Heart Attack – ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ, ಯಾರೂ ಸುರಕ್ಷಿತರಲ್ಲ ಎನ್ನುವಂತಾಗಿದೆ. ಕೇವಲ ಒಂದೇ ದಿನದಲ್ಲಿ ರಾಜ್ಯದ ಹಲವೆಡೆ ಸಂಭವಿಸಿದ ಹೃದಯಾಘಾತ ಪ್ರಕರಣಗಳು ಈ ಆತಂಕಕ್ಕೆ ಮತ್ತಷ್ಟು ಪುಷ್ಠಿ ನೀಡುವಂತಿವೆ.
Heart Attack – ಪಾಠ ಕೇಳುತ್ತಿದ್ದಾಗಲೇ ಕೊನೆಯುಸಿರೆಳೆದ ವಿದ್ಯಾರ್ಥಿ
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕುರಬರಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ 10 ವರ್ಷದ ಮನೋಜ್ ಕುಮಾರ್ ಪಾಠ ಕೇಳುತ್ತಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಈ ಘಟನೆ ನಿಜಕ್ಕೂ ಮನ ಕಲಕುವಂತದ್ದು. ಮನೋಜ್‌ಗೆ ಹೃದಯ ಸಂಬಂಧಿ ಕಾಯಿಲೆ ಇತ್ತು ಹಾಗೂ ಈ ಹಿಂದೆ ಸಹ ಜಯದೇವ, ಅಪೋಲೋ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದ ಎಂಬ ಮಾಹಿತಿ ಕೇಳಿಬಂದಿದೆ. ಶಾಲೆಯಲ್ಲಿ ಓದುತ್ತಿದ್ದಾಗಲೇ ಕುಸಿದು ಬಿದ್ದು, ಕಣ್ಮುಚ್ಚಿದ್ದು ಎಲ್ಲರನ್ನೂ ದುಃಖತಪ್ತರನ್ನಾಗಿಸಿದೆ.
Heart Attack – ಹೆದ್ದಾರಿಯಲ್ಲೇ ಚಾಲಕನಿಗೆ ಮೃತ್ಯು!
ಬೆಳಗಾವಿಯ ಸವದತ್ತಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಗೂಡ್ಸ್ ವಾಹನ ಚಾಲಕ ಅಶೋಕ್ ಜೀರಿಗವಾಡ (40) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಿಕ್ಕ ಉಳ್ಳಿಗೇರಿ ಗ್ರಾಮದ ನಿವಾಸಿಯಾದ ಅಶೋಕ್, ಹೆಸರುಕಾಳು ಸಾಗಿಸಲು ಎಪಿಎಂಸಿಗೆ ಬಂದಿದ್ದರು. ಕೆಲಸದ ಒತ್ತಡವಿರಲಿ ಅಥವಾ ಆರೋಗ್ಯದ ಸಮಸ್ಯೆಯಿರಲಿ, ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವುದು ದುರದೃಷ್ಟಕರ. ಈ ಘಟನೆ ಸವದತ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Heart Attack – ಕರ್ತವ್ಯನಿರತ ಫಾರೆಸ್ಟ್ ಗಾರ್ಡ್ ನಿಧನ
ಬೆಂಗಳೂರು ದಕ್ಷಿಣ ಜಿಲ್ಲೆ, ಕನಕಪುರ ತಾಲೂಕಿನ ಕೊಗ್ಗೆದೊಡ್ಡಿ ಗ್ರಾಮದ ನಿವಾಸಿ, ಫಾರೆಸ್ಟ್ ಗಾರ್ಡ್ ಮಾದೇಶ್ ನಾಯ್ಕ್ (38) ಕೂಡ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಬುಧವಾರ ಮುಂಜಾನೆ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಸತತವಾಗಿ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದ ಯುವ ಅಧಿಕಾರಿಯ ನಿಧನ ಎಲ್ಲರನ್ನೂ ಆಘಾತಕ್ಕೀಡು ಮಾಡಿದೆ.
Read this also : Heart Attack : ಈ 5 ಪ್ರಮುಖ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ! ನಿಮ್ಮ ಜೀವ ಉಳಿಸಿಕೊಳ್ಳಿ..!
ಒಂದೇ ತಾಲೂಕಿನಲ್ಲಿ ಮೂವರ ಬಲಿ
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಒಂದೇ ದಿನ ಮೂವರು ಹೃದಯಾಘಾತದಿಂದ ಮೃತಪಟ್ಟಿರುವುದು ಆತಂಕವನ್ನು ಹೆಚ್ಚಿಸಿದೆ. ನಾರಾಯಣ ರಾಯ್ಕರ್ (52), ಬಸಪ್ಪ (78) ಮತ್ತು ಬಸಾಪುರ ಗ್ರಾಮದ ಅನ್ನಪೂರ್ಣಮ್ಮ ಚವಡಿ (56) ಮೃತ ದುರ್ದೈವಿಗಳು. ನಾರಾಯಣ ಮತ್ತು ಬಸಪ್ಪ ನವಲಗುಂದ ಪಟ್ಟಣದ ನಿವಾಸಿಗಳಾಗಿದ್ದರೆ, ಅನ್ನಪೂರ್ಣಮ್ಮ ಬಸಾಪುರ ಗ್ರಾಮದವರಾಗಿದ್ದಾರೆ.