Crime News – ಅನೇಕರು ಕ್ಷುಲ್ಲಕ ಕಾರಣಗಳಿಂದ ಸಾಯುವಂತಹ ದೊಡ್ಡ ನಿರ್ಧಾರ ಮಾಡುತ್ತಾರೆ. ಸಾಯುವುದಕ್ಕೂ ಒಂದು ಕ್ಷಣ ಮುಂಚೆ ಯೋಚನೆ ಮಾಡಿದರೇ ಅನೇಕ ಆತ್ಮಹತ್ಯೆಗಳನ್ನು ತಡೆಯಬಹುದಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. 14 ದಿನದ ಮಗು ಹಾಗೂ ಪತಿಯನ್ನು ತ್ಯೆಜಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೊಟ್ಟೋಳಿಯಲ್ಲಿ ಈ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ಕಾವೇರಮ್ಮ (24) ಎಂದು ಗುರ್ತಿಸಲಾಗಿದೆ. ವಿರಾಜಪೇಟೆ ತಾಲೂಕಿನ ಕರಡ ನಿವಾಸಿ ದಿವಂಗತ ಕಟ್ಟಿ ಬಿದ್ದಪ್ಪ-ಶೀಳಲಾ ದಂಪತಿಯ ಪುತ್ರಿ ಹಾಗೂ ಕೊಟ್ಟೋಳಿ ಗ್ರಾಮದ ನಿವಾಸಿ ಎಂ.ಎಂ. ದಿನೇಶ್ ಎಂಬಾತನ ಪತ್ನಿ ಎಂದು ಗುರ್ತಿಸಲಾಗಿದೆ.
ಕಳೆದ 4 ವರ್ಷಗಳ ಹಿಂದೆ ದಿನೇಶ್ ಹಾಗೂ ಕಾವೇರಮ್ಮ ಮದುವೆಯಾಗಿತ್ತು. ಫೆ.12 ರಂದು ಪತಿ ದಿನೇಶ್ ತಮ್ಮ ಮನೆಯ ಹತ್ತಿರದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ಮಗುವಿನ ಕೂಗಾಟ ಕೇಳಿ ಸ್ಥಳಕ್ಕೆ ಬಂದು ನೋಡಿದರೇ ಕಾವೇರಮ್ಮ ಸ್ನಾನದ ಕೊಣೇಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವುದನ್ನು ಕಂಡಿದೆ. ಇನ್ನೂ ಕಾವೇರಮ್ಮ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಮೃತಳ ಅಣ್ಣ ಎಂ.ಎ.ತಿಮ್ಮಯ್ಯ ಎಂಬುವವರು ನೀಡಿದ ದೂರಿನಂತೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.