Karnataka Politics – ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ನೃತೃತ್ವದಲ್ಲಿ ನಡೆದ ಕಾಂಗ್ರೇಸ್ ಸರ್ವ ಸದಸ್ಯರ ಸಭೆಗೆ ಗೃಹ ಸಚಿವ ಪರಮೇಶ್ವರ್ ಹಾಗೂ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಗೈರಾಗಿದ್ದಾರೆ. ಈ ಕಾರಣದಿಂದ ಸಚಿವರ ಮೇಲೆ ರಣದೀಪ್ ಸುರ್ಜೇವಾಲ ಗರಂ ಆಗಿದ್ದಾರೆ ಎನ್ನಲಾಗಿದೆ. ಈ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಪ್ರಶ್ನೆ ಕೇಳಿದ್ದಾರಂತೆ.

ಪಕ್ಷದ ಕೆಲಸಕ್ಕಿಂತ ದೊಡ್ಡ ಕಾರ್ಯಕ್ರಮವಿತ್ತಾ ಅಥವಾ ಗೈರಾಗಲು ಅನುಮತಿ ಪಡೆದಿದ್ರಾ ಎಂದು ಡಿಕೆಶಿಯನ್ನು ಪ್ರಶ್ನಿಸಿದ್ದಾರಂತೆ ಅದಕ್ಕೆ ಡಿಕೆಶಿ ಉತ್ತರಿಸಿ ಅನುಮತಿ ಪಡೆದ ವಿಚಾರ ನನಗೆ ಗೊತ್ತಿಲ್ಲ. ಸಭೆ ಬಗ್ಗೆ ಎಲ್ಲರಿಗೂ ಮಾಹಿತಿಯಿದ್ದು, ಸಭೆಯ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು ಎಂದಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಕೆಲವು ದಿನಗಳಿಂದ ಪವರ್ ಶೇರಿಂಗ್ ಚರ್ಚೆ ಹಾಗೂ ಡಿನ್ನರ್ ಪಾಲಿಟಿಕ್ಸ್ ವಿವಾದದ ಹಿನ್ನೆಯಲ್ಲಿ ಸುರ್ಜೇವಾಲ ರಾಜ್ಯಕ್ಕೆ ಆಗಮಿಸಿ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಇದಕ್ಕೂ ಮುನ್ನಾ ಕಾಂಗ್ರೇಸ್ ಶಾಸಕರು ಹಾಗೂ ಸಚಿವರ ಜೊತೆಗೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಪಕ್ಷದ ವಿಚಾರವನ್ನು ಬಹಿರಂಗವಾಗಿ ಮಾತನಾಡದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆಯಷ್ಟೆ ಸಚಿವ ಪರಮೇಶ್ವರ್ ದಲಿತ ನಾಯಕರಿಗೆ ಡಿನ್ನರ್ ಮೀಟಿಂಗ್ ಆಯೋಜನೆ ಮಾಡಿದ್ದರು. ಇದು ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ನಂತರ ಹೈಕಮಾಂಡ್ ಸೂಚನೆ ಮೇರೆಗೆ ಡಿನ್ನರ್ ಮೀಟಿಂಗ್ ಮುಂದೂಡಿದ್ದರು. ಅದಕ್ಕೂ ಮೊದಲು ಸಚಿವ ಸತೀಶ್ ಜಾರಕಿಹೊಳಿ ರವರು ಡಿನ್ನರ್ ಮೀಟಿಂಗ್ ನಡೆದಿತ್ತು. ಇದೂ ಸಹ ಕಾಂಗ್ರೇಸ್ ಪಾಳೆಯದಲ್ಲಿ ಸಂಚಲನ ಸೃಷ್ಟಿಸಿತ್ತು ಎನ್ನಲಾಗಿದೆ.