ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡುಹಗಲೇ ಸಾರ್ವಜನಿಕ ರಸ್ತೆಯಲ್ಲಿ ಮಹಿಳಾ ಹೋಮ್ ಗಾರ್ಡ್ ಮೇಲೆ ಯುವತಿಯೊಬ್ಬಳು (Young Woman) ಹಲ್ಲೆ ನಡೆಸಿರುವ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಕೆ.ಆರ್. ಪುರಂ ರೈಲ್ವೆ ನಿಲ್ದಾಣದ ಬಳಿ ನಡೆದ ಈ ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Young Woman – ಘಟನೆಯ ಹಿನ್ನೆಲೆ ಏನು?
ಕೆ.ಆರ್. ಪುರಂ ರೈಲ್ವೆ ನಿಲ್ದಾಣದ ಬಳಿ ಲಕ್ಷ್ಮಿ ನರಸಮ್ಮ ಎಂಬ ಮಹಿಳಾ ಹೋಮ್ ಗಾರ್ಡ್ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಮೋಹಿನಿ ಎಂಬ ಯುವತಿ ಆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಮೂಲಗಳ ಪ್ರಕಾರ, ಮೋಹಿನಿ ಅವರು ತೊಟ್ಟಿದ್ದ ಉಡುಪಿನ ವಿಚಾರವಾಗಿ ಅಲ್ಲಿದ್ದ ಕೆಲವು ಕಿಡಿಗೇಡಿ ಯುವಕರು ಚುಡಾಯಿಸುತ್ತಿದ್ದರು (Teasing) ಎನ್ನಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಮುನ್ನೆಚ್ಚರಿಕೆಯಿಂದ, ಕರ್ತವ್ಯದಲ್ಲಿದ್ದ ಲಕ್ಷ್ಮಿ ನರಸಮ್ಮ ಅವರು ಮಧ್ಯಪ್ರವೇಶಿಸಿದ್ದಾರೆ. “ಸುರಕ್ಷತೆಯ ದೃಷ್ಟಿಯಿಂದ” ಎಂದು ಹೇಳುತ್ತಾ ಯುವತಿಗೆ ಉಡುಪಿನ ಬಗ್ಗೆ ಸಮಾಧಾನದಿಂದ ತಿಳಿಹೇಳಲು ಯತ್ನಿಸಿದ್ದಾರೆ. Read this also : ಮಗನಿಗಾಗಿ ಮಿಡಿದ ತಾಯಿ ಹೃದಯ, ಹುತಾತ್ಮ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ವಿಡಿಯೋ ವೈರಲ್..!
ಕೋಪೋದ್ರಿಕ್ತಳಾದ ಯುವತಿ: ಅಸಭ್ಯ ವರ್ತನೆ!
ತನ್ನ ರಕ್ಷಣೆಗೆ ಬಂದ ಹೋಮ್ ಗಾರ್ಡ್ ಮಾತಿನಿಂದ ಕೆರಳಿದ ಮೋಹಿನಿ, ರಸ್ತೆಯಲ್ಲೇ ಹೈಡ್ರಾಮಾ ಸೃಷ್ಟಿಸಿದ್ದಾರೆ. ಸರ್ಕಾರಿ ಕೆಲಸದಲ್ಲಿದ್ದ ಲಕ್ಷ್ಮಿ ನರಸಮ್ಮ ಅವರ ಸೊಂಟ ಹಿಡಿದು ಜಗ್ಗಾಡಿ, ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ರಸ್ತೆಯ ಮಧ್ಯದಲ್ಲೇ ಒಬ್ಬ ಮಹಿಳಾ ಸಿಬ್ಬಂದಿಯನ್ನು ಈ ರೀತಿ ಎಳೆದಾಡುತ್ತಿರುವುದನ್ನು ಕಂಡು ಸಾರ್ವಜನಿಕರು ಸ್ತಬ್ಧರಾಗಿದ್ದಾರೆ. ಘಟನೆಯ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡಲು ಮುಜುಗರ ತರುವಂತಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಪೊಲೀಸರ ಕ್ರಮ: ಆರೋಪಿ ಅರೆಸ್ಟ್
ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೋಹಿನಿ ಎಂಬಾಕೆಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
