Dowry Harassment – ಉತ್ತರ ಪ್ರದೇಶದ ಕಾನ್ಪುರದಲ್ಲಿ ವರದಕ್ಷಿಣೆಗಾಗಿ ಮಹಿಳೆಯೊಬ್ಬರನ್ನು ಕೊಲೆ ಮಾಡಲು ಯತ್ನಿಸಿದ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಅತ್ತೆ-ಮಾವ ಮತ್ತು ಪತಿ ಸೇರಿ ರೂ. 5 ಲಕ್ಷ ವರದಕ್ಷಿಣೆ ತರುವಂತೆ ಪೀಡಿಸಿ, ಹಣ ನೀಡದ ಕಾರಣ ಆಕೆಯನ್ನು ಕೊಠಡಿಯಲ್ಲಿ ಕೂಡಿ ಹಾಕಿ, ಪೈಪ್ ಮೂಲಕ ಹಾವು ಬಿಟ್ಟು ಕಚ್ಚಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ.

Dowry Harassment – ಘಟನೆಯ ವಿವರಗಳು ಹೀಗಿವೆ
2021ರಲ್ಲಿ ಶಾನವಾಜ್ ಎಂಬ ಯುವಕನೊಂದಿಗೆ ಮದುವೆಯಾಗಿದ್ದ ರೇಷ್ಮಾ ಎಂಬ ಮಹಿಳೆಗೆ, ವಿವಾಹದ ನಂತರ ಹೆಚ್ಚುವರಿ ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು. ಹೇಗೋ ಕುಟುಂಬದವರು ಕಷ್ಟಪಟ್ಟು 1.5 ಲಕ್ಷ ರೂಪಾಯಿ ಕೊಟ್ಟಿದ್ದರೂ, ಅತ್ತೆ-ಮಾವ ಮತ್ತೊಂದು 5 ಲಕ್ಷ ರೂ. ಬೇಕೆಂದು ಪಟ್ಟು ಹಿಡಿದಿದ್ದರು. ಇದಕ್ಕೆ ರೇಷ್ಮಾ ನಿರಾಕರಿಸಿದಾಗ, ಆಕೆಯನ್ನು ಕೊಲೆ ಮಾಡಲು ಕುಟುಂಬಸ್ಥರು ಕ್ರೂರ ಯೋಜನೆ ರೂಪಿಸಿದರು.
Dowry Harassment – ಪ್ರಾಣಾಪಾಯದಿಂದ ಪಾರಾದ ರೇಷ್ಮಾ
ರೇಷ್ಮಾಳನ್ನು ಒಂದು ಕೊಠಡಿಯಲ್ಲಿ ಕೂಡಿಹಾಕಿ, ಆ ಕೋಣೆಗೆ ಪೈಪ್ ಮೂಲಕ ಹಾವು ಬಿಟ್ಟಿದ್ದಾರೆ. ಹಾವು ರೇಷ್ಮಾಳ ಕಾಲಿಗೆ ಕಚ್ಚಿದೆ. ನೋವಿನಿಂದ ಆಕೆ ಬಾಗಿಲು ತೆರೆಯಲು ಬೇಡಿಕೊಂಡರೂ ಯಾರೂ ಸ್ಪಂದಿಸಿಲ್ಲ. ಅದೃಷ್ಟವಶಾತ್, ಕೋಣೆಯಲ್ಲಿದ್ದ ಫೋನ್‌ನಿಂದ ರೇಷ್ಮಾ ತನ್ನ ಸಹೋದರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಕೂಡಲೇ ಸ್ಥಳಕ್ಕೆ ಬಂದ ಸಹೋದರಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ರೇಷ್ಮಾಗೆ ಸೂಕ್ತ ಚಿಕಿತ್ಸೆ ಮುಂದುವರಿದಿದ್ದು, ವೈದ್ಯರು ಪ್ರಾಣಾಪಾಯವಿಲ್ಲ ಎಂದು ಹೇಳಿದ್ದಾರೆ. Read this also : ವರದಕ್ಷಿಣೆಗಾಗಿ ಆಸಿಡ್ ಕುಡಿಸಿ ಹತ್ಯೆ: ಅತ್ತೆ, ಮಾವನ ಕೃತ್ಯಕ್ಕೆ ಬಲಿಯಾದ ನವವಿವಾಹಿತೆ…!
Dowry Harassment – ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯ
ಈ ಘಟನೆ ಕುರಿತು ರೇಷ್ಮಾ ಕುಟುಂಬವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ವರದಕ್ಷಿಣೆಗಾಗಿ ತಮ್ಮ ಮಗಳನ್ನು ಕೊಲ್ಲಲು ಪ್ರಯತ್ನಿಸಿದವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಘಟನೆಯು ಮತ್ತೊಮ್ಮೆ, ವರದಕ್ಷಿಣೆ ಎಂಬ ಕ್ರೂರ ಪದ್ಧತಿಯಿಂದಾಗಿ ಯಾವ ಮಟ್ಟದ ದೌರ್ಜನ್ಯಗಳು ನಡೆಯಬಹುದು ಎಂಬುದನ್ನು ತೋರಿಸುತ್ತದೆ.

