ಬಾಹುಬಲಿ ಸಿನೆಮಾ ಪ್ರೇಮಿಗಳಿಗೆ ಗುಡ್ ನ್ಯೂಸ್, ಬಾಹುಬಲಿ ಕ್ರೌನ್ ಆಫ್ ಬ್ಲಡ್ ಸೀರಿಸ್ ಘೋಷಣೆ ಮಾಡಿದ ರಾಜಮೌಳಿ…..!

ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ದಾಖಲೆಗಳನ್ನು ಸೃಷ್ಟಿಸಿದ ಬಾಹುಬಲಿ ಸಿನೆಮಾ ಇಂದಿಗೂ ಸಹ ತುಂಬಾನೆ ಕ್ರೇಜ್ ಹೊಂದಿದೆ. ಬಾಹುಬಲಿ ಹಾಗೂ ಬಾಹುಬಲಿ-2 ಸಿನೆಮಾ ಬಾಕ್ಸ್ ಆಫೀಸ್ ಧೂಳಿಪಟ ಮಾಡಿತ್ತು. ಕೋಟ್ಯಂತರ ಕಲೆಕ್ಷನ್ ಮಾಡಿ ದೇಶದ ಅನೇಕ ಸಿನೆಮಾಗಳ ರೆಕಾರ್ಡ್ ಗಳನ್ನು ಬ್ರೇಕ್ ಮಾಡಿತ್ತು. ಇಂದಿಗೂ ಸಹ ಬಾಹುಬಲಿ ಸಿನೆಮಾದ ಕೆಲ ರೆಕಾರ್ಡ್‌ಗಳನ್ನು ಬ್ರೇಕ್ ಮಾಡಲು ಸಾಧ್ಯವಾಗಲಿಲ್ಲ ಎಂದೇ ಹೇಳಬಹುದು. ಇದೀಗ ಬಾಹುಬಲಿ ಸಿನೆಮಾ ಪ್ರೇಮಿಗಳಿಗೆ ಮತ್ತೊಂದು ಗುಡ್ ನ್ಯೂಸ್ ದೊರೆತಿದೆ. ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಈ ಕುರಿತು ಅಪ್ಡೇಟ್ ಒಂದನ್ನು ನೀಡಿದ್ದಾರೆ. ಈ ಸುದ್ದಿ ಇದೀಗ ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗಿದೆ.

Baahubali Crown of Blood annouced 2

ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಬಾಹುಬಲಿ ಸಿನೆಮಾದ ಮೂಲಕ ವಿಶ್ವದಾದ್ಯಂತ ಖ್ಯಾತಿ ಪಡೆದುಕೊಂಡರು. ಪ್ರಭಾಸ್ ಹಾಗೂ ಅನುಷ್ಕಾ, ತಮನ್ನಾ ಕಾಂಬಿನೇಷನ್ ನಲ್ಲಿ ಬಂದ ಈ ಸಿನೆಮಾ ಭಾರಿ ಸಕ್ಸಸ್ ಕಂಡಿತ್ತು. ಇಂದಿಗೂ ಸಹ ಈ ಸಿನೆಮಾದ ಕ್ರೇಜ್ ಕಡಿಮೆಯಾಗಿಲ್ಲ. ಹಾಲಿವುಡ್ ಸಿನೆಮಾಗಳಲ್ಲಿ ವೆಬ್ ಸಿರೀಸ್ ಗಳಂತೆ ಸಿನೆಮಾ ಸಿರೀಸ್ ಗಳೂ ಸಹ ಅನೇಕವು ಇದೆ. ಸ್ಪೈಡರ್‍ ಮ್ಯಾನ್, ಬ್ಯಾಟ್ ಮ್ಯಾನ್, ಸೂಪರ್‍ ಮ್ಯಾನ್, ಅವೆಂಜೆರ್ಸ್ ಹೀಗೆ ಅನೇಕ ಸಿನೆಮಾಗಳು ಅನೇಕ ಭಾಗಗಳಲ್ಲಿ ತೆರೆಕಂಡು ಭಾರಿ ದಾಖಲೆ ನಿರ್ಮಾಣ ಮಾಡಿದೆ. ಇದೀಗ ಬಾಹುಬಲಿ ಸಿನೆಮಾದ ಬಗ್ಗೆ ಅಂತಹುದೇ ಸುದ್ದಿಯೊಂದನ್ನು ರಾಜಮೌಳಿ ನೀಡಿದ್ದಾರೆ. ಈ ಸುದ್ದಿ ಕೇಳಿದ ಅನೇಕರು ತುಂಬಾನೆ ಥ್ರಿಲ್ ಆಗಿದ್ದಾರೆ. ಅಷ್ಟಕ್ಕೂ ರಾಜಮೌಳಿ ನೀಡಿದ ಆ ಸ್ವೀಟ್ ನ್ಯೂಸ್ ಏನು ಎಂಬ ವಿಚಾರಕ್ಕೆ ಬಂದರೇ,

Baahubali Crown of Blood annouced 1

ನಿರ್ದೇಶಕ ರಾಜಮೌಳಿ ಇದೀಗ ಬಾಹುಬಲಿ ಸಿನೆಮಾದ ಬಗ್ಗೆ ಥ್ರಿಲ್ಲಿಂಗ್ ಸುದ್ದಿಯೊಂದು ಹಂಚಿಕೊಂಡಿದ್ದಾರೆ. ಬಾಹುಬಲಿ ಸಿನೆಮಾದ ಹೆಸರಿನಲ್ಲಿ ಸೀರಿಸ್ ಘೋಷಣೆ ಮಾಡಿದ್ದಾರೆ. ಬಾಹುಬಲಿ ಸಿನೆಮಾ ಮಾಡಿದ ಮೇಲೆ ಬಾಹುಬಲಿ ಸಿರೀಸ್ ಮಾಡೋದು ಏಕೆ ಎಂಬ ಪ್ರಶ್ನೆ ಮೂಡಿದೆ. ಇದೀಗ ಬಾಹುಬಲಿ ಸಿರೀಸ್ ಘೋಷಣೆ ಯಾಗಿದೆ. ಇದೊಂದು ಅನಿಮೇಟೆಡ್ ಸಿರೀಸ್ ಆಗಿದೆ. ಬಾಹುಬಲಿ ಕ್ರೌನ್ ಆಫ್ ಬ್ಲಡ್ ಎಂಬ ಹೆಸರಿನಲ್ಲಿ ಈ ಸರಣಿ ಬರಲಿದೆ. ಈ ಸಂಬಂಧ ಬಿಡುಗಡೆಯಾದ ವಿಡಿಯೋದಲ್ಲಿ ಬಾಹುಬಲಿ ಬಾಹುಬಲಿ ಎಂಬ ಹಿನ್ನೆಲೆ ಧ್ವನಿ ಕೇಳುತ್ತಿದ್ದು, ಮತಷ್ಟು ಕುತೂಹಲ ಮೂಡುವಂತೆ ಮಾಡಿದೆ.

ಈ ಕುರಿತು ರಾಜಮೌಳಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಈ ಪೋಸ್ಟ್ ನಲ್ಲಿರುವಂತೆ ಮಾಹಿಷ್ಮತಿಯ ಜನರು ಅವನ ಹೆಸರನ್ನು ಸ್ಮರಣೆ ಮಾಡಿದಾಗ, ಬ್ರಹ್ಮಾಂಡದ ಯಾವುದೇ ಶಕ್ತಿಯು ಅವನ ಹಿಂತಿರುಗುವಿಕೆಯನ್ನು ತಡೆಯಲು ಸಾಧ್ಯವಿಲ್ಲ. ಬಾಹುಬಲಿ ಕ್ರೌನ್ ಆಫ್ ಬ್ಲಡ್ ಎಂಬ ಅನಿಮೇಟೆಡ್ ಸರಣಿ ಶೀಘ್ರವೇ ಬರಲಿದೆ ಎಂದು ಪೋಸ್ಟ್ ಮಾಡಿದ್ದಾರೆ. ಈ ಸರಣಿಯನ್ನುರಾಜಮೌಳಿ ನಿರ್ದೇಶನ ಮಾಡಿದ್ದಾರೆ. ಈ ಸಿರೀಸ್ ಬಾಹುಬಲಿ ಸಿನೆಮಾದ ಕಥೆಯನ್ನೇ ಹೊಂದಿದೆ ಎಂಬುದು ಮತಷ್ಟು ಕುತೂಹಲ ಮೂಡಿಸಿದೆ. ಇನ್ನೂ ರಾಜೌಳಿಯವರ RRR ಸಿನೆಮಾ ಸಹ ಗ್ಲೋಬಲ್ ಲೆವೆಲ್ ನಲ್ಲಿ ಸೂಪರ್‍ ಹಿಟ್ ಆಗಿದೆ. ಈ ಸಿನೆಮಾದ ಬಳಿಕ ಮಹೇಶ್ ಬಾಬು ರವರೊಂದಿಗೆ ಹಾಲಿವುಡ್ ಮಾದರಿಯಲ್ಲಿ ಸಿನೆಮಾ ಮಾಡುತ್ತಿದ್ದಾರೆ. ಸದ್ಯ ಈ ಸಿನೆಮಾದ ಪ್ರೀ ಪ್ರೊಡಕ್ಷನ್ ಕೆಸಗಳು ಬರದಿಂದ ಸಾಗುತ್ತಿತ್ತು. ಇದೊಂದು ಅಡ್ವೆಂಚರ್‍ ಸಿನೆಮಾ ಆಗಿರಲಿದೆ ಎನ್ನಲಾಗಿದೆ. ಈ ಸಿನೆಮಾದ ಮೇಲೂ ಭಾರಿ ನಿರೀಕ್ಷೆಯನ್ನು ಅಭಿಮಾನಿಗಳು ಇಟ್ಟುಕೊಂಡಿದ್ದಾರೆ.

Leave a Comment

Your email address will not be published. Required fields are marked *

Scroll to Top