Xiaomi 17 Series – ಹೊಸ ಸ್ಮಾರ್ಟ್ಫೋನ್ ಖರೀದಿಗೆ ಕಾಯುತ್ತಿದ್ದೀರಾ? ಐಫೋನ್ 17 ಹೊರಬಂದ ನಂತರ, ಈಗ ಇಡೀ ಜಗತ್ತು ಮತ್ತೊಂದು ಶಕ್ತಿಶಾಲಿ ಫೋನ್ ಸರಣಿಯತ್ತ ಕಣ್ಣಿಟ್ಟಿದೆ. “ಚೀನಾದ ಆಪಲ್” ಎಂದೇ ಜನಪ್ರಿಯವಾಗಿರುವ Xiaomi, ಐಫೋನ್ 17 ಸರಣಿಗೆ ನೇರ ಪ್ರತಿಸ್ಪರ್ಧಿಯಾಗಿ ತನ್ನ Xiaomi 17 ಸರಣಿಯನ್ನು ಮಾರುಕಟ್ಟೆಗೆ ತರಲು ಸಿದ್ಧವಾಗಿದೆ. ಇದೇ ಸೆಪ್ಟೆಂಬರ್ 30 ರಂದು ಈ ಅದ್ಭುತ ಫೋನ್ಗಳು ಅನಾವರಣಗೊಳ್ಳಲಿವೆ.

Xiaomi 17 Series – ಸೆಪ್ಟೆಂಬರ್ 30 ರಂದು ಅಬ್ಬರ ಶುರು!
ಕಳೆದ ವಾರ, iPhone 17 ಸರಣಿಯ ಕ್ರೇಜ್ ಹೇಗೆ ಇಡೀ ಜಗತ್ತನ್ನು ಆವರಿಸಿಕೊಂಡಿತ್ತು ಎಂದು ನಮಗೆಲ್ಲಾ ಗೊತ್ತೇ ಇದೆ. ಆದರೆ, ಈಗ ಈ ಟೆಕ್ ಜಗತ್ತಿನ ಗಮನವೆಲ್ಲಾ ಹೊಸದಾಗಿ ಬರುವ Xiaomi 17 ಸರಣಿಯ ಮೇಲಿದೆ. ಚೀನಾದಲ್ಲಿ ಈಗಾಗಲೇ ಈ ಪ್ರಮುಖ ಸ್ಮಾರ್ಟ್ಫೋನ್ ಸರಣಿಯ ಪ್ರೀ-ಬುಕಿಂಗ್ ಪ್ರಾರಂಭವಾಗಿದ್ದು, Xiaomi 17 ಜೊತೆಗೆ, Xiaomi 17 Pro ಮತ್ತು Xiaomi 17 Pro Max ಮಾಡೆಲ್ಗಳು ಸಹ ಬಿಡುಗಡೆಯಾಗಲಿವೆ. Read this also : Google Reviews : ಗೂಗಲ್ ವಿಮರ್ಶೆ ಹೆಸರಲ್ಲಿ ಹೊಸ ಸೈಬರ್ ವಂಚನೆ, ರೇಟಿಂಗ್ಗೆ ಹಣದ ಆಮಿಷವೊಡ್ಡಿ ಸೈಬರ್ ವಂಚನೆ..!
ಕ್ಯಾಮರಾ ಮತ್ತು ಬ್ಯಾಟರಿ ವೈಶಿಷ್ಟ್ಯಗಳು
ಶಿಯೋಮಿ 17 ಪ್ರೊ (Xiaomi 17 Pro) 6.3 ಇಂಚಿನ LTPO AMOLED ಡಿಸ್ಪ್ಲೇ ಹೊಂದಿರಲಿದೆ. ಇದರಲ್ಲಿ 100W ವೈರ್ಡ್ ಮತ್ತು 50W ವೈರ್ಲೆಸ್ ಫಾಸ್ಟ್ ಚಾರ್ಜಿಂಗ್ ಜೊತೆಗೆ 6,300mAh ಬ್ಯಾಟರಿ ಇರಲಿದೆ. ಫೋನ್ ಹಿಂಭಾಗದಲ್ಲಿ 50MP ಪ್ರಾಥಮಿಕ ಕ್ಯಾಮರಾ, 50MP ಟೆಲಿಫೋಟೋ ಕ್ಯಾಮರಾ ಮತ್ತು 50MP ಅಲ್ಟ್ರಾ-ವೈಡ್ ಕ್ಯಾಮರಾ ಒಳಗೊಂಡ ಟ್ರಿಪಲ್ ಕ್ಯಾಮರಾ ಸೆಟಪ್ ಇರುತ್ತದೆ. ಶಿಯೋಮಿ 17 (Xiaomi 17) ಮಾಡೆಲ್ 6.3 ಇಂಚಿನ 1.5K LTPO OLED ಡಿಸ್ಪ್ಲೇ ಜೊತೆಗೆ 7,000mAh ಬ್ಯಾಟರಿ ಮತ್ತು 100W ವೈರ್ಡ್, 50W ವೈರ್ಲೆಸ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.

ಮ್ಯಾಜಿಕ್ ಬ್ಯಾಕ್ ಸ್ಕ್ರೀನ್
ಈ ಬಾರಿ Xiaomi ತನ್ನ ಸ್ಮಾರ್ಟ್ಫೋನ್ಗಳಲ್ಲಿ “ಮ್ಯಾಜಿಕ್ ಬ್ಯಾಕ್ ಸ್ಕ್ರೀನ್” ಎಂಬ ವಿಶಿಷ್ಟ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದು ಫೋನ್ನ ಹಿಂಭಾಗದಲ್ಲಿರುವ ಕ್ಯಾಮರಾ ಮಾಡ್ಯೂಲ್ನ ಪಕ್ಕದಲ್ಲಿಯೇ ಎರಡನೇ ಡಿಸ್ಪ್ಲೇ ಆಗಿ ಕಾರ್ಯನಿರ್ವಹಿಸುತ್ತದೆ. ಈ ಪುಟ್ಟ ಸ್ಕ್ರೀನ್ನಲ್ಲಿ ಕರೆ ನೋಟಿಫಿಕೇಷನ್ಗಳು, ಸಂಗೀತದ ನಿಯಂತ್ರಣ ಮತ್ತು ಇತರ ಉಪಯುಕ್ತ ವಿಜೆಟ್ಗಳನ್ನು ನೋಡಬಹುದಾಗಿದೆ. ಇದು ನಿಜಕ್ಕೂ ಒಂದು ಹೊಸತನ ಎಂದೇ ಹೇಳಲಾಗುತ್ತಿದೆ.
