Bengalore – ಇತ್ತೀಚಿಗೆ ವಿವಾಹೇತರ ಸಂಬಂಧಗಳು, ಅಕ್ರಮ ಸಂಬಂಧಗಳ ಕಾರಣದಿಂದ ಅನೇಕ ದುರ್ಘಟನೆಗಳು ನಡೆಯುತ್ತಿವೆ. ಅನೇಕರು ಪ್ರಾಣ ಕಳೆದುಕೊಳ್ಳುತ್ತಿರುವ ಬಗ್ಗೆ ಕೇಳುತ್ತಲೇ ಇರುತ್ತೇವೆ. ಆದರೂ ಸಹ ಈ ರೀತಿಯ ಅನೈತಿಕ ಸಂಬಂಧಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಅಂತಹುದೇ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಇಬ್ಬರು ಮಕ್ಕಳ ತಾಯಿಯನ್ನು ಪ್ರೀತಿಸುತ್ತಿದ್ದ ಯುವಕ ಹಾಗೂ ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳುರಿನ ರಾಚೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ದಿಲ್ಷಾದ್ ಹಾಗೂ ಜಾನ್ಸನ್ ಎಂದು ಗುರ್ತಿಸಲಾಗಿದೆ. ಥಣಿಸಂದ್ರ ಮೂಲದ ಜಾನ್ಸನ್ ಮದುವೆಯಾದ ದಿಲ್ಷಾದ್ ಳನ್ನು ಪ್ರೀತಿ ಮಾಡುತ್ತಿದ್ದ. ಈಗಾಗಲೇ ದಿಲ್ಷಾದ್ ವಿಜಯಪುರ ಮೂಲದ ಕೃಷ್ಣ ಎಂಬಾತನೊಂದಿಗೆ ಮದುವೆಯಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ದಿಲ್ಷಾದ್ ಗಂಡ ಚಾಲಕನಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದರೂ ದಿಲ್ಷಾದ್ ಜಾನ್ಸನ್ ಜೊತೆಗೆ ಪ್ರೀತಿಗೆ ಬಿದಿದ್ದಳು. ಇಬ್ಬರೂ ಗಾಢ ಪ್ರೀತಿಯಲ್ಲಿ ಮುಳುಗಿದ್ದರು.

ಇನ್ನೂ ಜಾನ್ಸನ್ ಹಾಗೂ ದಿಲ್ಷಾದ್ ಪರಸ್ಪರ ಪ್ರೀತಿಸಿಕೊಳ್ಳುತ್ತಿದ್ದು, ತಮ್ಮ ಪ್ರೀತಿಯನ್ನು ಈ ಸಮಾಜ ಒಪ್ಪಲ್ಲ ಎಂದು ಜಾನ್ಸನ್ ತುಂಬಾ ನೊಂದಿದ್ದನಂತೆ. ಇಂದು (ಜ.11) ರಂದು ತಾನು ಕೆಲಸಕ್ಕೆ ಹೋದ ಜಾಗದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ. ಅಲ್ಲಿಗೆ ದಿಲ್ಷಾದ್ ಹೋಗಿ ಶವವನ್ನು ನೋಡಿಕೊಂಡು ವಾಪಸ್ಸು ಬಂದಿದ್ದಳು. ತನ್ನ ಪ್ರಿಯಕರ ಜಾನ್ಸನ್ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಮನನೊಂದ ಮಹಿಳೆ ಮದ್ಯಾಹ್ನದ ಹೊತ್ತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಜಾನ್ಸನ್ ಆತ್ಮಹತ್ಯೆಯ ಸಂಬಂಧ ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿಲ್ಷಾದ್ ಆತ್ಮಹತ್ಯೆಗೆ ಸಂಬಂಧಿಸದಿಂತೆ ಸಂಪಿಗೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.