ಗುಡಿಬಂಡೆ: ತಾವು ನೀಡುವಂತಹ ಒಂದು ಯೂನಿಟ್ ರಕ್ತದಿಂದ ಪ್ರಾಣ ಕಳೆದುಕೊಳ್ಳುವ ಹಂತದಲ್ಲಿರುವ ಜೀವ ಉಳಿಸಬಹುದಾಗಿದ್ದು, ಆರೋಗ್ಯವಂತ ಯುವಜನತೆ ರಕ್ತದಾನಕ್ಕೆ ಮುಂದಾಗಬೇಕೆಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪ್ರದೀಪ್ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾರತೀಯ ರೆಡ್ ಕ್ರಾಸ್, ಸಾರ್ವಜನಿಕ ಆಸ್ಪತ್ರೆ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಉರ್ದು ಸಾಹಿತ್ಯ ಪರಿಷತ್, ಜಿಲ್ಲಾ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವೈದ್ಯರ ದಿನಾಚರಣೆ ಹಾಗೂ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ರಕ್ತದಾನವು ಮಹಾದಾನವಾಗಿದ್ದು ಅರ್ಹರು ರಕ್ತವನ್ನು ದಾನ ಮಾಡುವುದರ ಮೂಲಕ ಇನ್ನೊಂದು ಜೀವವನ್ನು ಉಳಿಸಲು ಮುಂದಾಗಬೇಕಾಗಿದೆ. ರಕ್ತವನ್ನು ರೋಗಿಗಳಿಗೆ ಮತ್ತು ಅಪಘಾತಕ್ಕೆ ಈಡಾದವರಿಗೆ ದಾನ ಮಾಡಲು ಮುಂದೆ ಬಂದಲ್ಲಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದಂತಾಗುತ್ತದೆ ರಕ್ತದಾನವು ಮಹಾದಾನವಾಗಿದ್ದು ಅರ್ಹರು ರಕ್ತವನ್ನು ದಾನ ಮಾಡುವುದರ ಮೂಲಕ ಇನ್ನೊಂದು ಜೀವವನ್ನು ಉಳಿಸಲು ಮುಂದಾಗಬೇಕಾಗಿದೆ. ರಕ್ತವನ್ನು ರೋಗಿಗಳಿಗೆ ಮತ್ತು ಅಪಘಾತಕ್ಕೆ ಈಡಾದವರಿಗೆ ದಾನ ಮಾಡಲು ಮುಂದೆ ಬಂದಲ್ಲಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದಂತಾಗುತ್ತದೆ ಎಂದರು.
ಬಳಿಕ ತಾಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ ಮಾತನಾಡಿ, ಗ್ರಾಮಾಂತರ ಯುವಜನತೆಯು ರಕ್ತದಾನ ಶಿಬಿರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಆ ಮೂಲಕ ರಕ್ತದ ಸಮಸ್ಯೆ ಎದುರುಸುತ್ತಿರುವ ರೋಗಿಗಳಿಗಳ ಜೀವದಾನಕ್ಕೆ ನೆರವು ಕಲ್ಪಿಸಲು ಮುಂದಾಗಿ ಮಾನವೀಯತೆ ಮೆರೆಯಬೇಕು. ತಾಲ್ಲೂಕಿನ ಗ್ರಾಮಾಂತರ ಯುವಜನತೆಯು ರಕ್ತದಾನ ಶಿಬಿರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಆ ಮೂಲಕ ರಕ್ತದ ಸಮಸ್ಯೆ ಎದುರುಸುತ್ತಿರುವವರಿಗೆ ರಕ್ತ ನೀಡುವ ಮೂಲಕ ಸಹಕಾರಿಯಾಗಬೇಕೆಂದರು.
Get the Best Price at IndiaMART for: Click here
ಇನ್ನೂ ಶಿಬಿರದಲ್ಲಿ ಒಟ್ಟು 42 ಯೂನಿಟ್ ಗಳ ರಕ್ತವನ್ನು ಸಂಗ್ರಹಿಸಲಾಯಿತು. ಈ ಸಮಯದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಲಾಜಿ, ಉರ್ದು ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ನಾಸೀರ್, ಐಸಿಟಿಸಿ ಕೇಂದ್ರದ ಸುದರ್ಮನ್, ಆರೋಗ್ಯ ಇಲಾಖೆಯ ಸಿಬ್ಬಂದಿ ನಟರಾಜ್ ಸೇರಿದಂತೆ ರೆಡ್ ಕ್ರಾಸ್ ಸಂಸ್ಥೆಯ ಸಿಬ್ಬಂದಿ, ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಹಲವರು ಇದ್ದರು.