HomeStateCrime News: ಲವ್ ಜಿಹಾದ್ ಆರೋಪ, ನೇಣಿಗೆ ಶರಣಾದ 9ನೇ ತರಗತಿ ವಿದ್ಯಾರ್ಥಿನಿ….!

Crime News: ಲವ್ ಜಿಹಾದ್ ಆರೋಪ, ನೇಣಿಗೆ ಶರಣಾದ 9ನೇ ತರಗತಿ ವಿದ್ಯಾರ್ಥಿನಿ….!

Crime News – ಪ್ರೀತಿಯ ವಿಚಾರವಾಗಿ 15 ವರ್ಷದ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಬಣಗಾರ ಕಾಲೋನಿಯಲ್ಲಿ ನಡೆದಿದೆ. ನೂರಾರು ಕನಸುಗಳನ್ನು ಕಂಡಿದ್ದ 9ನೇ ತರಗತಿ ವಿದ್ಯಾರ್ಥಿನಿ ಇದೀಗ ನೇಣಿಗೆ ಶರಣಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತ ದುರ್ದೈವಿಯನ್ನು ಖುಷಿ ಎಂದು ಗುರ್ತಿಸಲಾಗಿದೆ. ಅಪ್ರಾಪ್ತ ಬಾಲಕರ ಕಿರುಕುಳಕ್ಕೆ ಬೇಸತ್ತ ಖುಷಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಜೊತೆಗೆ ಲವ್ ಜಿಹಾದ್ ಆರೋಪ ಸಹ ಕೇಳಿಬಂದಿದೆ.

Love Torcher 9th girl dead 1

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಬಣಕಾರ ಓಣಿಯ ನಿವಾಸಿ 15 ವರ್ಷ ಖುಷಿ 9ನೇ ತರಗತಿಯಲ್ಲಿ ಓದುತ್ತಿದ್ದಳು. ಚೆನ್ನಾಗಿ ಓದಿ ಜೀವನದಲ್ಲಿ ದೊಡ್ಡ ಸಾಧನೆ ಮಾಡುತ್ತೇನೆ ಎಂದು ತನ್ನ ಪೋಷಕರಿಗೆ ಪ್ರತಿನಿತ್ಯ ಹೇಳುತ್ತಿದ್ದಳು. ಆದರೆ ಆಕೆಯ ಕನಸುಗಳೆಲ್ಲಾ ಈಗ ನುಚ್ಚು ನೂರಾಗಿದೆ. ಕನಸು ಕಂಡ ಪುಟ್ಟ ಹೃದಯ ಇದೀಗ ಲವ್ ಕಿರುಕುಳಕ್ಕೆ ಬಲಿಯಾಗಿದೆ. ಇಬ್ಬರು ಬಾಲಕರು ಆಕೆಗೆ ಕಿರುಕುಳ ನೀಡುತ್ತಿದ್ದು, ಇದರಿಂದ ಬೇಸತ್ತ ಖುಷಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಖುಷಿ ಓದುತ್ತಿದ್ದ ಶಾಲೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ಪ್ರತಿನಿತ್ಯ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದರೆಂದು ಖುಷಿಯ ಹೆತ್ತವರು ಆರೋಪ ಮಾಡಿದ್ದಾರೆ. ಮುದ್ದಾಗಿ ಸಾಕಿದ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ಇನ್ನೂ ಅಪ್ರಾಪ್ತ ಬಾಲಕರ ಕಿರುಕುಳ ಕ್ಕೆ ಖುಷಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ಜಿಲ್ಲೆಯಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಎಸ್.ಎಸ್.ಕೆ ಸಮಾಜದ ಆಕ್ರೋಷಕ್ಕೂ ಕಾರಣವಾಗಿದೆ ಎನ್ನಲಾಗಿದೆ. ಇನ್ನೂ ಬಾಲಕಿಯ ಸಾವು ಖಂಡಿಸಿ ವ್ಯಾಪಾರ ವಹಿವಾಟನ್ನು ಬಂದ್ ಮಾಡಿದ್ದರು. ಖುಷಿ ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಖುಷಿ ಲವ್ ಜಿಹಾದ್ ಗೆ ಬಲಿಯಾಗಿರುವ ಸಂಶಯವಿದೆ. ಈ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ತಹಸೀಲ್ದಾರರಿಗೆ ಆಗ್ರಹಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಕಲಿಸಿಕೊಂಡ ಗಜೇಂದ್ರಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular