Yamini Priya Case – ಯಾವುದೇ ಒಂದು ಪ್ರೀತಿಯ ಸಂಬಂಧದಲ್ಲಿ ಸಮ್ಮತಿ ಅನ್ನೋದು ಬಹಳ ಮುಖ್ಯ. ಆದರೆ, ಕೆಲವರಿಗೆ ‘ಇಲ್ಲ’ ಎಂಬ ಉತ್ತರವನ್ನು ಒಪ್ಪಿಕೊಳ್ಳೋ ಮನಸ್ಸೇ ಇರೋದಿಲ್ಲ. ಅಂತವರ ಕ್ರೂರತೆಗೆ ಬಲಿಯಾದ ಯುವತಿ ಯಾಮಿನಿ ಪ್ರಿಯಾ. ಪ್ರೀತಿ ಒಪ್ಪಲಿಲ್ಲ ಅಂತ ಬರ್ಬರವಾಗಿ ಆಕೆಯ ಕತ್ತು ಕೊಯ್ದಿದ್ದ ‘ಸೈಕೋ ಕಿಲ್ಲಿಂಗ್’ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಕೇವಲ 24 ಗಂಟೆಗಳೊಳಗೆ ಆರೋಪಿ ವಿಘ್ನೇಶ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Yamini Priya Case – ಕಾಲೇಜು ವಿದ್ಯಾರ್ಥಿನಿಯ ಭೀಕರ ಹತ್ಯೆ
ಕಳೆದ ಬುಧವಾರ (ಅಕ್ಟೋಬರ್ 16) ನಡೆದ ಈ ಘಟನೆ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. 20 ವರ್ಷದ ಯಾಮಿನಿ ಪ್ರಿಯಾ ಕಾಲೇಜು ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಳು. ಈ ವೇಳೆ, ಮಂತ್ರಿಮಾಲ್ ಹಿಂಭಾಗದ ರೈಲ್ವೆ ಟ್ರ್ಯಾಕ್ ಬಳಿ ಆಕೆಯನ್ನು ವಿಘ್ನೇಶ್ ಅಡ್ಡಗಟ್ಟಿದ್ದ. ಆರೋಪಿ ವಿಘ್ನೇಶ್ ಮೊದಲಿಗೆ ಯಾಮಿನಿ ಪ್ರಿಯಾಳ ಕಣ್ಣಿಗೆ ಖಾರದಪುಡಿ ಎರಚಿ ಆಕೆಯನ್ನು ನಿತ್ರಾಣಗೊಳಿಸಿದ್ದ. ನಂತರ, ಆಕೆಯ ಕತ್ತು ಕೊಯ್ದು ಸ್ಥಳದಿಂದ ಪರಾರಿಯಾಗಿದ್ದ. ಈ ಭೀಕರ ಕೃತ್ಯ ನಡೆದ ಕೂಡಲೇ ಶ್ರೀರಾಂಪುರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಯುವತಿಯ ಹತ್ಯೆ ಹಿನ್ನೆಲೆಯಲ್ಲಿ ಇಡೀ ನಗರಾದ್ಯಂತ ಪೊಲೀಸರು ವಿಘ್ನೇಶ್‌ನ ಬಂಧನಕ್ಕೆ ಬಲೆ ಬೀಸಿದ್ದರು.
Yamini Priya Case – “ಮಿಷನ್ ಯಾಮಿನಿ ಪ್ರಿಯಾ” – ವಾಟ್ಸಪ್ ಗ್ರೂಪ್‌ನಲ್ಲಿ ಕೊಲೆ ಪ್ಲ್ಯಾನ್!
ಕೊಲೆಗೈದ ಬಳಿಕ ಸೋಲದೇವನಹಳ್ಳಿ ಬಳಿ ಅಡಗಿದ್ದ ವಿಘ್ನೇಶ್, ಅಂತಿಮವಾಗಿ ಗುರುವಾರ (ಅಕ್ಟೋಬರ್ 17) ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪೊಲೀಸರ ವಿಚಾರಣೆ ವೇಳೆ ಆತಂಕಕಾರಿ ವಿಷಯಗಳು ಬೆಳಕಿಗೆ ಬಂದಿವೆ. Read this also : ಫ್ಲೈಯಿಂಗ್ ಕಿಸ್ ಕೊಟ್ಟ ಯುವಕರಿಗೆ ಬಿತ್ತು ಧರ್ಮದೇಟು: ಮಧ್ಯಪ್ರದೇಶದಲ್ಲಿ ರಂಪಾಟ, ವೈರಲ್ ವಿಡಿಯೋ!
ಹತ್ಯೆಗೆ ವಾಟ್ಸಪ್ ಗುಂಪು ರಚನೆ: ಹೇಗೆ ಪ್ಲ್ಯಾನ್ ಮಾಡಿದ?
ಪ್ರಿಯಾಳನ್ನು ಕೊಲೆ ಮಾಡಲು ಆರೋಪಿ ವಿಘ್ನೇಶ್ ಒಂದು ತಿಂಗಳ ಹಿಂದೆಯೇ ಒಂದು ವಾಟ್ಸಪ್ ಗ್ರೂಪ್ ಮಾಡಿದ್ದ! ಈ ಗ್ರೂಪ್‌ಗೆ ಅವನು ‘ಮಿಷನ್ ಯಾಮಿನಿ ಪ್ರಿಯಾ’ ಎಂದು ಹೆಸರಿಟ್ಟಿದ್ದ. ಈ ಗ್ರೂಪ್‌ನಲ್ಲಿ ವಿಘ್ನೇಶ್ ಸೇರಿ ಒಟ್ಟು ನಾಲ್ಕು ಜನರಿದ್ದರು. ಯಾಮಿನಿ ಪ್ರಿಯಾ ಎಲ್ಲೆಲ್ಲಿ ಹೋಗ್ತಾಳೆ, ಯಾರ ಜೊತೆ ಮಾತನಾಡ್ತಾಳೆ ಎಂಬ ಪ್ರತಿ ವಿವರ ಸಂಗ್ರಹಿಸುವುದು ಹಾಗೂ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ ಕೊಲೆಗೆ ನಿಖರವಾದ ಸಂಚು ರೂಪಿಸುವುದು ಈ ಗ್ರೂಪ್ ನ ಉದ್ದೇಶವಾಗಿತ್ತು ಎನ್ನಲಾಗಿದೆ
Yamini Priya Case – ಬಲವಂತವಾಗಿ ತಾಳಿ ಕಟ್ಟಿದ್ದ ಕಥೆ, ದೂರು ನೀಡಿದ್ದ ಪೋಷಕರು!
ಯಾಮಿನಿ ಪ್ರಿಯಾ ಮತ್ತು ವಿಘ್ನೇಶ್ ಒಂದೇ ಏರಿಯಾದವರು. ವಿಘ್ನೇಶ್‌ಗೆ ಆಕೆಯ ಮೇಲೆ ಪ್ರೀತಿ ಇತ್ತಾದರೂ, ಯಾಮಿನಿ ಒಪ್ಪಿರಲಿಲ್ಲ. ಆದರೂ ಆತ ಬಲವಂತ ಮಾಡಿ ಒಂದು ದಿನ ಆಕೆಗೆ ಮಾಂಗಲ್ಯ (ತಾಳಿ) ಕಟ್ಟಿದ್ದನಂತೆ.
ಈ ವಿಷಯವನ್ನು ಮನೆಯಲ್ಲಿ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಹಿಂದೆ ವಿಘ್ನೇಶ್ ಯಾಮಿನಿ ಪ್ರಿಯಾಳನ್ನು ಬಲವಂತ ಮಾಡಿದಾಗ, ಆಕೆಯ ಪೋಷಕರು ಆತನ ವಿರುದ್ಧ ಪೊಲೀಸ್ ದೂರು ಕೂಡ ನೀಡಿದ್ದರು ಎಂಬ ವಿಚಾರ ತನಿಖೆಯಿಂದ ತಿಳಿದುಬಂದಿದೆ. ಪೋಷಕರು ಈ ಸಂಬಂಧವನ್ನು ನಿರಾಕರಿಸಿದ್ದೇ ಕೊಲೆಗೆ ಪ್ರಮುಖ ಕಾರಣವಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ತೋರಿದ ಶೀಘ್ರ ಕಾರ್ಯಚರಣೆಯಿಂದ ಸೈಕೋ ಕಿಲ್ಲರ್ ಬೇಗನೇ ಜೈಲು ಸೇರುವಂತಾಗಿದೆ.