಿಕ ನನಗೆ ಮುಖ್ಯವಾಗಿ ಏನು ಬೇಕು ಅದನ್ನು ಕೊಡುವುದಿಲ್ಲ, ಆದ್ದರಿಂದ ನಾನು ವಿಚ್ಚೇದನ ನೀಡುತ್ತಿದ್ದೇನೆ ಎಂದು ಹೇಳಿದ್ದಾನೆ. ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗೋಕೆ ಈ ರೀತಿಯಲ್ಲಿ ಮಾಡಿದ್ದು, ಅನೇಕರು ಆತನ ಈ ಕೆಲಸಕ್ಕೆ ನಕ್ಕಿದ್ದಾರೆ. ಈ ಸಂಬಂಧ ಹಳೆಯ ವಿಡಿಯೋ ವೈರಲ್ ಆಗುತ್ತಿದ್ದು, ಸೋಷಿಯಲ್ ಮಿಡಿಯಾದಲ್ಲಿ ಅನೇಕರು ಫನ್ನಿಯಾಗಿ ಕಾಮೆಂಟ್ ಗಳನ್ನು ಸಹ ಹಾಕುತ್ತಿದ್ದಾರೆ.