ಸಾಮಾನ್ಯವಾಗಿ ಹಾವು ಎಂದರೆ ಸಾಕು ಅಬಾಲವೃದ್ಧರಾದಿಯಾಗಿ ಎಲ್ಲರೂ ಬೆಚ್ಚಿಬೀಳುತ್ತಾರೆ. ಅದರಲ್ಲೂ ದೈತ್ಯಾಕಾರದ ಕೊಂಡಕುರಿ ಅಥವಾ ಪೈಥಾನ್‌ಗಳನ್ನು ನೋಡಿದರೆ ಮೈ ಜುಂ ಎನ್ನುತ್ತದೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಇದನ್ನು ನೋಡಿದವರು ಇದು ನಿಜಕ್ಕೂ ಹಾವೇ (World Longest Python) ಅಥವಾ ಬೇರೆ ಏನಾದರೂ ಎಂದು ಆಶ್ಚರ್ಯ ಪಡುತ್ತಿದ್ದಾರೆ. ಇಂಡೋನೇಷ್ಯಾದಲ್ಲಿ ವಿಶ್ವದ ಅತಿ ಉದ್ದದ ಕಾಡು ಕೊಂಡಕುರಿ ಪತ್ತೆಯಾಗಿದ್ದು, ಇದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸೇರಿದೆ.

World Longest Python – ಯಾರು ಈ ದೈತ್ಯ ಇಬು ಬಾರನ್?
ಇಂಡೋನೇಷ್ಯಾದ ದಕ್ಷಿಣ ಸುಲವೇಸಿಯ ಮಾರೋಸ್ ಪ್ರದೇಶದಲ್ಲಿ ಈ ಬೃಹತ್ ಹೆಬ್ಬಾವು ಪತ್ತೆಯಾಗಿದೆ. ಈ ಹೆಣ್ಣು ಕೊಂಡಕುರಿಗೆ ಇಬು ಬಾರನ್ ಎಂದು ಹೆಸರಿಡಲಾಗಿದ್ದು, ಪ್ರಸ್ತುತ ಇದು ರಾಡು ಫ್ರಾಂಟಿಯು ಅವರ ಸಂರಕ್ಷಣೆಯಲ್ಲಿದೆ. ಕಳೆದ ಎರಡು ದಶಕಗಳಿಂದ ಬಾಲಿ ಮತ್ತು ಇಂಡೋನೇಷ್ಯಾದ ಅರಣ್ಯಗಳಲ್ಲಿ ಸಂಶೋಧನೆ ಮತ್ತು ಫೋಟೋಗ್ರಫಿ ಮಾಡುತ್ತಿರುವ ಫ್ರಾಂಟಿಯು ಅವರ ಪ್ರಕಾರ, ಇಷ್ಟು ದೊಡ್ಡ ಹಾವನ್ನು ಅವರು ಈ ಹಿಂದೆ ಎಂದೂ ನೋಡಿಲ್ಲವಂತೆ. ಈ ಪೈಥಾನ್ ಒಂದು ದೊಡ್ಡ ಕರುವನ್ನು ಕೂಡ ಸುಲಭವಾಗಿ ನುಂಗಬಲ್ಲ ಶಕ್ತಿ ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಳತೆ ಕೇಳಿದರೆ ನೀವು ಶಾಕ್ ಆಗ್ತೀರಾ!
ಈ ಹಾವಿನ ಉದ್ದ ಮತ್ತು ತೂಕವನ್ನು ಅಳೆಯುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೋ ಮತ್ತು ಫೋಟೋ ಮೂಲಕ ದಾಖಲಿಸಲಾಗಿದೆ. ಪಾವು ತಜ್ಞ ಡಿಯಾಜ್ ನುಗ್ರಾಹ ಮತ್ತು ಫ್ರಾಂಟಿಯು ಅವರು ಜಂಟಿಯಾಗಿ ಜನವರಿ 18 ರಂದು ಈ ಹಾವನ್ನು ಅಳೆದಾಗ ಅಚ್ಚರಿಯ ಫಲಿತಾಂಶ ಬಂದಿದೆ. ತಲೆಯಿಂದ ಬಾಲದವರೆಗೆ ಅಳೆದಾಗ ಇದು 23 ಅಡಿ 8 ಇಂಚು(World Longest Python) ಉದ್ದ ಇರುವುದು ದೃಢಪಟ್ಟಿದೆ. ಇದರ ತೂಕ ಬರೋಬ್ಬರಿ 96 ಕೆಜಿ ಇರುವುದು ವಿಶೇಷ. ಇದು ಖಾಲಿ ಹೊಟ್ಟೆಯಲ್ಲಿದ್ದಾಗ ಮಾಡಿದ ಅಳತೆಯಾಗಿದ್ದು, ಹೊಟ್ಟೆ ತುಂಬಿದ್ದಾಗ ಇದರ ಭಾರ ಇನ್ನೂ ಹೆಚ್ಚಿರುತ್ತದೆ. Read this also : ಪ್ರಾಣದ ಮೇಲೆ ಆಸೆ ಇಲ್ವಾ? ಚಲಿಸುತ್ತಿರುವ ರೈಲಿನಿಂದ ಹಾರಿದ ಜೋಡಿ: ಮುಂದೆ ಏನಾಯ್ತು ಗೊತ್ತಾ?
ಅಳತೆಯ ಹಿಂದಿರುವ ಅಸಲಿ ರಹಸ್ಯ
ಹಾವಿನ ಉದ್ದದ ಬಗ್ಗೆ ವಿವರಿಸುತ್ತಾ ಫ್ರಾಂಟಿಯು ಒಂದು ಮುಖ್ಯ ವಿಷಯವನ್ನು ಹಂಚಿಕೊಂಡಿದ್ದಾರೆ. ಹಾವಿಗೆ ಯಾವುದೇ ಅರಿವಳಿಕೆ ಅಥವಾ ಮದ್ದು ನೀಡದೆ ಈ ಅಳತೆ ಮಾಡಲಾಗಿದೆ. ಸಾಮಾನ್ಯವಾಗಿ ಹಾವುಗಳಿಗೆ ಮದ್ದು ನೀಡಿದಾಗ ಅವುಗಳ ಸ್ನಾಯುಗಳು ಸಂಪೂರ್ಣವಾಗಿ ಸಡಿಲಗೊಂಡು ವಿಶ್ರಾಂತಿ ಸ್ಥಿತಿಗೆ ತಲುಪುತ್ತವೆ. ಅಂತಹ ಸಮಯದಲ್ಲಿ ಅಳೆದರೆ ಈ ಹಾವಿನ ಉದ್ದವು (World Longest Python) ಈಗ ಇರುವುದಕ್ಕಿಂತ ಇನ್ನೂ 10 ರಿಂದ 15 ಪ್ರತಿಶತದಷ್ಟು ಹೆಚ್ಚು ಇರುತ್ತಿತ್ತು ಎಂದು ಅವರು ಹೇಳಿದ್ದಾರೆ. ಅಂದರೆ ಈ ಹಾವು ಇನ್ನೂ ಉದ್ದವಾಗಿ ಕಾಣುವ ಸಾಧ್ಯತೆ ಇತ್ತು.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಕೊಂಡಕುರಿಗಳ ಬೇಟೆಯ ವಿಶಿಷ್ಟ ಶೈಲಿ
ನಮಗೆಲ್ಲ ತಿಳಿದಿರುವಂತೆ ಕೊಂಡಕುರಿಗಳು ವಿಷಪೂರಿತ (World Longest Python) ಹಾವುಗಳಲ್ಲ. ಆದರೆ ಇವುಗಳ ಶಕ್ತಿ ಇರುವುದು ಅವುಗಳ ಬಿಗಿಯಾದ ಹಿಡಿತದಲ್ಲಿ. ಇವುಗಳು ಬೇಟೆಯನ್ನು ಅರಸಿ ಹೋಗುವ ಬದಲು ಬೇಟೆ ತನ್ನ ಹತ್ತಿರ ಬರುವವರೆಗೂ ತಾಳ್ಮೆಯಿಂದ ಕಾಯುತ್ತವೆ. ಒಮ್ಮೆ ಪ್ರಾಣಿ ಹತ್ತಿರ ಬಂದ ಕೂಡಲೇ ತನ್ನ ಚೂಪಾದ ಮತ್ತು ವಕ್ರವಾದ ಹಲ್ಲುಗಳಿಂದ ಕಚ್ಚಿ ಹಿಡಿದು, ತನ್ನ ಇಡೀ ದೇಹವನ್ನು ಬೇಟೆಯ ಸುತ್ತಲೂ ಬಿಗಿಯಾಗಿ ಸುತ್ತಿಕೊಳ್ಳುತ್ತವೆ. ಬೇಟೆಯು ಉಸಿರುಗಟ್ಟಿ ಸತ್ತ ನಂತರ ತನ್ನ ಅನುಕೂಲಕ್ಕೆ ತಕ್ಕಂತೆ ದವಡೆಗಳನ್ನು ಅಗಲಿಸಿ ಇಡೀ ಪ್ರಾಣಿಯನ್ನು ನುಂಗಿ ಹಾಕುತ್ತವೆ.
