Job Alert – SSLC, ITI ಪಾಸ್ ಆದವರಿಗೆ ಕೇರಳ ಕೊಚ್ಚಿಯ ಶಿಪ್ ಯಾರ್ಡ್ ಲಿಮಿಟೆಡ್ (CSL)ನಲ್ಲಿ ಖಾಲಿಯಿರುವ 224 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಶೀಟ್ ಮೆಟಲ್ ವರ್ಕರ್, ಮೆಕ್ಯಾನಿಕ್ ಡೀಸೆಲ್, ಪ್ಲಂಬರ್, ವೆಲ್ಡರ್ ಸೇರಿದಂತೆ ಒಟ್ಟು 224 ಹುದ್ದೆಗಳು ಖಾಲಿಯಿದ್ದು, ಈ ಹುದ್ದೆಗಳು ಗುತ್ತಿಗೆ ಆಧಾರಿತ ಹುದ್ದೆಗಳಾಗಿವೆ 5 ವರ್ಷ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಡಿ.30 ರೊಳಗೆ ಅರ್ಜಿ ಸಲ್ಲಿಸಬೇಕಿದೆ.

CSL Recruitment 2025 [Quick Summary]
- Organization Name : Cochin Shipyard Limited (CSL)
- Employment Type : Contract Basis
- Duration : Five Years
- Total No of Vacancies : 224 Workmen Posts
- Place of Posting : Kochi
- Starting Date : 16.12.2024
- Last Date : 30.12.2024
- Apply Mode : Online
- Official Website : https://cochinshipyard.in/
ವರ್ಗವಾರು ಹುದ್ದೆಗಳ ವಿವರ: ಒಟ್ಟು 224 ಹುದ್ದೆಗಳು:
| Post Name | Total Vacancies | Pay (per month) |
| Sheet Metal Worker | 42 | ₹23,300 (plus extra work pay up to ₹5,830) |
| Welder | 2 | ₹23,300 (plus extra work pay up to ₹5,830) |
| Mechanic Diesel | 11 | ₹23,300 (plus extra work pay up to ₹5,830) |
| Mechanic Motor Vehicle | 5 | ₹23,300 (plus extra work pay up to ₹5,830) |
| Plumber | 20 | ₹23,300 (plus extra work pay up to ₹5,830) |
| Painter | 17 | ₹23,300 (plus extra work pay up to ₹5,830) |
| Electrician | 36 | ₹23,300 (plus extra work pay up to ₹5,830) |
| Electronic Mechanic | 32 | ₹23,300 (plus extra work pay up to ₹5,830) |
| Instrument Mechanic | 38 | ₹23,300 (plus extra work pay up to ₹5,830) |
| Shipwright Wood | 7 | ₹23,300 (plus extra work pay up to ₹5,830) |
| Machinist | 13 | ₹23,300 (plus extra work pay up to ₹5,830) |
| Fitter | 1 | ₹23,300 (plus extra work pay up to ₹5,830) |
- ವಿದ್ಯಾರ್ಹತೆ: ಆಸಕ್ತ ಅಭ್ಯರ್ಥಿಗಳು ಯಾವುದೇ ಅಂಗೀಕೃತ ಶಿಕ್ಷಣ ಮಂಡಳಿ ಅಥವಾ ವಿಶ್ವ ವಿದ್ಯಾನಿಲಯದಿಂದ 10ನೇ ತರಗತಿ ಮತ್ತು ಐಟಿಐ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಜತೆಗೆ ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು.
- ವಯೋಮಿತಿ : ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳ ಗರಿಷ್ಠ ವಯಸ್ಸು 45 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ.
- ಅರ್ಜಿ ಶುಲ್ಕ : ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಇತರ ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 600 ರೂ. ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕವೇ ಪಾವತಿಸಬೇಕು.
- ಆಯ್ಕೆ ವಿಧಾನ ಮತ್ತು ವೇತನ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅಬ್ಜೆಕ್ಟಿವ್ ಟೈಪ್ ಆನ್‌ಲೈನ್ ಟೆಸ್ಟ್, ಪ್ರಾಕ್ಟಿಕಲ್ ಟೆಸ್ಟ್ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 23,300 ರೂ. ಮಾಸಿಕ ವೇತನ ದೊರೆಯಲಿದೆ.

ಅರ್ಜಿ ಸಲ್ಲಿಸುವ ವಿಧಾನ:
- ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಹೆಸರು ನೋಂದಾಯಿಸಿ. - ಅಗತ್ಯ ಮಾಹಿತಿಯೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ.
- ಅಗತ್ಯ ಡಾಕ್ಯುಮೆಂಟ್, ಸರಿಯಾದ ಅಳತೆಯಲ್ಲಿ ಫೋಟೊ ಅಪ್‌ಲೋಡ್ ಮಾಡಿ.
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
- ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
- ನಂತರ ಅಪ್ಲಿಕೇಷನ್ ಫಾರಂ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.
- ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್ ವಿಳಾಸ: https://cochinshipyard.in/ಗೆ ಭೇಟಿ ನೀಡಿ.
Official Notification & Application Link:
- CSL Official Career Page: Website Link
- CSL Official Notification PDF: Notification Link
- CSL Online Application Form: Apply Link

ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.

Sheet metal work