Friday, November 22, 2024

Divorce : ಡಿವೋರ್ಸ್ ಕೊಡೋಕೆ ಇದು ಕಾರಣವಂತೆ, ವೈರಲ್ ಆದ ಡಿವೋರ್ಸ್ ಸುದ್ದಿ, ಡಿವೋರ್ಸ್ ಗೆ ಕಾರಣ ಏನು ಗೊತ್ತಾ?

ಇಂದಿನ ಕಾಲದಲ್ಲಿ ಮದುವೆ ಮಾಡೋದು ತುಂಭಾನೆ ಕಷ್ಟ ಎನ್ನಬಹುದು. ಅನೇಕ ಮದುವೆಗಳು ಇಷ್ಟವಿಲ್ಲದೆ ನಡೆಯುತ್ತವೆ ಎನ್ನಬಹುದು. ಮದುವೆಯಾದ ಕೆಲವೇ ದಿನಗಳಲ್ಲಿ ಡಿವೋರ್ಸ್ ಪಡೆದುಕೊಂಡ ಅನೇಕ ಕಥೆಗಳನ್ನು ಕೇಳಿರುತ್ತೇವೆ. ಆದರೆ ಇಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದೆ. ಈ ಸುದ್ದಿಯನ್ನು ಕೇಳಿದ್ರೇ ನಿಮಗೂ ಶಾಕ್ ಆಗಬಹುದು. ಉತ್ತರಪ್ರದೇಶದ ಜೋಡಿಯೊಂದು ಡಿವೋರ್ಸ್ (Divorce) ಪಡೆದುಕೊಳ್ಳಲು ಮುಂದಾಗಿದ್ದು, ಅವರು ವಿಚ್ಚೇದನ ಪಡೆದುಕೊಳ್ಳಲು ಕಾರಣವಾದ ವಿಚಾರ ಮಾತ್ರ ಶಾಕಿಂಗ್ ಎಂದೇ ಹೇಳಬಹುದು. ಈ ಸುದ್ದಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ.

ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳು, ರಾಜಕೀಯ ವ್ಯಕ್ತಿಗಳ ಮದುವೆಗಳು, ವಿಚ್ಚೇದನಗಳು ಭಾರಿ ಸುದ್ದಿಯಾಗುತ್ತಿರುತ್ತವೆ. ಆದರೆ ಇಲ್ಲಿ ಸಾಮಾನ್ಯ ಜೋಡಿಯ ವಿಚ್ಚೇದನ ಸುದ್ದಿಯೊಂದು ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಆಗ್ರಾ ಮೂಲದ ಮಹಿಳೆಯೊಬ್ಬರು ತಾನು ಮದುವೆಯಾದ 40 ದಿನಗಳ ಬಳಿಕ ಪತಿಗೆ ವಿಚ್ಚೇದನ ನೀಡಲು ಮುಂದಾಗಿದ್ದಾರೆ. ಇದಕ್ಕೆ ಕಾರಣ ಏನು ಅಂತಾ ಗೊತ್ತಾದ್ರೇ ನೀವು ಶಾಕ್ ಆಗುತ್ತೀರಾ. ತನ್ನ ಪತಿ ತಿಂಗಳಿಗೆ ಹೆಚ್ಚು ಅಂದ್ರೇ ಎರಡು ಬಾರಿ ಸ್ನಾನ ಮಾಡುತ್ತಾರೆ ಎಂದು ಈ ಮಹಿಳೆ ದೂರು ನೀಡಿದ್ದಾರೆ. ತನ್ನ ಪತಿ ಸರಿಯಾಗಿ ಸ್ನಾನ ಮಾಡದೇ ಇರುವ ಕಾರಣದಿಂದ ಪ್ರತಿನಿತ್ಯ ದುರ್ನಾತ ಬರುತ್ತಿದ್ದ ಹಿನ್ನೆಲೆಯಲ್ಲಿ ಆಕೆ ವಿಚ್ಚೇದನ ನೀಡಲು ಮುಂದಾಗಿದ್ದಾಳೆ ಎಂದು ಸುದ್ದಿಯಾಗಿದೆ. ಇನ್ನೂ ಈ ಕುರಿತು ಇಂಡಿಯಾ ಟುಡೇ ವರದಿಮಾಡಿದೆ.

Divorce for husband no bath 0

ಕೆಲವೊಂದು ಮೂಲಗಳ ಪ್ರಕಾರ ತನ್ನ ಗಂಡ ಸರಿಯಾಗಿ ಸ್ನಾನ ಮಾಡದ ಕಾರಣದಿಂದ ಪತ್ನಿ ವಿಚ್ಚೇದನಕ್ಕೆ ಮುಂದಾಗಿದ್ದಾಳೆ. ಶುದ್ದಿಕರಣಕ್ಕಾಗಿ ಪತಿ ವಾರಕ್ಕೊಮ್ಮೆ ಗಂಗಾಜಲವನ್ನು ದೇಹಲ ಮೇಲೆ ಸಿಂಪಡಿಸುತ್ತಾರೆ. ಆದರೂ ತಾನು ಮದುವೆಯಾದ ಬಳಿಕ ಅಂದರೇ 40 ದಿನಗಳಲ್ಲಿ ಆರು ಬಾರಿ ಮಾತ್ರ ಸ್ನಾನ ಮಾಡಿದ್ದಾನೆ ಎಂದು ಪತಿಯೇ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಇನ್ನೂ ಈ ಸಂಬಂಧ ದಂಪತಿಯ ನಡುವೆ ಮನಸ್ತಾಪಗಳೂ ಸಹ ಉಂಟಾಗಿದ್ದರೂ, ಮಹಿಳೆ ಅನೇಕ ಬಾರಿ ಸ್ವಚ್ಚತೆಯಿಂದ ಇರಲು ಹೇಳಿದ್ದಳಂತೆ. ಆದರೆ ರಾಜೇಶ್ ತನ್ನ ವರಸೆ ಬದಲಿಸದ ಕಾರಣ ಆಕೆ ಪತಿಯನ್ನು ಬಿಟ್ಟು ಹೆತ್ತವರ ಮನೆಗೆ ಹೋಗಿದ್ದಳಂತೆ. ಮಹಿಳೆಯರ ಪೋಷಕರು ವರದಕ್ಷಿಣೆ ಕಿರುಕುಳ ದೂರನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.

ಈ ಪ್ರಕರಣ ಆಗ್ರಾದ ಕೌಟುಂಬಿಕ ಸಲಹಾ ಕೇಂದ್ರಕ್ಕೆ ಹೋಗಿದೆ. ಪೊಲೀಸರು ಹಾಗೂ ಆಪ್ತ ಸಮಾಲೋಚಕರ ಮಧ್ಯಸ್ಥಿಕೆಗೆ ಪತಿ ಸಕರಾತ್ಮಕವಾಗಿ ಸ್ಪಂಧಿಸಿದ್ದಾರಂತೆ. ಜೊತೆಗೆ ತನ್ನ ಅಭ್ಯಾಸ ಬದಲಿಸಿಕೊಂಡು ಪ್ರತಿನಿತ್ಯ ಸ್ನಾನ ಮಾಡುವ ಭರವಸೆಯನ್ನೂ ಸಹ ನೀಡಿದ್ದಾರೆ ಎನ್ನಲಾಗಿದೆ. ಆದರೆ ಪತ್ನಿ ವಿಚ್ಚೇದನ ಬಯಸಿದ್ದು, ತಮ್ಮ ಸಂಬಂಧ ಮುಂದುವರೆಸಲು ಸಿದ್ದವಾಗಿರಲಿಲ್ಲವಂತೆ. ಸೆ.22 ರಂದು ಮತ್ತೆ ಸಮಾಲೋಚನೆಗೆ ಬರುವಂತೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ದಂಪತಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಸಂತೋಷದಿಂದ ಜೀವನ ಸಾಗಿಸಲಿ ಎಂಬುದು ಅನೇಕರ ಆಶಯವಾಗಿದೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!