ಕರ್ನಾಟಕ ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಸಹ ಒಂದಾಗಿದೆ. ಈ ಯೋಜನೆಯನ್ನು ಅನೇಕ ಮಹಿಳೆಯರು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಯೋಜನೆಯಿಂದ ಒಂದು ಕಡೆ ಅನುಕೂಲವಾದರೇ ಮತ್ತೊಂದು ಕಡೆ ಅನಾನುಕೂಲ ಸಹ ಆಗಿದೆ. ಇದೀಗ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶಕ್ತಿ ಯೋಜನೆಯಡಿ (Shakti Scheme) ಸರ್ಕಾರ ಸಾರಿಗೆ ಇಲಾಖೆಗೆ 1413 ಕೋಟಿ ಬಾಕಿ ಹಣ ಕೊಡಬೇಕು ಎಂದು ವಿಧಾನ ಪರಿಷತ್ ನಲ್ಲಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಪಕ್ಷದ ಭಾರತಿ ಶೆಟ್ಟಿ ಈ ಸಂಬಂಧ ಪ್ರಶ್ನೆ ಕೇಳಿದರು. ಶಕ್ತಿ ಯೋಜನೆಗೆ (Shakti Scheme) ಸರ್ಕಾರ ಬಜೆಟ್ ನಲ್ಲಿ ಹಣ ಇಟ್ಟಿಲ್ಲ. ನಾಲ್ಕು ನಿಗಮಗಳಿಗೆ ಸಾರಿಗೆ ಇಲಾಖೆ 1413 ಕೋಟಿ ಹಣ ಬಾಕಿ ಉಳಿಸಿಕೊಂಡಿದೆ. ಇದರಿಂದ ಸಾರಿಗೆ ಸಂಸ್ಥೆಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಪ್ರಶ್ನೆ ಕೇಳಿದರು. ಈ ಪ್ರಶ್ನೆಗೆ ಸಚಿವ ರಾಮಲಿಂಗಾರೆಡ್ಡಿ ಉತ್ತರಿಸಿದ್ದಾರೆ. ಸರ್ಕಾರದಿಂದ ಸಾರಿಗೆ ಇಲಾಖೆಗೆ (Shakti Scheme) 1,413 ಕೋಟಿ ರೂ. ಶಕ್ತಿ ಹಣ ಬಾಕಿ ಇದೆ. (Shakti Scheme) ಶಕ್ತಿ ಯೋಜನೆ ಪ್ರಾರಂಭದ ಸಮಯದಲ್ಲಿ ಪ್ರತಿನಿತ್ಯ 80 ಲಕ್ಷ ಜನ ಸಂಚಾರ ಮಾಡ್ತಿದ್ದರು. ಈ ಕಾರಣದೀಂದ ಮೊದಲು 3,200 ಕೋಟಿ ರೂ. ಶಕ್ತಿ ಯೋಜನೆಗೆ ಅನುದಾನ ಮೀಸಲಿಡಲಾಗಿತ್ತು. ಶಕ್ತಿ ಯೋಜನೆ ಪ್ರಾರಂಭ ಮಾಡಿದ ನಂತರ 1 ಕೋಟಿ ನಿತ್ಯ ಒಡಾಟ ಆಯ್ತು. ಆದ್ದರಿಂದ ಹಣದ ಹೆಚ್ಚುವರಿಯಾಗಿ ನೀಡಲು ಆಗಿಲ್ಲ. ಬಜೆಟ್ ನಲ್ಲಿ 5,015 ಕೋಟಿ ರೂ. ಇಡಲಾಗಿದೆ. ಸರ್ಕಾರದಿಂದ 1,413.47 ಕೋಟಿ ರೂ. ಬಾಕಿ ಇದೆ.(Shakti Scheme) ಜೊತೆಗೆ ಹಣ ಬಿಡುಗಡೆ ಮಾಡುವಂತೆ ಸಿಎಂ ಅವರಿಗೆ ಮನವಿ ಮಾಡಿದ್ದೇವೆ. ಹಣ ಬಿಡುಗಡೆ ಮಾಡಿದ ಕೂಡಲೇ ನಿಗಮಗಳಿಗೆ ಅನುದಾನ ಬಿಡುಗಡೆ ಮಾಡೋದಾಗಿ ತಿಳಿಸಿದರು.
ಇನ್ನೂ ಹೊಸ ಬಸ್ ಗಳ ಖರೀದಿ ಮಾಡಲು ಸಿಎಂ 600 ಕೋಟಿ ಅನುದಾನ ಕೊಟ್ಟಿದ್ದಾರೆ. ಮೋಟಾರ್ ತೆರಿಗೆ 580 ಕೋಟಿ ರೂ ಸಿಎಂ ರಿಯಾಯಿತಿ ಕೊಟ್ಟಿದ್ದಾರೆ. ಬಿಎಂಟಿಸಿಗೆ ಲಾಭ ಬರ್ತಾ ಇದೆ. ಕಳೆದ 10 ವರ್ಷಗಳಿಂದ ಟಿಕೆಟ್ ದರ ಏರಿಕೆ ಮಾಡಿಲ್ಲ. ಆದ್ದರಿಂದ ಲಾಭ ಬಂದರೂ ಸಹ ಡೀಸೆಲ್ ಸೇರಿದಂತೆ ಇತರೆ ಖರ್ಚುಗಳಿಗೆ ಹಣ ಖರ್ಚಾಗುತ್ತಿದೆ ಎಂದು ತಿಳಿಸಿದರು.