Saturday, August 30, 2025
HomeNationalPhysical Abuse: ಸೊಸೆಗೆ ಕ್ರೂರವಾಗಿ ಚಿತ್ರಹಿಂಸೆ ಕೊಟ್ಟ ಅತ್ತೆ ಮಾವ, ಸೊಸೆಯ ಖಾಸಗಿ ಅಂಗಕ್ಕೆ ಮೆಣಸಿನಪುಡಿ,...

Physical Abuse: ಸೊಸೆಗೆ ಕ್ರೂರವಾಗಿ ಚಿತ್ರಹಿಂಸೆ ಕೊಟ್ಟ ಅತ್ತೆ ಮಾವ, ಸೊಸೆಯ ಖಾಸಗಿ ಅಂಗಕ್ಕೆ ಮೆಣಸಿನಪುಡಿ, ರಾಡ್ ಹಾಕಿದ ಪಾಪಿಗಳು…!

Physical Abuse – ಇತ್ತಿಚಿಗೆ ಮಹಿಳೆಯರ ಮೇಲೆ ದಿನೇ ದಿನೇ ದೌರ್ಜನ್ಯಗಳು ಹೆಚ್ಚಾಗುತ್ತಿದೆ. ಅಂತಹುದೇ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಅಪ್ಪ-ಅಮ್ಮನ ಜತೆ ಸೇರಿಕೊಂಡು ವ್ಯಕ್ತಿಯೊಬ್ಬ ತನ್ನ ಪತ್ನಿಯ ಗುಪ್ತಾಂಗವನ್ನು ಬಿಸಿ ಕಬ್ಬಿಣದ ರಾಡ್‌ನಿಂದ ಸುಟ್ಟುಹಾಕಿ ನಂತರ ಮೆಣಸಿನ ಪುಡಿಯನ್ನು ಹಚ್ಚಿ (Physical Abuse) ಚಿತ್ರಹಿಂಸೆ ಕೊಟ್ಟಿರುವ ಕ್ರೂರ ಘಟನೆ ನಡೆದಿದೆ. ಈ ಕುರಿತು ಅತ್ತೆ ಹಾಗೂ ಮಾವನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

daughter in law Physical Abuse 1

ಸಂತ್ರಸ್ತೆ ಮಹಿಳೆ ನೀಡಿದ ದೂರಿನಲ್ಲಿರುವಂತೆ ಪತಿ, ಅತ್ತಿಗೆ, ಅತ್ತೆ ಹಾಗೂ ಮಾವ ಎಲ್ಲರೂ ಸೇರಿ ಎರಡು ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದಾರೆ. ಆಕೆಯನ್ನು ಬೆತ್ತಲು ಮಾಡಿ, ಖಾಸಗಿ ಭಾಗಕ್ಕೆ ಖಾರದಪುಡಿ ಹಾಕಿದ್ದಾರೆ. ಖಾಸಗಿ ಭಾಗಗಳು, ತೊಡೆಗಳು ಮತ್ತು ದೇಹದ ಇತರ ಭಾಗಗಳಿಗೆ ಅತ್ತೆ ಕಾದ ಕಬ್ಬಿಣದ ರಾಡ್‌ನಿಂದ ಸುಟ್ಟಿದ್ದಾರೆ. ಮಾವ ಆಕೆಯ ಖಾಸಗಿ ಭಾಗಗಳಿಗೆ ಮೆಣಸಿನ ಪುಡಿಯನ್ನು ಹಾಕಿದ್ದಾರೆ ಎಂದು  ಸಂತ್ರಸ್ತೆ ಆರೋಪಿಸಿದ್ದಾರೆ. ಡಿಸೆಂಬರ್ 13 ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಕೃತ್ಯದ ಬಳಿಕ ಸಂತ್ರಸ್ತೆಯ ಪತಿ ಹಾಗೂ ಮಾವ ಬೈಕ್ ನಲ್ಲಿ ಆಕೆಯನ್ನು ಕರೆದುಕೊಂಡು ಹೋಗಿ ಪೊಲೀಸ್ ಠಾಣೆ ಬಳಿ ಬಿಟ್ಟು ಹೋಗಿದ್ದಾರೆ ಎಂದು ಹೇಳಲಾಗಿದೆ.

daughter in law Physical Abuse

ಇನ್ನೂ ರೋಹಿತ್ ರುಹೆಲಾ ಎಂಬ ವ್ಯಕ್ತಿ ಸಂತ್ರಸ್ತೆಯ ಮನೆಗೆ ಬಂದು ಸ್ಟೀಮ್ ಯಂತ್ರವನ್ನು ಕೇಳಿದ್ದನಂತೆ. ಸಂತ್ರಸ್ತೆ ಗೇಟ್ ಬಳಿ ಕಾಯಲು ಹೇಳಿದ್ದಾಳೆ. ಆದರೆ ಆ ವ್ಯಕ್ತಿ ಬಾಗಿಲು ಮುಚ್ಚಿ ಸಂತ್ರಸ್ತೆಯ ಕೋಣೆಗೆ ನುಗ್ಗಿ ಆಕೆಗೆ ಕಿರುಕುಳ ನೀಡಲು ಪ್ರಯತ್ನಿಸಿದ್ದನಂತೆ. ಈ ವೇಳೆ ಆಕೆಯ ಅತ್ತಿಗೆ ಕೊಠಡಿಯೊಳಗೆ ಹೋಗಿದ್ದಾಳೆ. ಈ ಸಮಯದಲ್ಲಿ ಕಿರುಕುಳ ಕೊಡಲು ಬಂದಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ. ಇದನ್ನು ನೋಡಿದ ಅತ್ತಿಗೆ ನನ್ನನ್ನು ದೂಷಣೆ ಮಾಡಿದ್ದಾಳೆ. ಇದೇ ದೂರನ್ನು ಅತ್ತೆ ಮಾವನಿಗೂ ತಿಳಿಸಿದ್ದಾಳೆ. ಮೂವರೂ ಚಳಿ ರಾತ್ರಿಯಲ್ಲಿ ನನನ್ನು ನಗ್ನಗೊಳಿಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ನಾನು ಪ್ರಜ್ಞಾಹೀನಳಾಗಿ ಬಿದಿದ್ದೇನೆ. ನಂತರದ ದಿನ ಅವರು ನನ್ನನ್ನು ಮತ್ತೆ ಹೊಡೆದಿದ್ದಾರೆ. ನನ್ನ ಮಾವ ತನ್ನ ಕೈಯಿಂದ ನನ್ನ ಖಾಸಗಿ ಭಾಗಗಳಿಗೆ ಮೆಣಸಿನ ಪುಡಿ ಹಚ್ಚಿದ್ದಾರೆ. ಅತ್ತೆ ನನ್ನ ತೊಡೆ ಸೇರಿದಂತೆ ಹಲವು ಕಡೆ ಬಿಸಿ ಕಬ್ಬಿಣದ ರಾಡ್ ನಿಂದ ಸುಟ್ಟಿದ್ದಾರೆ ಎಂದು ಸಂತ್ರಸ್ಥೆ ದೂರಿನಲ್ಲಿ ತಿಳಿಸಿದ್ದಾಳೆ ಎಂದು ತಿಳಿದುಬಂದಿದೆ. ಈ ಸಂಬಂಧ ಕುಟುಂಬಸ್ಥರ ವಿರುದ್ದ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular